Film Starts:ಈ ಕಲಾವಿದರಿಗೆ ಗಂಭೀರ ಕಾಯಿಲೆ ಇದ್ದರೂ ಕೂಡ ಅದನ್ನು ಮೆಟ್ಟಿ ನಿಂತು ಗೆಲುವಿನ ಹಾದಿ ಹಿಡಿದಿದ್ದಾರೆ!

Film Starts: ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಬಾಲಿವುಡ್ ಚಿತ್ರರಂಗಕ್ಕೆ ಹೋಲಿಸಿದರೆ ನಮ್ಮ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳು ಹಾಗೂ ಕಲಾವಿದರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಂಪಾದಿಸಿದ್ದಾರೆ. ಉತ್ತರ ಭಾರತ ಸ್ಟಾರ್ ಗಳಿಗಿಂತ ದಕ್ಷಿಣ ಭಾರತದ ಕಲಾವಿದರು ನಟನೆ ಹಾಗೂ ಪರ್ಫಾರ್ಮೆನ್ಸ್ ವಿಚಾರದಲ್ಲಿ ಟಾಪ್ ಲೆವೆಲ್ ತೋರಿಸುತ್ತಾರೆ. ಇನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಸಾಕಷ್ಟು ಗಂಭೀರವಾದ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಅದರ ವಿರುದ್ಧ ಹೋರಾಟ ನಡೆಸಿ ನಂತರ ಜೀವನದ ಹೋರಾಟದಲ್ಲಿ ಗೆದ್ದವರ ಬಗ್ಗೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನ ತಿಳಿಯೋಣ ಬನ್ನಿ.

  • ಈ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಮೊದಲ ವ್ಯಕ್ತಿ ಅಂದ್ರೆ ಅದು ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ ನಲ್ಲಿ ಕೂಡ ತಮ್ಮದೇ ಆಗಿರುವಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಸಮಂತಾ ರುತ್ ಪ್ರಭು. ಮಯೋಸಿಟಿಸ್ ಎನ್ನುವಂತಹ ಅಪರೂಪದ ಕಾಯಿಲೆ. ಇದು ಸ್ನಾಯುವಿನ ಜೀವಕೋಶಗಳನ್ನು ಕ್ರಮೇಣವಾಗಿ ನಾಶ ಮಾಡುವಂತಹ ಕಾಯಿಲೆಯಾಗಿದೆ. ಸಾಮಾನ್ಯ ಪಾರ್ಶ್ವ ವಾಯುವನ್ನು ಕೂಡ ಉಂಟುಮಾಡುವಂತಹ ಪರಿಣಾಮವನ್ನು ಕೂಡ ಇದು ಹೊಂದಿದೆ.
  • ಮಮತಾ ಮೋಹನ್ ದಾಸ್ ಕೂಡ ಸಾಕಷ್ಟು ಅಪರೂಪದ ಕಾಯಿಲೆಗೆ ತುತ್ತಾಗಿದ್ದರು. ವಿಟಲಿಗೋ ಎನ್ನುವಂತಹ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಇವರು 2009ರಲ್ಲಿ ಲಿಂಫೋಮಾ ಕ್ಯಾನ್ಸಲ್ ಇರೋದು ಕೂಡ ಪತ್ತೆಯಾಗಿತ್ತು. ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ ಅವರು ಇಲ್ಲಿವರೆಗೆ ಬಂದಿದ್ದಾರೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಬಹುದಾಗಿದೆ.
  • 2022ರಲ್ಲಿ ದಕ್ಷಿಣಭಾರತ ಚಿತ್ರರಂಗದ ಖ್ಯಾತ ನಟಿ ಶೃತಿ ಹಾಸನ್ ರವರು ಪಿಸಿಓಎಸ್ ಎನ್ನುವಂತಹ ಕಾಯಿಲೆಯನ್ನು ಹೊಂದಿದ್ದರು ಎಂಬುದಾಗಿ ಬಹಿರಂಗವಾಗಿ ತಿಳಿಸಿದ್ದಾರೆ. ಇದಕ್ಕಾಗಿ ಸರಿಯಾದ ಆಹಾರ ಕ್ರಮ ಹಾಗೂ ಇನ್ನಿತರ ಮುಂಜಾಗ್ರತ ಕ್ರಮಗಳನ್ನು ಕೂಡ ಅವರು ಜೀವನದಲ್ಲಿ ಪಾಲಿಸಬೇಕಾಗಿತ್ತು ಎಂಬುದಾಗಿ ಕೂಡ ಅವರು ತಿಳಿಸಿದ್ದಾರೆ.
  • ಬಾಹುಬಲಿ ಖ್ಯಾತಿಯ ರಾಣ ದಗ್ಗುಬಾಟಿ ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ನೋಡೋದಕ್ಕೆ ಮಸ್ಕ್ಯುಲ್ಲರ್ ಆಗಿರುವಂತಹ ರಾಣಾ ಮೂತ್ರಪಿಂಡ ಹಾಗೂ ಕಾರ್ನಿಯ ಕಸಿ ಮಾಡಿಸಿಕೊಂಡಿದ್ದರು ಹಾಗೂ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಮಾಡಬೇಕಾಗಿರುವಂತಹ ಚಿಕಿತ್ಸೆ ಹೀಗಾಗಿ ಎಲ್ಲರೂ ಕೂಡ ಈ ವಿಚಾರದಲ್ಲಿ ಜಾಗೃತರಾಗಬೇಕು ಎಂಬುದಾಗಿ ಕೂಡ ಅವರು ಹೇಳಿದ್ದಾರೆ.
  • ನಟಿ ಕಲ್ಪಿಕ ಗಣೇಶ್ 2022 ರಲ್ಲಿ ಮೈಯೊ ಸಿಟಿಸ್ ಎನ್ನುವಂತಹ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ.

ಈ ಮೇಲೆ ಹೇಳಿರುವಂತಹ ಪ್ರತಿಯೊಬ್ಬ ಕಲಾವಿದರು ಕೂಡ ಇವತ್ತಿಗೂ ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಆದರೂ ಕೂಡ ಕರೆಯ ಮುಂದೆ ಮಾತ್ರ ಎಲ್ಲರನ್ನೂ ನಗಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

Film Starts