ಇವರು ಕ್ರಿಕೆಟಿಗರು ಮಾತ್ರವಲ್ಲ ಸರ್ಕಾರಿ ನೌಕರಿಯನ್ನೂ ನಿಭಾಯಿಸುತ್ತಿರುವ ಆಟಗಾರರು: ಯಾರ್ಯಾರು ಆಟಗಾರರು ಗೊತ್ತಾ?

ಕ್ರಿಕೆಟ್ ಅಂದ್ರೆ ದೇಶದಲ್ಲಿ ತುಂಬಾನೇ ದೊಡ್ಡ ಕ್ರೇಜ್ ಇದೆ. ಅದರಲ್ಲೂ ಇತ್ತೀಚಿಗೆ ಐಪಿಎಲ್ ಅಂತೂ ಜನರಿಗೆ ಹುಚ್ಚು ಹಿಡಿಸಿದೆ ಐಪಿಎಲ್ ಕ್ರಿಕೆಟ್ ನೋಡುವುದು ಮಾತ್ರವಲ್ಲ ಅದರಲ್ಲಿ ಬೆಡ್ಡಿಂಗ್ ಗಳು ಕೂಡ ಸಿಕ್ಕಾಪಟ್ಟೆ ಚಾಲ್ತಿಯಲ್ಲಿವೆ. ಇನ್ನು ಕ್ರಿಕೆಟ್ ಆಟಗಾರರಿಗೆ ಸಿನಿಮಾ ತಾರೆಯರಿಗಿಂತಲೂ ಒಂದು ಪಟ್ಟು ಹೆಚ್ಚು ಎನ್ನುವಷ್ಟು ಅಭಿಮಾನಿಗಳು ಇರುತ್ತಾರೆ ಅವರ ಆಟದ ಶೈಲಿ ಜನರನ್ನ ತುಂಬಾನೆ ಆಕರ್ಷಿಸುತ್ತೆ. ಅದರಲ್ಲೂ ಎಂ ಎಸ್ ಧೋನಿ ಅವರ ಹೆಲಿಕ್ಯಾಪ್ಟರ್ ಶಾಟ್ ಗಳಿಗೆ ಫಿದಾ ಆಗದೆ ಇರುವರೆ ಇಲ್ಲ.

ಹೀಗೆ ಸದಾ ಕ್ರಿಕೆಟ್ ನಲ್ಲಿ ನಮ್ಮನ್ನ ರಂಜಿಸುತ್ತಾ ಇರುವ ಆಟಗಾರರು ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು ಆದರೆ ಇವರುಗಳು ಭಾರತ ಸರ್ಕಾರದ ಗೌರವಾನ್ವಿತ ಹುದ್ದೆಯಲ್ಲಿಯೂ ಕೂಡ ಇದ್ದಾರೆ ಅನ್ನೋದು ನಿಮಗೆ ಗೊತ್ತಾ? ಹಾಗಾದ್ರೆ ಬನ್ನಿ ಭಾರತೀಯ ಕ್ರಿಕೆಟ್ಗರು ಸರ್ಕಾರದ ಸೇವೆಯಲ್ಲಿಯೂ ತೊಡಗಿಕೊಂಡಿರುವ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ಕೊಡುತ್ತೇವೆ.

ಎಂ ಎಸ್ ಧೋನಿ. ಕ್ರಿಕೆಟ್ ಪ್ರೇಮಿಗಳಿಗೆ ಎಂಎಸ್ ಧೋನಿ ಅಂದ್ರೆ ತುಂಬಾನೇ ಅಚ್ಚುಮೆಚ್ಚು ಅವರ ಆಟದ ಸ್ಟೈಲ್, ನಾಯಕತ್ವ ಗುಣ. ಅಲ್ಲದೆ ಟೀಮ್ ಇಂಡಿಯಾ ಕೈಯಲ್ಲಿ ವಿಜಯದ ಕಪ್ ಹಿಡಿಸಿದ ಅದ್ಭುತ ನಾಯಕ ಮತ್ತು ಆಟಗಾರ ಎಂಎಸ್ ಧೋನಿ. ಧೋನಿ ಈಗ ಎಲ್ಲಾ ಮ್ಯಾಚ್ಗಳನ್ನು ಆಡುವುದಿಲ್ಲ. ಅಂದ ಹಾಗೆ ಧೋನಿ ಕ್ರಿಕೆಟಿಗ ಮಾತ್ರ ಅಲ್ಲ ಅವರು ಭಾರತ ಸರ್ಕಾರದ ಒಂದು ಗೌರವಾನ್ವಿತ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸಿದವರು 2011ರಲ್ಲಿ ಧೋನಿಯವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಗಿದೆ. ಹಾಗೆ 200 ಉದಯೋನ್ಮುಖ ಕ್ರಿಕೆಟ ಆಟಗಾರ ಕೆಎಲ್ ರಾಹುಲ್. ಇವರು ಅತ್ಯುತ್ತಮ ಬ್ಯಾಟ್ಸ್ಮನ್ ಅನ್ನೋದು ಎಲ್ಲರಿಗೂ ಗೊತ್ತು. ಇವರು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಪ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ.

ಇವರು ಕ್ರಿಕೆಟಿಗರು ಮಾತ್ರವಲ್ಲ ಸರ್ಕಾರಿ ನೌಕರಿಯನ್ನೂ ನಿಭಾಯಿಸುತ್ತಿರುವ ಆಟಗಾರರು: ಯಾರ್ಯಾರು ಆಟಗಾರರು ಗೊತ್ತಾ? https://sihikahinews.com/amp/famous-indian-cricket-players-who-hold-government-jobs/

ಇನ್ನು ಮಾಜಿ ಆಟಗಾರ ಕಪಿಲ್ ದೇವ್. ಹಲವರಿಗೆ ಕ್ರಿಕೆಟನ್ನು ಕಲಿಸಿದ ಅದ್ಭುತ ಆಟಗಾರ ವಿಶ್ವಕಪ್ ತಂದುಕೊಟ್ಟ ಅತ್ಯದ್ಭುತ ನಾಯಕ. ಇಂದಿಗೂ ಹಲವರಿಗೆ ಕಪಿಲ್ ದೇವ್ ಅವರೇ ಕ್ರಿಕೆಟ್ ಗುರು. ಇನ್ನು ಕಪಿಲ್ ದೇವ್ ಅವರು ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. 2008ರಲ್ಲಿ ಕಪಿಲ್ ದೇವ್ ಅವರಿಗೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಸ್ಥಾನವನ್ನು ನೀಡಲಾಗಿತ್ತು. ಭಾರತೀಯ ಕ್ರಿಕೆಟ್ ತಂಡದಲ್ಲಿ ಇಂದು ಅತ್ಯುತ್ತಮ ಬೌಲರ್ ಅಂತ ಕರೆಸಿಕೊಳ್ಳುತ್ತಾರೆ ಚಾಹಲ್. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಚಹಾಲ್ ಅವರ ಬೌಲಿಂಗ ಸ್ಟೈಲ್ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಅದರ ಜೊತೆಗೆ ದೇಶದ ಆದಾಯ ತೆರಿಗೆ ಇಲಾಖೆಯಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿಯೂ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ ಚಾಹಲ್.

ಇನ್ನು ಕ್ರಿಕೆಟ್ ನಲ್ಲಿ ಈ ಹೆಸರು ಅತ್ಯಂತ ಜನಪ್ರಿಯ ಇವರು ತಮ್ಮ ವಿಶೇಷವಾದ ಬೌಲಿಂಗ್ ಬ್ಯಾಟಿಂಗ್ ಹಾಗೂ ಸ್ಟೈಲಿನಿಂದಾಗಿ ಹೆಸರು ಮಾಡಿದ್ದಾರೆ ಅವರೇ ಹರ್ಭಜನ್ ಸಿಂಗ್. ಪಂಜಾಬ್ ಸರ್ಕಾರದಲ್ಲಿ ಡಿ ಎಸ್ ಪಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇನ್ನು 2007ರಲ್ಲಿ ಟ್ವೆಂಟಿ ಟ್ವೆಂಟಿ ವರ್ಲ್ಡ್ ಕಪ್ ತಂಡದಲ್ಲಿದ್ದ ಜೋಗೇಂದ್ರ ಸಿಂಗ್ ಶರ್ಮ ಕೂಡ ಭಾರತದ ಗೆಲುವಿಗೆ ತಮ್ಮ ಕೊಡುಗೆಯನ್ನು ನೀಡಿತು ಮಾತ್ರವಲ್ಲದೆ ಇದೀಗ ಹರಿಯಾಣದ ಸರ್ಕಾರದಿಂದ ಉಪಪ ಪೊಲೀಸ್ ವರಿಷ್ಠಾಧಿಕಾರಿಯ ಹುದ್ದೆಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕನ್ನಡಿಗರಾದ ಕ್ರಿಕೆಟರ್ ವಿನಯ್ ಕುಮಾರ್ ಅವರು ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಸ್ನೇಹಿತರೆ ಕ್ರಿಕೆಟಿಗರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ.

Comments (0)
Add Comment