Gold Rate: ಚಿನ್ನವನ್ನು ಖರೀದಿಸುವವರಿಗೆ ಬೆಳ್ ಬೆಳಿಗ್ಗೆನೇ ಮತ್ತೊಂದು ಗುಡ್ ನ್ಯೂಸ್!

Gold Rate: ಚಿನ್ನ ಎನ್ನುವುದು ಒಂದು ಪ್ರತಿಷ್ಠಿತ ವಸ್ತುವಾಗಿ ಮಾತ್ರವಲ್ಲದೆ ಒಂದು ಹೂಡಿಕೆಯ ವಿಚಾರವಾಗಿ ಕೂಡ ನಮ್ಮ ಭಾರತ ದೇಶದಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವಿಶೇಷವಾಗಿ ಮಧ್ಯಮ ವರ್ಗದ ಗ್ರಾಹಕರು ಚಿನ್ನವನ್ನು ಮುಂದಿನ ದಿನಗಳಲ್ಲಿ ತಮಗೆ ಕಷ್ಟ ಬಂದಾಗ ಅದನ್ನು ಆಪತ್ಬಾಂಧವನ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಾರೆ. ಇನ್ನು ಚಿನ್ನುವನ್ನು ಖರೀದಿ ಮಾಡುವಂತಹ ಯೋಚನೆ ಮಾಡಿದ್ರೆ ಬೆಳಿಗ್ಗೆನೇ ನಿಮಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ ಅಂತ ಹೇಳಬಹುದು. ಹೌದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ ಎಂಬುದಾಗಿ ತಿಳಿದು ಬಂದಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಬಜೆಟ್ ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಮೇಲೆ ಸುಂಕದ ಇಳಿಕೆ ಮಾಡಿರುವ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯವಾದ ಇಳಿಕೆ ಕಂಡುಬರುತ್ತಿದೆ.

ಹೌದು 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ 6341 ರೂಪಾಯಿ ಆಗಿದೆ. 24 ಕ್ಯಾರೆಟ್ ಮೌಲ್ಯದ ಒಂದು ಗ್ರಾಂ ತೂಕದ ಚಿನ್ನದ ಬೆಲೆ 6917 ರೂಪಾಯಿ ಆಗಿದೆ. ಚಿನ್ನದ ಬೆಲೆಯಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ ಅನ್ನೋದಕ್ಕೆ ಇದೇ ಉದಾಹರಣೆ ಎಂದು ಹೇಳ ಬಹುದು. ಹತ್ತು ಗ್ರಾಂ ವಿಚಾರಕ್ಕೆ ಬರೋದಾದ್ರೆ 22 ಕ್ಯಾರೆಟ್ 63410 ರೂಪಾಯಿಗಳಿಗೆ ಹಾಗೂ 24 ಕ್ಯಾರೆಟ್ ಶುದ್ಧತೆಯ ಚಿನ್ನ 69,170 ರೂಪಾಯಿಗಳಿಗೆ ಸ್ಥಗಿತಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಅಂದರೆ ಆಗಸ್ಟ್ ತಿಂಗಳ ನಂತರ ಹಬ್ಬದ ಸೀಸನ್ ಸತತವಾಗಿ ಕಾಣಿಸಿಕೊಳ್ಳುವಂತಹ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಇನ್ನೂ ಸ್ವಲ್ಪ ಏರಬಹುದು ಎಂಬಂತಹ ಮಾಹಿತಿ ಇದೆ. ಆದರೆ ಸದ್ಯಕ್ಕೆ ಬಜೆಟ್ ನಂತರದಿಂದ ಚಿನ್ನದ ಮೇಲಿನ ಟ್ಯಾಕ್ಸ್ ಅನ್ನು ಇಳಿಕೆ ಮಾಡಿರುವ ಕಾರಣದಿಂದಾಗಿ ಚಿನ್ನದ ಬೆಲೆಯಲ್ಲಿ ಗಣನೀಯವಾದ ಕುಸಿತ ಕಂಡು ಬಂದಿದೆ ಅನ್ನೋದನ್ನ ನಾವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಚಿನ್ನದ ಜೊತೆಗೆ ಬೆಳ್ಳಿಯ ದರದ ಬಗ್ಗೆ ಮಾತನಾಡುವುದಾದರೆ 1 ಕೆ.ಜಿ ಬೆಳ್ಳಿಗೆ 89,500 ಆಗಿದೆ. ಮುಂದಿನ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ನಮ್ಮ ಜನರು ಶುಭಸೂಚಕವಾಗಿ ಚಿನ್ನ ಹಾಗೂ ಬೆಳ್ಳಿಯನ್ನು ಖರೀದಿ ಮಾಡುವುದರಿಂದಾಗಿ ಇನ್ನೇನು ಒಂದು ತಿಂಗಳ ಒಳಗಾಗಿ ಖಂಡಿತವಾಗಿ ಚಿನ್ನದ ಬೆಲೆ ಮತ್ತೆ ಏರಿಕೆ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಕಾರಣಕ್ಕಾಗಿ ಈಗ ಚಿನ್ನದ ಬೆಲೆ ಇಳಿಕೆ ಆಗಿರುವ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡಿದ್ರೆ ಖಂಡಿತವಾಗಿ ನೀವು ಲಾಭ ಸಂಪಾದನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿನ್ನ ಖರೀದಿಸುವುದು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಎರಡು ಕೂಡ ಚಿನ್ನದ ಬೆಲೆ ಕಡಿಮೆ ಇದ್ದಾಗ ಲಾಭದಾಯಕವಾಗಿರುತ್ತದೆ.

Gold rate