Kitchen Hacks: ತಂದಿರುವ ಸೊಪ್ಪುಗಳೆಲ್ಲಾ ಒಂದೇ ದಿನಕ್ಕೆ ಹಾಳಾಗ್ತಾ ಇದ್ಯಾ? ಹಾಗಾದ್ರೆ ಒಮ್ಮೆ ಈ ಟ್ರಿಕ್ಸ್ ಟ್ರೈ ಮಾಡಿ; ಸೊಪ್ಪು ಹಾಳಾಯ್ತು ಎನ್ನುವ ಮಾತೇ ಇಲ್ಲ!  

Kitchen Hacks:ಈಗ ಚಳಿಗಾಲ (Winter). ಎಲ್ಲ  ರೀತಿಯ ಸೊಪ್ಪುಗಳು ಮಾರುಕಟ್ಟೆ (market) ಯಲ್ಲಿ ಸಿಗುತ್ತದೆ. ಅವು ದೇಹಕ್ಕೆ ಅವಶ್ಯಕ ಕೂಡ. ಸೊಪ್ಪುಗಳಲ್ಲಿ ಖನಿಜಾಂಶಗಳು ಹೇರಳವಾಗಿ ಇರುವುದರಿಂದ ಅವಗಳನ್ನು ಆದಷ್ಟು ಹೆಚ್ಚು ಬಳಸಬೇಕೆಂದು ವೈದ್ಯರು (Doctor) ಕೂಡ ಸಲಹೆ ನೀಡುತ್ತಾರೆ. ಹಾಗಾಗಿ ಹೆಚ್ಚಿನ ಜನರು ಸೊಪ್ಪನ್ನು(green-leaves) ಖರೀದಿ ಮಾಡುತ್ತಾರೆ. ಆದರೆ ಮನೆಯಲ್ಲಿ ತಂದಿಟ್ಟು ಎರಡೇ ದಿನಕ್ಕೆ ಅದು ಒಣಗಿ ಹೋಗುತ್ತದೆ. ಇದರಿಂದ ಗೃಹಿಣಿಯರಿಗೆ (Women) ಸರಿಯಾಗಿ ಉಪಯೋಗಿಸಲು ಸಾಧ್ಯವಾಗಿಲ್ಲ ಎಂದು ಬೇಸರಗೊಳ್ಳುತ್ತಾರೆ. ಆದರೆ ಇನ್ಮುಂದೆ ಈ ರೀತಿಯ ಚಿಂತೆ ಬಿಡಿ. ಈಗ ನಾವು ಹೇಳುವ ಟ್ರಿಕ್ಸ್ (Trikes) ಫಾಲೋ ಮಾಡಿ. ಇದರಿಂದ ನೀವು ತಂದ ಸೊಪ್ಪು ವಾರವಾದರೂ ಒಣಗದೆ ಇರುತ್ತದೆ.

Kitchen Hacks: ತಂದಿರುವ ಸೊಪ್ಪುಗಳೆಲ್ಲಾ ಒಂದೇ ದಿನಕ್ಕೆ ಹಾಳಾಗ್ತಾ ಇದ್ಯಾ? ಹಾಗಾದ್ರೆ ಒಮ್ಮೆ ಈ ಟ್ರಿಕ್ಸ್ ಟ್ರೈ ಮಾಡಿ; ಸೊಪ್ಪು ಹಾಳಾಯ್ತು ಎನ್ನುವ ಮಾತೇ ಇಲ್ಲ!   https://sihikahinews.com/amp/follow-these-simple-tricks-green-leaves-will-not-spoil/

ನೀವು ತಂದ ಸೊಪ್ಪಿನಲ್ಲಿ ನೀರು ಇದ್ದರೆ ನೀವು ಅದನ್ನು ನೇರವಾಗಿ ಫ್ರಿಜ್ (Fridge) ನಲ್ಲಿ ಇಟ್ಟಾಗ ಅದು ಬೇಗ ಹಾಳಾಗುತ್ತದೆ. ಹಾಗಾಗಿ ನೀವು ತಂದ ಸೊಪ್ಪನ್ನು ಸರಿಯಾಗಿ ಒಣಗಿದ ಬಟ್ಟೆಯಲ್ಲಿ ಒರೆಸಿ ಫ್ರಿಜ್ನಲ್ಲಿ ಇಡಿ. ಇನ್ನು ಕೆಲವರು ಮಾರುಕಟ್ಟೆಯಿಂದ ತಂದ ತರಕಾರಿ-ಸೊಪ್ಪುಗಳನ್ನು ತೊಳೆದು ನೇರವಾಗಿ ಫ್ರಿಜ್ನಲ್ಲಿ ಇಡುವ ಅಭ್ಯಾಸ ಹೊಂದಿರುತ್ತಾರೆ. ಈ ರೀತಿ ನೇರವಾಗಿ ಫ್ರಿಜ್ನಲ್ಲಿ ಇಡುವುದರಿಂದ ತರಕಾರಿಗಳು ಬೇಗ ಕೊಳೆಯುತ್ತದೆ. ತರಕಾರಿಗಳನ್ನು ತೊಳೆದ ನಂತರ ಒಂದು ಒಳ್ಳೆಯ ಪೇಪರ್ನಲ್ಲಿ ಸುತ್ತಿ ಇಡಬೇಕು. ಇಲ್ಲವೆ ಫ್ರಿಜ್ ಒಳಗೆ ಪೇಪರ್ ಹರಡಿ ನಂತರ ಅದರ ಮೇಲೆ ಸೊಪ್ಪನ್ನು ಇಡಬೇಕು. ಇದರಿಂದ ಸೊಪ್ಪುಗಳು ಬೇಗನೆ ಕೆಡುವುದಿಲ್ಲ. ಇದನ್ನೂ ಓದಿ:Kannada Recipe; ರಾತ್ರಿ ಚೆನ್ನಾ(ಕಾಬೂಲ್ ಕಡ್ಲೆ) ಕಾಳನ್ನು ನೆನೆಸಿಡಲು ನೆನಪಿದ್ರೆ ಸಾಕು, ಕೇವಲ ಐದು ನಿಮಿಷಗಳಲ್ಲಿ ಬೆಳಗಿನ ಈ ತಿಂಡಿ ಸಿದ್ದವಾಗಿರುತ್ತೆ!

ಹಸಿರು ಸಿಂಟಾಲ್ರೋ ಅಥವಾ ಲೆಟಿಸ್ ಎಲೆಗಳನ್ನು ಪ್ಲಾಸ್ಟಿಕ್ ಚೀಲ ಅಥವಾ ಗಾಳಿಯಾಡದ ಪೆಟ್ಟಿಗೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಎಲೆಗಳಲು ವಾರವಾದರೂ ಒಣಗುವುದಿಲ್ಲ. ನೀವು ಬೇಕಾದಾಗ ಬಳಸಿಕೊಳ್ಳಬಹುದು. ನೀವು ಸಂಗ್ರಹಿಸಿಡುವ ಕಂಟೆನರ್ ತೇವದಿಂದ ಕೂಡಿರಬಾರದು ಎನ್ನುವುದನ್ನು ನೆನಪಿನಲ್ಲಿಡಿ.

ನೀವು ಒಂದು ಅಥವಾ ಎರಡು ದಿನಕ್ಕೆ ಸಾಕಾಗುವಷ್ಟು ತರಕಾರಿ ಅಥವಾ ಸೊಪ್ಪನ್ನು ಮಾರುಕಟ್ಟೆಯಿಂದ ತರುವುದು ಒಳ್ಳೆಯದು. ಒಂದು ವೇಳೆ ನಿಮಗೆ ಮಾರುಕಟ್ಟೆಗೆ ದಿನವೂ ಹೋಗಲು ಸಾಧ್ಯವಿಲ್ಲವಾದಾಗ ಒಂದು ವಾರಕ್ಕೆ ಆಗುವಷ್ಟು ತರುವುದು ಸಾಮಾನ್ಯ. ಹಾಗಾಗಿ ಅವುಗಳನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಸಹ ಅಷ್ಟೆ ಮುಖ್ಯವಾಗಿರುತ್ತದೆ. ಇದರಿಂದ ನಿಮ್ಮ ಸಮಯ ಹಾಗೂ ಹಣವೂ ಉಳಿತಾಯವಾಗಲಿದೆ.

Kitchen HacksLifestyleTricksಅಡುಗೆ ಮನೆತರಕಾರಿಗಳು