Gold Rate: 50,000 ಗೆ ಕುಸಿಯುತ್ತಾ ಚಿನ್ನದ ಬೆಲೆ? ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸ!

Gold Rate: ಚಿನ್ನದ ಬೆಲೆ ಬಗ್ಗೆ ಪ್ರತಿಯೊಂದು ಕಡೆಗಳಲ್ಲಿ ಕೂಡ ಚರ್ಚೆ ಜೋರಾಗಿ ಕೇಳಿ ಬರುತ್ತಿದ್ದು 70000ಗಳಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಚಿನ್ನದ ಬೆಲೆ ಐವತ್ತು ಸಾವಿರಕ್ಕೆ ಇಳಿಯಬಹುದು ಎನ್ನುವಂತಹ ಮಾತುಗಳನ್ನು ತಜ್ಞರು ಆಡುತ್ತಿದ್ದಾರೆ. ಕಳೆದ ಐದು ಸಾವಿರ ವರ್ಷಗಳಿಂದಲೂ ಕೂಡ ಚಿನ್ನದ ಬಳಕೆಯನ್ನು ಮನುಷ್ಯರು ಮಾಡಿಕೊಂಡು ಬಂದಿದ್ದಾರೆ ಹಾಗೂ ಮನುಷ್ಯರು ಅತ್ಯಂತ ಹೆಚ್ಚಾಗಿ ಗೌರವವನ್ನು ನೀಡುವಂತಹ ಲೋಹದ ರೂಪದಲ್ಲಿ ಚಿನ್ನ ಕಾಣಿಸಿಕೊಳ್ಳುತ್ತದೆ. ಸಮಯದಿಂದ ಸಮಯಕ್ಕೆ ಚಿನ್ನದ ಬೆಲೆ ದುಬಾರಿ ಆಗುತ್ತಲೇ ಹೋಗುತ್ತದೆ ಅನ್ನೋದನ್ನ ನಾವು ಈಗಾಗಲೇ ಸಾಕಷ್ಟು ವರ್ಷಗಳಿಂದ ಗಮನಿಸಿಕೊಂಡು ಬಂದಿದ್ದೇವೆ.

ಭೂಮಿಯ ಒಳಗೆ ಸಿಗುತ್ತಿರುವಂತಹ ಚಿನ್ನದ ಅಂಶ ಕಡಿಮೆಯಾಗುತ್ತಾ ಬಂದಂತೆ, ಚಿನ್ನಕ್ಕೆ ಇರುವಂತಹ ಬೆಲೆ ಕೂಡ ಹೆಚ್ಚಾಗುತ್ತಾ ಹೋಗ್ತಾ ಇದೆ. ಹೀಗಾಗಿ ಹೆಚ್ಚುತ್ತಿರುವ ಬೇಡಿಕೆ ಹಾಗೂ ಕಡಿಮೆಯಾಗುತ್ತಿರುವಂತಹ ಚಿನ್ನದ ನಿಕ್ಷೇಪಗಳ ಕಾರಣದಿಂದಾಗಿ ತಜ್ಞರು ಹೇಳುವ ಪ್ರಕಾರ ಮುಂದಿನ ವರ್ಷಗಳಲ್ಲಿ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿಗಳನ್ನು ತಲುಪಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ.

ಈಗ ಇರುವ ಚಿನ್ನದ ಬೆಲೆ!

ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವಂತಹ ಚಿನ್ನದ ಬೆಲೆಯ ಅಪ್ಡೇಟ್ಗಳ ಪ್ರಕಾರ ಈ ಮಾತು ಉಲ್ಟಾಪಲ್ಟ ಆಗುತ್ತಿದೆ ಎನ್ನುವಂತಹ ಅನುಮಾನ ಮೂಡಿಬರುತ್ತದೆ. ಈಗ ಕಂಡು ಬರುತ್ತಿರುವಂತಹ ಚಿನ್ನದ ಬೆಲೆಯ ಪ್ರಕ್ರಿಯೆಯ ಬದಲಾವಣೆಗಳು ಚಿನ್ನದ ಬೆಲೆ ಐವತ್ತು ಸಾವಿರ ರೂಪಾಯಿಗೆ ತಲುಪುವ ಅಂತಹ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತದೆ. ಸದ್ಯಕ್ಕೆ 22 ಕ್ಯಾರೆಟ್ ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 66,650 ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 72,710 ರೂಪಾಯಿ ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ ನೋಡೋದಾದರೆ ಬೆಂಗಳೂರಿನಲ್ಲಿ ಕೂಡ 66,650 ಹಾಗೂ ಬೆಳ್ಳಿಗೆ 100 ಗ್ರಾಂಗೆ 9325 ರೂಪಾಯಿಯಾಗಿದೆ.

ಇಸ್ರೇಲ್ ಹಾಗೂ ಹಮಾಸ್ ನಡುವಿನ ನಡುವೆ ನಡೆಯುತ್ತಿರುವಂತಹ ಕೆಲವೊಂದು ಆಂತರಿಕ ಬಿಕ್ಕಟ್ಟುಗಳ ವಿಚಾರದಲ್ಲಿ ಚಿನ್ನದ ಬೆಲೆ ಐವತ್ತು ಸಾವಿರ ರೂಪಾಯಿಗಳಿಗೆ ಜಾಗತಿಕ ಮಟ್ಟದಲ್ಲಿ ಇಳಿಕೆ ಆದ್ರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯ ಇಲ್ಲ ಎಂಬುದಾಗಿ ಪರಿಣಿತರು ಹೇಳುತ್ತಾರೆ. ಹೀಗಾಗಿ ರೂ. 1 ಲಕ್ಷಗಳ ಬೆಲೆ ಏರಿಕೆ ಕಾಣುವಂತಹ ಸಾಧ್ಯತೆಯನ್ನು ಹೊಂದಿದ್ದ ಚಿನ್ನ ಈಗ 50,000 ಇಳಿಕೆ ಆಗಬಹುದು ಎನ್ನುವುದಾಗಿ ಕೂಡ ಲೆಕ್ಕಾಚಾರ ಹಾಕಲಾಗುತ್ತಿದೆ. ಒಂದು ತಿಂಗಳ ಟ್ರೆಂಡ್ ನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆ ಆಗ್ತಿರುವುದು ಕೂಡ ಕಂಡುಬಂದಿದೆ. ನಮ್ಮ ಭಾರತೀಯರು ಕೇವಲ ಪ್ರತಿಷ್ಠೆಯ ಅಲಂಕಾರಿಕ ವಸ್ತುವಿನ ರೂಪದಲ್ಲಿ ಮಾತ್ರ ಚಿನ್ನವನ್ನು ಖರೀದಿ ಮಾಡುವುದಲ್ಲದೆ ಕಷ್ಟ ಕಾಲದಲ್ಲಿ ಅವುಗಳನ್ನು ಅಡ ಇಟ್ಟು ಹಣವನ್ನು ಪಡೆದುಕೊಂಡು ತಮ್ಮ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಿಕೊಳ್ಳುವಂತಹ ವಸ್ತುವನ್ನಾಗಿ ಕೂಡ ಬಳಸಿಕೊಳ್ಳುತ್ತಾರೆ.

Gold rate