Film News: ಈ ಪುಟ್ಟ ಬಾಲಕಿ ಇಂದು ದೇಶವನ್ನೇ ಗಡ ಗಡ ಅಲ್ಲಾಡಿಸುವಂತಹ ನಟಿ ಯಾರು ಗೊತ್ತೇ?? ಗೊತ್ತಾಗಿಲ್ಲ ಎಂದರೆ ನಾವು ತಿಳಿಸುತ್ತೇವೆ!

Film News: ಈ ಫೋಟೋದಲ್ಲಿ ಕಾಣುತ್ತಿರುವ ಪುಟ್ಟ ಮಗು ಇಂದು ದೊಡ್ಡ ಹೀರೋಯಿನ್ (Heroine), ಈಕೆ ತಮ್ಮ ಸೌಂದರ್ಯ (Beauty) ದಿಂದ ಎಲ್ಲಾ ಹುಡುಗರ ಹೃದಯ ಕದ್ದವರು. ನಟಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸ್ಟಾರ್ ನಟಿ (Star Actress) ಯಾಗಿ ಹೆಸರು ಪಡೆದು, ಅಭಿಮಾನಿಗಳ ಪೈಕಿ ದೊಡ್ಡ ಮಟ್ಟದಲ್ಲಿ ಕ್ರೇಜ್ (Craze)  ಗಳಿಸಿದರು. ಇವರ ಇತ್ತೀಚಿನ ಸಿನಿಮಾಗಳು ಅಂದುಕೊಂಡ ಹಾಗೆ ದೊಡ್ಡ ಹಿಟ್ ಆಗಲಿಲ್ಲ, ಆದರೆ ತಮ್ಮ ನಟನೆಯಿಂದ ಎಲ್ಲರನ್ನು ಆಕರ್ಷಿಸಿದ್ದಾರೆ. ಸೀರೆಯಿಂದ ಬಿಕಿನಿವರೆಗೂ ಎಲ್ಲಾ ರೀತಿಯ ಡ್ರೆಸ್ ಗಳಲ್ಲೂ ಬಹಳ ಸುಂದರವಾಗಿ ಕಾಣುತ್ತಾರೆ. ಇವರಿಗೆ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಕ್ರೇಜ್ ಇದೆ, ಈಗಲೂ ಹೀರೋಯಿನ್ ಆಗಿಯೇ ಸಿನಿಮಾ ಮಾಡುತ್ತಿದ್ದಾರೆ. ಈ ನಟಿ ಯಾರು ಗೊತ್ತಾ?

ಈ ಮುದ್ದು ಹುಡುಗಿ ಯಾರು ಎಂದು ನಿಮಗೆ ಗೊತ್ತಾಗದೆ ಹೋದರೆ, ನಾವೇ ನಿಮಗೆ ತಿಳಿಸುತ್ತೇವೆ. ಆಕೆ ಮತ್ಯಾರು ಅಲ್ಲ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕನ್ನಡದ ಹುಡುಗಿ ನಟಿ ಅನುಷ್ಕಾ ಶೆಟ್ಟಿ. ತಮ್ಮ ಅಣ್ಣನ ಜೊತೆಯಲ್ಲಿ ನಗುತ್ತಾ ನಿಂತಿದ್ದಾರೆ. ನಾಗಾರ್ಜುನ ಅವರ ಸೂಪರ್ ಸಿನಿಮಾ ಮೂಲಕ ಇವರು ಹೀರೋಯಿನ್ ಆಗಿ ಕೆರಿಯರ್ ಶುರು ಮಾಡಿದರು. ಇವರು ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ತೆರೆಹಂಚಿಕೊಂಡಿದ್ದಾಈ. ಅರುಂಧತಿ ಸಿನಿಮಾ ಮೂಲಕ ಸ್ಟಾರ್ ಸ್ಟೇಟಸ್ ಪಡೆದುಕೊಂಡರು ಅನುಷ್ಕಾ. ಅಂದಿನಿಂದ ಇವರು ಹಿಂದಿರುಗಿ ನೋಡಿದ್ದೇ ಇಲ್ಲ, ಬರೋಬ್ಬರಿ 47 ಸಿನಿಮಾಗಳಲ್ಲಿ ಹೀರೋಯಿನ್ ಆಗು ನಟಿಸಿರುವ ಅನುಷ್ಕಾ ಅವರು ಯುವ ಹೀರೋ ನವೀನ್ ಪೋಲಿಶೆಟ್ಟಿ ಅವೆರೊಡನೆ ಸಿನಿಮಾ ಮಾಡಿದ್ದಾರೆ.

ನಟ ಪ್ರಭಾಸ್ ಅವರೊಡನೆ ಬಲ್ಲಾ, ಮಿರ್ಚಿ ಹಾಗೂ ಬಾಹುಬಲಿ 1, ಬಾಹುಬಲಿ2 ಸಿನಿಮಾದಲ್ಲಿ ನಟಿಸಿದರು, ಇವರಿಬ್ಬರ ನಡುವೆ ಏನೋ ಇದೆ ಎಂದೇ ಎಲ್ಲರೂ ಅಂದುಕೊಂಡಿದ್ದರು, ಆದರೆ ಇವರಿಬ್ಬರು ಒಳ್ಳೆಯ ಫ್ರೆಂಡ್ಸ್ ಮಾತ್ರ. ಇಬ್ಬರು ಇನ್ನು ಮದುವೆಯಾಗಿಲ್ಲ. ಅನುಷ್ಕಾ ಅವರು ಸೈಜ್ ಜೀರೋ ಸಿನಿಮಾಗಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು, ಅದರಿಂದ ಈಗಲೂ ಸಮಸ್ಯೆ ಅನುಭವಿಸುತ್ತಿದ್ದಾರೆ.  ಇತ್ತೀಚೆಗೆ ಇವರು ಸ್ವಲ್ಪ ದಪ್ಪ ಆಗಿರುವ ಫೋಟೋಗಳು ವೈರಲ್ ಆಗಿದೆ. ಮತ್ತೊಂದು ಕಡೆ ಇವರ ಚೈಲ್ಡ್ ಹುಡ್ ಫೋಟೋಗಳು ಕೂಡ ವೈರಲ್ ಆಗಿದೆ. ಹೀಗೆ ಅನುಷ್ಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ.

Anushka shettyFilm News