Fixed Deposit: ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ದರವನ್ನು ನೀಡುವಂತಹ ಟಾಪ್ 6 ಬ್ಯಾಂಕುಗಳಿವು!

Fixed Deposit: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಲವೊಂದು ಮೂಲಗಳ ಪ್ರಕಾರ ವರ್ಷದ ಅಂತ್ಯಕ್ಕೆ ರೆಪೋ ರೇಟ್ ನಲ್ಲಿ ಕಡಿತಗೊಳಿಸುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಸಂದರ್ಭದಲ್ಲಿ ಲಾಂಗ್ ಟರ್ಮ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಕೂಡ ಹಣವನ್ನು ಹೂಡಿಕೆ ಮಾಡುವಂತಹ ಯೋಜನೆ ಹಾಕ್ತಾ ಇದ್ರೆ ಯಾವ ಬ್ಯಾಂಕುಗಳಲ್ಲಿ ಹೆಚ್ಚಿನ ಬಡ್ಡಿದರದ ರಿಟರ್ನ್ ಸಿಗಲಿದೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ. ಈ ಕೆಳಗಿನ ಹೇಳಲು ಹೊರಟಿರುವಂತಹ ಬ್ಯಾಂಕುಗಳಲ್ಲಿ ನೀವು ಲಾಂಗ್ ಟರ್ಮ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಕೈತುಂಬ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ.

ಐದು ವರ್ಷದ ಫಿಕ್ಸಿಡ್ ಡೆಪಾಸಿಟ್ ಯೋಜನೆಗೆ ಹೈಯೆಸ್ಟ್ ಬಡ್ಡಿ ಸಿಗುವಂತಹ ಬ್ಯಾಂಕುಗಳು!

ಬ್ಯಾಂಕ್ ಆಫ್ ಬರೋಡ

ಬ್ಯಾಂಕ್ ಆಫ್ ಬರೋಡ ಫಿಕ್ಸಿಡ್ ಡೆಪಾಸಿಟ್ ಮೇಲಿನ ಹೂಡಿಕೆಗೆ ವಾರ್ಷಿಕವಾಗಿ 6.50 ಪ್ರತಿಶತ ಬಡ್ಡಿಯನ್ನು ನೀಡುತ್ತದೆ ಹಾಗೂ ಹಿರಿಯ ನಾಗರಿಕರಿಗೆ ಈ ಬಡ್ಡಿದರ 7.50% ಆಗಿರುತ್ತದೆ. ಇನ್ನು ಯಾರಾದರೂ ಮೂರು ವರ್ಷಗಳ ಯೋಜನೆ ಮೇಲೆ ಹೂಡಿಕೆ ಮಾಡುವಂತಹ ಪ್ಲಾನ್ ಮಾಡಿದರು ಕೂಡ ಅವರಿಗೂ 6.50 ಪರ್ಸೆಂಟ್ ವಾರ್ಷಿಕ ಬಡ್ಡಿದರವನ್ನು ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಈ ಅವಧಿಗೆ ಹಿರಿಯ ನಾಗರಿಕರಿಗೆ 7.15 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಭಾರತ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೂಡ ಹೂಡಿಕೆ ಮೇಲೆ ಸಾಮಾನ್ಯರಿಗೆ 6.50 ಪರ್ಸೆಂಟ್ ಹಾಗೂ ಹಿರಿಯ ನಾಗರಿಕರಿಗೆ 7.5೦% ಬಡ್ಡಿಯನ್ನು ನೀಡುತ್ತೆ. ಇದೇ ಅವಧಿಯಲ್ಲಿ ನೀವು ಅಮೃತ್ ಕಲಷ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 400 ದಿನಗಳಿಗೆ 7.10 ಪರ್ಸೆಂಟ್ ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ 7.60 ಪರ್ಸೆಂಟ್ ಬಡ್ಡಿಯನ್ನು ನೀಡಲಾಗುತ್ತದೆ.

HDFC ಬ್ಯಾಂಕ್.

ಫೆಬ್ರವರಿ 9 ರಿಂದ ಪ್ರಾರಂಭ ಮಾಡಿರುವಂತಹ ಹೊಸ ಬಡ್ಡಿ ದರದ ನಿಯಮದ ಪ್ರಕಾರ ಇಲ್ಲಿ ಐದು ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 7% ಹಾಗೂ ಹಿರಿಯ ನಾಗರಿಕರಿಗೆ 7.5% ಬಡ್ಡಿಯನ್ನು ನೀಡಲಾಗುತ್ತದೆ.

ಕೋಟಕ್ ಮಹೀಂದ್ರಾ ಬ್ಯಾಂಕ್.

ಇದೇ ವರ್ಷದ ಏಪ್ರಿಲ್ 19 ರಂದು ಜಾರಿಗೆ ಬಂದಿರುವಂತಹ ನಿಯಮಗಳ ಪ್ರಕಾರ ಕೋಟಕ್ ಮಹಿಂದ್ರ ಬ್ಯಾಂಕ್ ನಲ್ಲಿ ಹಿರಿಯ ಹಾಗೂ ಸಾಮಾನ್ಯ ನಾಗರಿಕರಿಬ್ಬರಿಗೂ ಕೂಡ 5 ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 6.25 ಪರ್ಸೆಂಟ್ ಬಡ್ಡಿಯನ್ನು ನೀವು ಪಡೆದುಕೊಳ್ಳುತ್ತೀರಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 5 ವರ್ಷಗಳ ಮೇಲಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ 6.5% ಹಾಗೂ ಹಿರಿ ನಾಗರಿಕರಿಗೆ 7 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. 80 ವರ್ಷಕ್ಕಿಂತ ಮೇಲೇ ಇರುವಂತಹ ಸೂಪರ್ ಸಿಟಿಜನ್ ಗಳಿಗೆ 7.3% ಬಡ್ಡಿಯನ್ನು ನೀಡಲಾಗುತ್ತದೆ.

ICICI ಬ್ಯಾಂಕ್.

ಪ್ರೈವೇಟ್ ಸೆಕ್ಟರ್ ನಲ್ಲಿ ಇರುವಂತಹ ಈ ಜನಪ್ರಿಯ ಬ್ಯಾಂಕಿನಲ್ಲಿ ನೀವು ಐದು ವರ್ಷಗಳ ಮೇಲಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 7 ಪರ್ಸೆಂಟ್ ಹಾಗೂ ಹಿರಿಯ ನಾಗರಿಕರಿಗೆ 7.5% ಬಡ್ಡಿಯ ರಿಟರ್ನ್ ಸಿಗಲಿದೆ.

Fixed deposit