Gold Rate: ಕೊನೆಗೂ ಕಡಿಮೆಯಾದ ಚಿನ್ನ ಬೆಲೆ; ಎಷ್ಟಾಗಿದೆ ಗೊತ್ತೇ?? ಚಿಲ್ಲರೆ ಹಣಕ್ಕೆ ಸಿಗುತ್ತಿದೆ ಚಿನ್ನ, ಹೋಗಿ ಇಂದೇ ಖರೀದಿ ಮಾಡಿ.

Gold Rate: ಬಂಗಾರವನ್ನು ಬಹುತೇಕ ಮಹಿಳೆಯರು ಇಷ್ಟಪಡುತ್ತಾರೆ. ಅಲ್ಲದೆ ಬಂಗಾರವನ್ನು ಉಳಿತಾಯದ ರೂಪದಲ್ಲೂ ಬಳಸಲಾಗುತ್ತದೆ. ಹೂಡಿಕೆಗೂ ಬಳಸಲಾಗುತ್ತದೆ.ನಮ್ಮ ದೇಶದಲ್ಲಿ ಧಾರ್ಮಿಕವಾಗಿಯೂ ಬಹಳ ಮಹತ್ವದ ಸ್ಥಾನ ಪಡೆದಿದೆ. ಹಾಗಾಗಿ ಭಾರತದಲ್ಲಿ ಬಂಗಾರದ ವ್ಯಾಪಾರ ಬಹಳ ಜೋರಾಗಿಯೇ ನಡೆಯುತ್ತದೆ.

ಚಿನ್ನದ ದರದಲ್ಲಿ ಪ್ರತಿದಿನ ಏರಿಳಿತ ಆಗುತ್ತಲೇ ಇರುತ್ತದೆ. ಈ ಪ್ರವೃತ್ತಿ ಶುಕ್ರವಾರವೂ ಮುಂದುವರಿದಿದೆ. ಶುಕ್ರವಾರ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡಿದ್ದು, ೧೦ ಗ್ರಾಂ ಚಿನ್ನಕ್ಕೆ ಮಾರುಕಟ್ಟೆಯಲ್ಲಿ ೫೬,೫೦೦ ರೂ.ಗೆ ನಿಂತುಕೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರದಲ್ಲಿ ಭಾರೀ ಕುಸಿತ ಕಂಡಿದೆ. ಕಚ್ಚಾ ಬಂಗಾರದ ದರವು ಪ್ರತಿ ಔನ್ಸ್ಗೆ ೧೮೭೮ ಡಾಲರ್ಗೆ ಕುಸಿದಿದೆ. ಇನ್ನು ಬೆಳ್ಳಿಯ ದರವು ೨೨.೧೬ ಡಾಲರ್ನಷ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕಡಿಮೆಯಾಗಿದೆ ಎಂದು ಶೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತಿಚೆಗಷ್ಟೆ ಚಿನ್ನದ ದರವು ಗಗನಮುಖಿಯಾದ ಅಂಶ ಎಲ್ಲರಿಗೂ ತಿಳಿದೆ ಇದೆ. ಅದು ಭಾರತೀಯ ಮಾರುಕಟ್ಟೆಯಲ್ಲಿ ೧೦ ಗ್ರಾಂ ಶುದ್ಧ ಬಂಗಾರಕ್ಕೆ  ೫೮,೮೫೦ರೂ. ತಲುಪಿತ್ತು. ಪ್ರಸ್ತುತ ಚಿನ್ನದ ದರವು ಗರಿಷ್ಟ ಮಟ್ಟಕ್ಕಿಂತ ಪ್ರತಿ ಗ್ರಾಂಗೆ ೨೩೦೦ರೂ.ನಷ್ಟು ಕುಸಿತ ಕಂಡಿದೆ. ಬಂಗಾರದ ವಿಚಾರದಲ್ಲಿ ಇದನ್ನು ದೊಡ್ಡ ಮಟ್ಟದ ಇಳಿಕೆ ಎಂದೇ ವಿವರಿಸಬಹುದಾಗಿದೆ.

ಸರಕು ವಿನಿಮಯ ಮಾರುಕಟ್ಟೆ ತಜ್ಞರ ಪ್ರಕಾರ ಯುಎಸ್ ಡಾಲರ್ ಬಲವರ್ಧನೆಯೂ ಕಚ್ಚಾ ತೈಲದ ಮೇಲೆ ಪರಿಣಾಮ ಬೀರುತ್ತದೆ. ಇದು ಗರಿಷ್ಟ ಮಟ್ಟದಿಂದ ಮತ್ತೆ ಮರಳಲು ಆರಂಭಿಸಿದೆ. ಹೆಚ್ಚುತ್ತಿರುವ ಬಾಂಡ್ ಇಳುವರಿ ಚಿನ್ನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಏನೇ ಇರಲಿ ಚಿನ್ನದ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿರುವುದು ಇದನ್ನು ಕೊಳ್ಳುವವರಿಗೆ ಗೋಲ್ಡನ್ ಟೈಮ್ ಎಂದೇ ಹೇಳಬಹುದು. ಯಾವಾಗಲೂ ಚಿನ್ನದ ದರ ಕಡಿಮೆ ಇದ್ದಾಗ ಖರೀದಿಸಿ ಇಟ್ಟುಕೊಳ್ಳುವುದು ಉತ್ತಮ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಮತವಾಗಿದೆ.

ಐಐಎಫ್ಎಲ್ ಸೆಕ್ಯೂರಿಟಿಸ್ ಉಪಾಧ್ಯಕ್ಷ ( ಸಂಶೋಧನೆ) ಅನುಜ್ ಗುಪ್ತಾ ಅವರ ಪ್ರಕಾರ ಅಮೆರಿಕನ್ ಡಾಲರ್ ಸೂಚ್ಯಂಕ ಬಲವರ್ಧನೆ ಮತ್ತು ಬಾಂಡ್ ಇಳುವರಿ ಹೆಚ್ಚಳದಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ ಪ್ರಾಫಿಟ್ ಬುಕಿಂಗ್ನಿಂದ ಇಳಿಕೆಯಾಗಿರಬಹುದು. ಇದು ತಾತ್ಕಾಲಿಕ. ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ ಕಾಣಬಹುದು ಎಂದು ಅವರು ಅಂದಾಜಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬಂಗಾರದ ದರ ಮತ್ತೆ ಗಗನಮುಖಿಯಾಗುವ ಸಾಧ್ಯತೆ ಇದೆ. ಇದರಿಂದ ಪ್ರತಿ ೧೦ ಗ್ರಾಂ ಚಿನ್ನದ ಬೆಲೆ ೬೫ ಸಾವಿರ ರೂ. ಮುಟ್ಟಿದರೂ ಅಚ್ಚರಿ ಪಡಬೇಕಾದ ಅವಶ್ಯಕತೆ ಇಲ್ಲ.

Gold ratesilver rateಚಿನ್ನದ ಬೆಲೆಬಂಗಾರ