Film News: ಇಲ್ಲೇ ಇಲ್ಲ ಅವಳೇ ಬೇಕು: ನಟಿಯಾಗಿ ಅವಳೇ ಬೇಕೇ ಬೇಕು ಎಂದು ಪಟ್ಟು ಹಿಡಿದು ಕುಳಿತ ಎನ್ಟಿಆರ್. ಯಾರು ಬೇಕಂತೆ ಗೊತ್ತೇ??

Film News: ಆರ್.ಆರ್.ಆರ್ ನಂತರ ನಟ ಜ್ಯೂನಿಯರ್ ಎನ್ಟಿಆರ್ ಅವರು ಕೊರಟಾಲ ಶಿವ ಅವರೊಡನೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ರಿವೀಲ್ ಆಗಿದ್ದು, ಸಿನಿಮಾ ಮುಹೂರ್ತ ಈ ತಿಂಗಳು ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ನಡೆಯಬಹುದು ಹಾಗೆಯೇ ಚಿತ್ರೀಕರಣ ಕೂಡ ಈ ತಿಂಗಳಿನಿಂದಲೇ ಶುರುವಾಗಬಹುದು ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ಇನ್ನು ಹೆಸರಿಡದ ಈ ಚಿತ್ರದಲ್ಲಿ ಎನ್ಟಿಆರ್ ಅವರಿಗೆ ನಾಯಕಿಯಾಗಿ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ನಟಿಸುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಹೀರೋಯಿನ್ ವಿಷಯದಲ್ಲಿ ಇನ್ನು ಅಧಿಕೃತವಾಗಿ ಯಾವ ವಿಚಾರವನ್ನು ಕೂಡ ಚಿತ್ರತಂಡ ತಿಳಿಸಿಲ್ಲ.

ಆದರೆ ಹೈದರಾಬಾದ್ ನ ಶಂಶಾಬಾದ್ ಬಳಿ ಇರುವ ಒಂದು ಐಷಾರಾಮಿ ಹೋಟೆಲ್ ನಲ್ಲಿ ಈ ಸಿನಿಮಾದ ಫೋಟೋಶೂಟ್ ನಡೆದಿದೆಯಂತೆ, ಇದರಲ್ಲಿ ಜಾನ್ವಿ ಕಪೂರ್ ಮತ್ತು ಜ್ಯೂನಿಯರ್ ಎನ್ಟಿಆರ್ ಇಬ್ಬರು ಕೂಡ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜ್ಯೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಾಂಬಿನೇಷನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ರೆಸ್ಪಾನ್ಸ್ ಇರುವುದರಿಂದ ಕೊರಟಾಲ ಶಿವ ಅವರು ಜಾನ್ವಿ ಅವರನ್ನೇ ಆಯ್ಕೆ ಮಾಡಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಶಿವ ಅವರಿಗೆ ಅಷ್ಟೇನು ಇಷ್ಟವಿಲ್ಲ, ಜಾನ್ವಿ ಅವರನ್ನು ಆಯ್ಕೆ ಮಾಡಿದ್ದು ಎನ್ಟಿಆರ್ ಅವರು ಎಂದು ಕೂಡ ಹೇಳಲಾಗುತ್ತಿದೆ.

ಜಾನ್ವಿ ಕಪೂರ್

ಎನ್ಟಿಆರ್ ಅವರು ಈ ಹಿಂದೆ ಕೂಡ ಕೆಲವು ಹೀರೋಯಿನ್ ಗಳ ವಿಚಾರದಲ್ಲಿ ಹೀಗೆ ಮಾಡಿದ್ದಾರೆ. ಈಗ ಜಾನ್ವಿ ಕಪೂರ್ ಅವರು ತಮ್ಮ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕೊರಟಾಲ ಶಿವ ಅವರ ಆಪ್ತರು ಮತ್ತು ಜ್ಯೂನಿಯರ್ ಎನ್ಟಿಆರ್ ಅವರ ಅಭಿಮಾನಿಗಳು ಇದನ್ನು ಒಪ್ಪುತ್ತಿಲ್ಲ, ಕೊರಟಾಲ ಶಿವ ಅವರು ಇಷ್ಟಪಟ್ಟೆ ಜಾನ್ವಿ ಅವರನ್ನು ಹಾಕಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಜಾನ್ವಿ ಅವರ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಬರಬೇಕಿದೆ.

film-news-ju-ntrtelugu film industry