Free Bus: ಇನ್ಮುಂದೆ ಉಚಿತ ಬಸ್ ಪ್ರಯಾಣದಲ್ಲಿ ಆಧಾರ್ ಕಾರ್ಡ್ ತೋರಿಸಿದರೆ ಸಾಕಾಗಲ್ಲ; ಸರ್ಕಾರದ ಮತ್ತೊಂದು ರೂಲ್ಸ್!

Free Bus: ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತಂದಿರುವಂತಹ ಯೋಜನೆಗಳಲ್ಲಿ ಮಹಿಳೆಯರಿಗೆ ಕೆಎಸ್ಆರ್ಟಿಸಿ ನಿಗಮದ ಬಸ್ಸುಗಳಲ್ಲಿ ಅಂದರೆ ಸರ್ಕಾರಿ ಬಸ್ಸುಗಳಲ್ಲಿ ಶಕ್ತಿ ಯೋಜನೆಯ ಮೂಲಕ ರಾಜ್ಯದ ಒಳಭಾಗದಲ್ಲಿ ಉಚಿತ ಬಸ್ ಪ್ರಯಾಣವನ್ನು ಜಾರಿಗೆ ತಂದಿದ್ದು. ಶಕ್ತಿ ಯೋಜನೆ ಜಾರಿಗೆ ಬಂದಿದ್ದ ಆರಂಭಿಕ ದಿನಗಳಲ್ಲಿ ನೀವು ಸರಿಯಾಗಿ ಗಮನಿಸಿದರೆ ಇದರ ವಿರುದ್ಧವಾಗಿ ಸಾಕಷ್ಟು ಅಸಮಾಧಾನಗಳು ಕೇಳಿ ಬಂದಿದ್ದವು ಆದರೆ ಕಾಲಕ್ರಮೇಣವಾಗಿ ಈಗ ಶಕ್ತಿ ಯೋಜನೆಯ ಬಳಕೆಯನ್ನು ವಿರೋಧ ಮಾಡುತ್ತಿದ್ದವರೆ ಬಳಸುತ್ತಿದ್ದಾರೆ ಎಂಬುದು ವಿಶೇಷವಾಗಿದೆ.

ಈಗ ಶಕ್ತಿ ಯೋಜನೆಯಿಂದ ಪುರುಷರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ 50% ಸೀಟಿಂಗ್ ವ್ಯವಸ್ಥೆಯನ್ನು ಕೂಡ ಪುರುಷರಿಗೆ ಮೀಸಲಾಗಿರಿಸಲಾಗಿದೆ. ಅಡಿಯಲ್ಲಿ ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅನ್ನು ಹೆಚ್ಚಾಗಿ ತೋರಿಸ್ತಾ ಇದ್ದರು ಆದರೆ ಇನ್ಮುಂದೆ ಕೇವಲ ಆಧಾರ್ ಕಾರ್ಡ್ ತೋರಿಸಿ ಉಚಿತ ಬಸ್ ಪ್ರಯಾಣವನ್ನು ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಈ ಕಾರ್ಡ್ ಬೇಕೇ ಬೇಕು ಎನ್ನುವುದಾಗಿ ಸಾರಿಗೆ ಇಲಾಖೆ ತಿಳಿಸಿದೆ.

ಆಧಾರ್ ಕಾರ್ಡ್ ಅಲ್ಲ ಈ ಕಾರ್ಡ್ ಬೇಕು ಉಚಿತ ಬಸ್ ಪ್ರಯಾಣಕ್ಕೆ!

ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗೆ ಅಂದರೆ ಕರ್ನಾಟಕ ರಾಜ್ಯದಲ್ಲಿ ಜನಿಸಿರುವಂತಹ ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣವನ್ನು ಜಾರಿಗೆ ತಂದಿರೋದು. ಇನ್ನು ಆಧಾರ್ ಕಾರ್ಡ್ ಮೂಲಕ ನೀವು ಉಚಿತ ಬಸ್ ಪ್ರಯಾಣವನ್ನು ಪಡೆದುಕೊಳ್ಳುತ್ತೀರಿ ಎಂದಾದರೆ ಕೆಲವರು ಬೇರೆ ರಾಜ್ಯದಿಂದ ಬಂದಿರಬಹುದು ಅವರ ಆಧಾರ್ ಕಾರ್ಡ್ ನಲ್ಲಿ ಅವರ ಜನ್ಮಸ್ಥಳ ಬೇರೆ ರಾಜ್ಯದ ಹೆಸರು ಕೂಡ ಆಗಿರಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಕನ್ಫ್ಯೂಷನ್ ಇರಬಾರದು ಎನ್ನುವ ಕಾರಣಕ್ಕಾಗಿ ಸ್ಮಾರ್ಟ್ ಕಾರ್ಡ್ ಅನ್ನು ಬಳಕೆ ಮಾಡಬೇಕು ಎನ್ನುವುದಾಗಿ ಸಾರಿಗೆ ಇಲಾಖೆ ಕಡ್ಡಾಯ ನಿಯಮವನ್ನು ಜಾರಿಗೆ ತಂದಿದೆ.

ಆರಂಭದಲ್ಲಿ ಮೆಟ್ರೋ ಕಾರ್ಡ್ ನಂತೆ ಇರುವಂತಹ ಸ್ಮಾರ್ಟ್ ಕಾರ್ಡ್ ಅನ್ನು ಜಾರಿಗೆ ತರಬೇಕು ಎಂಬುದಾಗಿ ನಿರ್ಧಾರ ಮಾಡಲಾಗಿತ್ತು ಆದರೆ ಆದರೆ ಅದರಿಂದ ಮತ್ತಷ್ಟು ಬಜೆಟ್ ಹೊರೆ ಹೆಚ್ಚಾಗುತ್ತದೆ ಎಂದು ಈಗ ಸೇವಾ ಸಿಂಧು ಪೋರ್ಟಲ್ ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನೇ ಶಕ್ತಿ ಯೋಜನೆಗೆ ಬಳಸುವಂತಹ ಸ್ಮಾರ್ಟ್ ಕಾರ್ಡ್ ಆಗಿ ಉಪಯೋಗಿಸಬಹುದಾಗಿದೆ. ಪ್ರಿಂಟ್ ಔಟ್ ತೆಗೆದಿರುವಂತಹ ಕಾರ್ಡ್ ಅನ್ನು ಸರ್ಕಾರಿ ಬಸ್ಸುಗಳಲ್ಲಿ ಹೋಗುವಾಗ ಕಂಡಕ್ಟರ್ಗಳಿಗೆ ತೋರಿಸಿ ಉಚಿತ ಬಸ್ ಪ್ರಯಾಣವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಸಾಕಷ್ಟು ದಾಖಲೆಗಳನ್ನು ನೀಡಬೇಕಾದ ಅಗತ್ಯ ಕೂಡ ಇರುವುದಿಲ್ಲ ಕೇವಲ ಆಧಾರ್ ಕಾರ್ಡ್ ತೋರಿಸಿ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ.

Free Bus