Gold: ನದಿಯ ನೀರಿನಲ್ಲಿ ಕೊಚ್ಚಿ ಬಂದ ರಾಶಿ ರಾಶಿ ಚಿನ್ನದ ನಾಣ್ಯಗಳು; ಬಾಚಿ ಬಾಚಿ ಚಿನ್ನ ತುಂಬಿಕೊಂಡ ಗ್ರಾಮಸ್ಥರು, ಈಗಲೂ ಸಿಗುತಿದೆ ಚಿನ್ನದ ನಾಣ್ಯ! ಎಲ್ಲಿ ಗೊತ್ತೇ?

Gold:ಭಾರತೀಯರು ಚಿನ್ನಪ್ರಿಯರು ಅನ್ನೋದು ಎಲ್ಲರಿಗೂ ಗೊತ್ತು ನಮ್ಮಲ್ಲಿ ಯಾವುದೇ ಕಾರ್ಯಕ್ರಮ ಆಗಬೇಕಿದ್ರೂ ಅಲ್ಲಿ ಮುಖ್ಯವಾಗಿ ಚಿನ್ನ ಇರಲೇಬೇಕು ಮದುವೆ ಇರಲಿ ಅಥವಾ ಇನ್ನಿತರ ಯಾವುದೇ ಶುಭ ಸಮಾರಂಭವಿರಲಿ, ಮಹಿಳೆಯರಂತೂ ಚಿನ್ನ ತೊಟ್ಟು ಮೆರೆದಾಡುತ್ತಾರೆ. ಇಷ್ಟು ದುಬಾರಿಯಾಗಿರುವ ಚಿನ್ನ ನದಿ ನೀರಿನಲ್ಲಿ ತೇಲಿ ಬಂದ್ರೆ ಹೇಗೆ? ಬಿಡೋ ಮಾತೇ ಇಲ್ಲ ಜನ ನಾ ಮುಂದು ತಾ ಮುಂದು ಅಂತ ಚಿನ್ನ ಹೆಕ್ಕೋದಕ್ಕೆ ಮುಂದಾಗಿದ್ದಾರೆ.

ಅಷ್ಟಕ್ಕೂ ಈ ಚಿನ್ನ ಪತ್ತೆಯಾಗಿದ್ದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ. ಜಿಲ್ಲೆಯ ಪರ್ಕಂಡಿ ಗ್ರಾಮದ ನದಿಯಲ್ಲಿ ಚಿನ್ನಪತ್ತೆಯಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಜನ ಯದ್ನೋ ಬಿದ್ನೋ ಅಂತ ನದಿ ದಡಕ್ಕೆ ಹೋಗಿದ್ದರು.

ಎಂದು ಗ್ರಾಮಸ್ಥರು ನದಿ ದಡದಲ್ಲಿ ಸೇರಿದ್ದಾರೆ ಸಲಾಕೆ ಮತ್ತಿತರ ಸಾಮಗ್ರಿಗಳಿಂದ ನದಿ ದಡ ಅಗಯುತ್ತಿದ್ದಾರೆ. ಬನ್ಸ್ಲೋಯ್ ನದಿ ಪರ್ಕಂಡಿ ಗ್ರಾಮದ ಮೂಲಕ ಹರಿಯುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ನದಿಯಲ್ಲಿ ಬೇಸಿಗೆಯಲ್ಲಿ ಅಷ್ಟಾಗಿ ನೀರು ಇರುವುದಿಲ್ಲ. ಇನ್ನು ನದಿಯ ಮರಳಿನಲ್ಲಿ ಚಿನ್ನ ಸಿಕ್ಕಿದೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿಕೊಂಡಿತು. ಈ ಸುದ್ದಿ ಜನರ ಕಿವಿಗೆ ಬಿದ್ದಿದ್ದೆ ಬಿದ್ದಿದ್ದು, ಜನ ನದಿ ದಡವನ್ನು ಅಗೆಯಲು ಶುರು ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಜಾರ್ಖಂಡ್ ಮೂಲದ ವ್ಯಕ್ತಿ ಒಬ್ಬನಿಗೆ ಚಿನ್ನ ಸಿಕ್ಕಿದೆ ಎಂದು ಸುದ್ದಿಯಾಗಿತ್ತು. ಈತನೇ ಈ ನದಿಯ ದಡದಲ್ಲಿ ಚಿನ್ನವನ್ನು ಕಂಡುಕೊಂಡ ಮೊದಲ ವ್ಯಕ್ತಿ. ಸ್ಥಳೀಯ ಮಾಹಿತಿಯ ಪ್ರಕಾರ ಚಿನ್ನದ ನಾಣ್ಯಗಳಂತಹ ಅನೇಕ ಗುಂಡಗಿನ ವಸ್ತುಗಳು ಇಲ್ಲಿ ಸಿಕ್ಕಿವೆ.

ಇಲ್ಲಿ ಈಗಲೂ ಚಿನ್ನ ಹುಡುಕಾಟ ನಡೆಯುತ್ತಿದೆ 15 ವರ್ಷದ ಹಿಂದೆಯೂ ಇಲ್ಲಿ ಚಿನ್ನ ನಾಣ್ಯಗಳು ಇಲ್ಲಿ ಪತ್ತೆ ಆಗಿದ್ದವಂತೆ. ಬ್ರಿಟಿಷ್ ಕಾಲದ ಸಂಪತ್ಭರಿತ ಪಟ್ಟಣವಾಗಿದ್ದ ಮಹೇಶಪುರ ದಲ್ಲಿ ಅನೇಕ ಅರಮನೆಗಳು ಸುವರ್ಣ ರೇಖಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಹೇಳಲಾಗುತ್ತೆ. ಸುವರ್ಣ ರೇಖಾ ನದಿ ನೀರು ಬೇರೆ ಬೇರೆ ಮಾರ್ಗದಲ್ಲಿ ಹರಿದು ಬನ್ಸ್ಲೋಯ್ ನದಿಗೂ ಬಂದು ಸೇರುತ್ತೆ ಹಾಗಾಗಿ ಇಲ್ಲಿ ಚಿನ್ನ ತೇಲಿ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಸಂಖ್ಯೆಯು ಹೆಚ್ಚಾಗಿದೆ. ಹಾಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ನದಿಯ ತಡದಲ್ಲಿ ಯಾವುದೇ ಅವಗಡ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ.

gold coingold in riverp.bangal