Goddess Laxmi: ಲಕ್ಷ್ಮಿ ದೇವಿಯೇ ಬಹಳ ಪ್ರಿಯವಾಗಿರುವ ಈ ವಸ್ತುವನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಸಾಕು ಏನಾಗುತ್ತದೆ ಎಂದು ತಿಳಿದರೆ ಇಂದೇ ಇಡ್ತೀರಾ

Goddess Laxmi: ಮನುಷ್ಯರಿಗೆ ಹಣ ಎಷ್ಟು ಮುಖ್ಯ ಅಂತ ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಣವಿಲ್ಲದೆ ನಾವು ಒಂದೇ ಒಂದು ಕೆಲಸ ಮಾಡಲು ಸಾಧ್ಯವಿಲ್ಲ. ಅನೇಕರು ಈ ಹಣವನ್ನು ಗಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ ಕೆಲವರು ಎಷ್ಟೇ ಕಷ್ಟಪಟ್ಟರೂ, ಕೆಲಸ ಮಾಡಿದರೂ  ಅವರ ಬಳಿ ಹಣವಿರುವುದಿಲ್ಲ. ಕೆಲವರು ಬೇಕಾಬಿಟ್ಟಿ ಹಣ ಖರ್ಚು ಮಾಡುವವರೂ ಇದ್ದಾರೆ ಬಿಡಿ. ಆದರೆ ಸಾಕಷ್ಟು ಜನ ಒಂದೊಂದು ರೂಪಾಯಿಗೂ ಚಿಂತೆ ಮಾಡುತ್ತಾರೆ.

ನಿಮಗೂ ಇದೇ ಅನುಭವ ಆಗಿದ್ಯಾ? ನಿಮ್ಮ ಕೈನಲ್ಲೂ ಲಕ್ಷ್ಮಿ ದೇವಿ ನಿಲ್ಲುವುದಿಲ್ಲವೇ? ಹಾಗಾದರೆ ಅದಕ್ಕೊಂದು ಪರಿಹಾರವಿದೆ.  ವೈದಿಕ ಶಾಸ್ತ್ರಗಳ ಪ್ರಕಾರ ನೀವು ಈ ಸಲಹೆಗಳನ್ನು ಅನುಸರಿಸಿದರೆ, ಲಕ್ಷ್ಮಿ ದೇವಿಯು ನಿಮ್ಮ ಜೇಬು ತುಂಬುತ್ತಾಳೆ. ಹೇಗೆ ಗೊತ್ತಾ? ಬನ್ನಿ ನೊಡೋಣ.

ಲಕ್ಷ್ಮಿ ದೇವಿಯ ಕೈಯಲ್ಲಿ ಉಳಿಯುವುದಕ್ಕೇ ಏನು ಮಾಡಬೇಕು ಗೊತ್ತಾ?

ಕಡಲ ಚಿಪ್ಪು: ಕಡಲ ಚಿಪ್ಪುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಎಂದರೆ ಹಣದ ಕೊರತೆಯಿಲ್ಲ ಎಂದೇ ಅರ್ಥ. ನೀವು  ವ್ಯಾಪಾರ ಮಾಡುವ ಸ್ಥಳದಲ್ಲಿ, ಅಥವಾ ಪರ್ಸ್‌ನಲ್ಲಿ ಹಣವನ್ನು ಇಡುವ ಸ್ಥಳದಲ್ಲಿ ಈ ಚಿಪ್ಪುಗಳನ್ನು ಇಟ್ಟುಕೊಂಡರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ. ಇದನ್ನೂ ಓದಿ:Chiranjeevi: ಮೂರನೇ ಮದುವೆಯಾಗುತ್ತಿರುವ ಮಗಳಿಗೆ ಚಿರು ಕೊಟ್ಟ ಬಂಗ್ಲೆಯ ಬೆಲೆ ಎಷ್ಟು ಗೊತ್ತೇ?? ತಿಳಿದರೆ ಇಂತಹ ಅಪ್ಪ ಇರಬೇಕು ಅಂತೀರಾ!

ಅಶ್ಚತ್ಥ ಮರದ ಎಲೆಗಳು: ಇನ್ನು ಅಶ್ವತ್ಥ ಮರದ ಎಲೆಗಳು ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತವೆ. ಅದಕ್ಕಾಗಿಯೇ ನೀವು ಯಾವಾಗಲೂ ನಿಮ್ಮ ಪರ್ಸ್‌ನಲ್ಲಿ ಅಶ್ವತ್ಥ ಮರದ ಎಲೆಯನ್ನು ಇಟ್ಟುಕೊಳ್ಳಬೇಕು.. ಈ ಎಲೆಗಳನ್ನು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ನಂಬಲಾಗಿದೆ.. ಆದ್ದರಿಂದ ಇವುಗಳನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿದರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ. ಇದನ್ನೂ ಓದಿ: 2 Girls Love Story: ಪ್ರೀತಿ ಪ್ರೀತಿ ಎಂದು ಹುಡಿಯಾಗಿದ್ದವಳು ಹುಡುಗನಾಗಿ ಬದಲಾದಳು, ಆದರೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಪ್ರೀತಿಸಿದ ಹುಡುಗಿ. ಏನಾಗಿದೆ ಗೊತ್ತೇ??

ಕಮಲದ ಹೂವಿನ ಬೀಜ: ಕಮಲದ ಹೂವನ್ನು ನಾವು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತೇವೆಯಲ್ಲವೇ.. ಕಮಲದ ಹೂವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ.. ಅದಕ್ಕಾಗಿಯೇ ನೀವು ಕಮಲದ ಹೂವಿನ ಬೀಜವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ.. ನಿಮ್ಮ ಖರ್ಚುಗಳೂ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಅಕ್ಕಿ: ಅದೇ ರೀತಿಯಾಗಿ ನಿಮ್ಮ ಪರ್ಸ್‌ನಲ್ಲಿ ಅಕ್ಕಿಯನ್ನು ಇಡುವುದರಿಂದ ನಿಮಗೆ ಸಾಕಷ್ಟು ಹಣ ಬರುತ್ತದೆ. ಅಕ್ಕಿಯನ್ನು ಅನ್ನಪೂರ್ಣೇಶ್ವರಿ ಎನ್ನಲಾಗುತ್ತೆ. ಆಕೆ ಕೂಡ ಸಂಪತ್ತಿನ ಗಣಿ. ಹಾಗಾಗಿ ಅನ್ನಪೂರ್ಣೇಶ್ವರಿಯ ಕೃಪೆ ಇದ್ದರೆ ಲಕ್ಷ್ಮಿ ಆಶಿರ್ವಾದ ಮಾಡಿದ ಹಗೆ. ಹಾಗಾಗಿ ಪರ್ಸ್ ನಲ್ಲಿ ಅಕ್ಕಿಯನ್ನು ಕೂಡ ಇಟ್ಟುಕೊಳ್ಳಿ. ಶ್ರೀಲಕ್ಷ್ಮಿಯ ಕೃಪೆ ನಿಮ್ಮ ಮೇಲಾಗುತ್ತದೆ.

12 zodiac signsAstrologyGoddess LaxmiHoroscopekrupeಜ್ಯೋತಿಷ್ಯ ಶಾಸ್ತಲಕ್ಷ್ಮಿ ಕೃಪೆವಾಸ್ತು