Gayathri Raghuram Quits BJP: ಅಣ್ಣಾಮಲೈ ವಿರುದ್ಧ ಬಿಜೆಪಿ ಯಲ್ಲಿ ಮಹಿಳೆಯರು ಸುರಕ್ಷಿತವಲ್ಲ ಎಂದು ಆರೋಪ ಮಾಡಿದಕ್ಕೆ ನಿಜವಾದ ಕಾರಣ ಏನಂತೆ ಗೊತ್ತೇ??

Gayathri Raghuram Quits BJP: ರಾಜಕೀಯ (Politics) ಎಂದರೆ ಹಾಗೆ ಯಾವಾಗ ಯಾರು ನಮ್ಮ ಶತ್ರುಗಳಾಗುತ್ತಾರೆ? ಯಾರು ನಮ್ಮ ಮಿತ್ರರಾಗುತ್ತಾರೆ? ಎಂದು ತಿಳಿಯುವುದೇ ಇಲ್ಲ ನೋಡಿ! ಹಾಗಾಗಿಯೇ ರಾಜಕೀಯ ಜೀವನದಲ್ಲಿ ಏನು ಬೇಕಾದರೂ ಆಗಬಹುದು. ತಮಿಳುನಾಡು ಬಿಜೆಪಿ (Tamil Nādu BJP)ಯಲ್ಲಿಯೂ ಇಂತಹುದೇ ಒಂದು ಘಟನೆ ನಡೆದಿದೆ. ಇಷ್ಟು ದಿನ ಬಿಜೆಪಿಯಲ್ಲಿದ್ದ ನಾಯಕರು ಈಗ ಬಿಜೆಪಿ ತೊರೆದಿದ್ದು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಅವರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿಗೆ ಆಘಾತ ಎದುರಾಗಿದೆ. ಪಕ್ಷದಿಂದ ಅಮಾನತುಗೊಂಡಿದ್ದ ನಟಿ ಗಾಯತ್ರಿ ರಘುರಾಮ್ (Gayatri Garghuram) ಅವರು ನಲವತ್ತು ದಿನಗಳ ಬಳಿಕ ತಮಿಳುನಾಡು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರೇ ಕಾರಣ ಎಂದು ಆರೋಪ ಮಾಡಿದ್ದಾರೆ.

ಗಾಯತ್ರಿ ರಘ್ಹುರಾಮ್ ಹೇಳಿದ್ದೇನು?

ಅಣ್ಣಾಮಲೈ ನಾಯಕತ್ವದಡಿ ಬಿಜೆಪಿಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಗಾಯತ್ರಿ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವುದಕ್ಕೆ ಅಣ್ಣಾಮಲೈ ಬೆಂಬಲಿಗರು ಕಾರಣ ಎಂದು ಅವರು ಹೇಳಿದ್ದಾರೆ.

ಪಕ್ಷದ ಮಹಿಳಾ ಮುಖಂಡರೊಬ್ಬರು ಕರೆ ಮಾಡಿದ ವೇಳೆ ಅವಾಚ್ಯವಾಗಿ ನಿಂದಿದ್ದ ಡಿಎಂಕೆ ಸಂಸದ ತಿರುಚ್ಚಿ ಅವರ ಮಗ ಸೂರ್ಯ ಶಿವ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಅಣ್ಣಾಮಲೈ ಅವರ ನಿರ್ಧಾರವನ್ನು ಗಾಯತ್ರಿ ಅವರು ಬಹಿರಂಗವಾಗಿ ಖಂಡಿಸಿದ್ದರು. ಇದ್ದರಿಂದ ಅಸಮಾಧಾನಗೊಂಡಿದ್ದ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು.

ಅಣ್ಣಾಮಲೈ ಬೆಂಬಲಿಗರು ನನ್ನನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡುತ್ತಿದ್ದಾರೆ. ಮತ್ತು ಕೆಟ್ಟದಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಬಿಜೆಪಿಯನ್ನು, ಸ್ತ್ರಿ ನಿಂದಕರನ್ನು ಅಣ್ಣಾಮಲೈ ರಕ್ಷಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಮಹಿಳೆಯರ ವಿಚಾರಣೆ, ಸಮಾನ ಹಕ್ಕುಗಳು ಮತ್ತು ಗೌರವಕ್ಕೆ ಅವಕಾಶ ನೀಡದ ಕಾರಣಕ್ಕೆ ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಭಾರವಾದ ಹೃದಯದೊಂದಿಗೆ ತೆಗೆದುಕೊಂಡಿದ್ದೇನೆ. ಅಣ್ಣಾಮಲೈ ಅವರ ನಾಯಕತ್ವದಡಿ ಮಹಿಳೆಯರು ಸುರಕ್ಷಿತವಾಗಿಲ್ಲ. ಪಕ್ಷದ ಹೊರಗಿನವಳಾಗಿ ಟ್ರೋಲ್ ಆಗುವುದೇ ಉತ್ತಮ ಎಂದು ಗಾಯತ್ರಿ ರಘುರಾಮ್ ಅಭಿಪ್ರಾಯಪಟ್ಟಿದ್ದಾರೆ. 

ತಮಿಳುನಾಡು ಬಿಜೆಪಿಯಲ್ಲಿ ಯಾರೂ ಕೂಡ ಪಕ್ಷದ ನೈಜ ಕಾರ್ಯಕರ್ತರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅವರನ್ನು ದೂರಕ್ಕೆ ಓಡಿಸುವುದೇ ಏಕೈಕ ಗುರಿ ಎಂದು ಕಾಣುತ್ತದೆ. ಬಿಜೆಪಿಗೆ ಒಳಿತಾಗಲಿ ಎಂದು ನಾನು ಹಾರೈಸುತ್ತೇನೆ. ನಾನು ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ. ಅದಕ್ಕೆ ಅಣ್ಣಾಮಲೈ ಅವರೇ ನೇರ ಕಾರಣ. ಇನ್ನು ಮುಂದೆ ಅಣ್ಣಾಮಲೈ ಅವರನ್ನು ನಿರ್ಲಕ್ಷಿಸಲು ನಿರ್ಧರಿಸಿದ್ದೇನೆ. ಅವರೊಬ್ಬರು ಕೀಳು ತಂತ್ರದ ಸುಳ್ಳುಗಾರ ಹಾಗೂ ಅಧರ್ಮದ ನಾಯಕ ಎಂದು ಗ್ರಾಯತ್ರಿ ರಘುರಾಮ್ ಆಕ್ರೋಶ ಹೊರಹಾಕಿದ್ದಾರೆ.

ಪಕ್ಷದ ನಿಯಮ ಮೀರಿದ್ದಕ್ಕಾಗಿ, ಗಾಯಕಿಯಾಗಿದ್ದರೂ, ರಾಜ್ಯದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಹೊಂದಿದ್ದರೂ ಗಾಯತ್ರಿ ಅವರನ್ನು ಮುಲಾಜಿಲ್ಲದೇ ಪಕ್ಷದಿಂದ  ಉಚ್ಚಾಟನೆ ಮಾಡಲಾಗಿತ್ತು.  ಇದೇ ಕಾರಣಕ್ಕೆ ಗಾಯತ್ರಿ ಅವರು ಇದೀಗ ಬಿಜೆಪಿ ತಮಿಳುನಾಡು ರಾಜ್ಯದ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Gayathri Raghuram Quits BJPPolitical newsಅಣ್ಣಾಮಲೈರಾಜಕೀಯ