Government Loan: ಸ್ನೇಹಿತರೆ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಡವರಿಗೆ ಹಾಗೂ ಮಾಧ್ಯಮ ವರ್ಗದ ಜನರಿಗೆ ಮತ್ತು ರೈತರಿಗೆ ನೆರವಾಗುವ ರೀತಿಯಲ್ಲಿ ಜಾರಿಗೆ ತಂದಿದೆ. ಇನ್ನು ಈಗ ದೇಶದ ಕುಶಲಕರ್ಮಿಗಳಿಗೆ ನೆರವಾಗುವ ಕಾರಣಕ್ಕಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಬಜೆಟ್ ನಲ್ಲಿ ಈ ಯೋಜನೆಗಾಗಿ 13000 ಕೋಟಿ ರೂಪಾಯಿ ಹಣವನ್ನು ಮೀಸಲಿರಿಸಲಾಗಿದೆ. ಈ ಯೋಜನೆಯಲ್ಲಿ ಕರಕುಶಲಕರ್ಮಿಗಳಿಗೆ ಹೆಚ್ಚಿನ ಗ್ಯಾರೆಂಟಿ ಇಲ್ಲದೆ 2 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳುವಂತಹ ಅವಕಾಶ ನೀಡಲಾಗುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಸರ್ಕಾರದ ಈ ಯೋಜನೆಯಲ್ಲಿ ಕಮ್ಮಾರ ಅಕ್ಕಸಾಲಿಗ ಹೀಗೆ ಕರಕುಶಲ ವೃತ್ತಿಯನ್ನು ಮಾಡುವಂತಹ ವರ್ಗದ ಜನರು ಸಾಲವನ್ನು ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಮೊದಲನೇ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ನೀಡಲಾಗುತ್ತದೆ ಹಾಗೂ ಎರಡನೇ ಹಂತದಲ್ಲಿ 2 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳು
- ಪ್ರಮುಖವಾಗಿ ಆಧಾರ್ ಕಾರ್ಡ್ ಹೊಂದಿರಬೇಕು ಹಾಗೂ ಅದರ ಜೊತೆಗೆ ವೋಟರ್ ಐಡಿ ನಂತಹ ಗುರುತಿನ ಚೀಟಿ ಬೇಕು.
- ಆಕ್ಟಿವ್ ಆಗಿರುವಂತಹ ಮೊಬೈಲ್ ನಂಬರ್ ಇರಬೇಕು ಅದರ ಜೊತೆಗೆ ಪಾನ್ ಕಾರ್ಡ್ ಕೂಡ ಇರಬೇಕು.
- ಜಾತಿ ಹಾಗೂ ಆದಾಯ ಸರ್ಟಿಫಿಕೇಟ್ ಜೊತೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅನ್ನು ಕೂಡ ನೀಡಬೇಕಾಗಿರುತ್ತದೆ.
ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಜಾರಿಗೆ ಬಂದಿರುವಂತಹ ವಿಶ್ವಕರ್ಮ ಯೋಜನೆಯಲ್ಲಿ ನೀವು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೀವು ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತುಂಬಿಸಬೇಕಾಗಿರುತ್ತದೆ. ಹಾಗೂ ಈಗಾಗಲೇ ಮೇಲಿನ ಹೇಳಿರುವಂತಹ ಡಾಕ್ಯುಮೆಂಟ್ ಗಳನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ. ಈ ಮೂಲಕ ನೀವು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
ಹತ್ತಿರದಲ್ಲೇ ಇರುವಂತಹ CSC ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಲ್ಲಿ ನೀಡುವಂತಹ ಸಲಹೆಗಳ ಆಧಾರದ ಮೇಲೆ ಕೂಡ ನೀವು ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ನಾವು ಈ ಮೇಲೆ ಹೇಳಿರುವಂತೆ ಕುಶಲಕರ್ಮಿಗಳ ಸಮುದಾಯಕ್ಕೆ ನೀವು ಸೇರಿದವರಾಗಿರಬೇಕು ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ. ಈ ಸಾಲವನ್ನು ಪಡೆದುಕೊಳ್ಳುವುದರ ಮೂಲಕ ನೀವು ನಿಮ್ಮ ಕುಶಲಕರ್ಮಿ ಕೆಲಸವನ್ನು ಇನ್ನಷ್ಟು ಹೆಚ್ಚಿನ ಸ್ಕೇಲ್ ನಲ್ಲಿ ಮಾಡಬಹುದಾಗಿದೆ.
ಇಂತಹ ಕುಶಲಕರ್ಮಿಗಳ ಆದಾಯವನ್ನು ಹೆಚ್ಚಿಸುವುದಕ್ಕಾಗಿಯೇ ಕೇಂದ್ರ ಸರ್ಕಾರ ಈ ರೀತಿಯ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಇದರ ಉಪಯೋಗವನ್ನು ಪ್ರತಿಯೊಬ್ಬ ಕುಶಲಕರ್ಮಿಗಳು ಕೂಡ ಪಡೆದುಕೊಳ್ಳುವ ಮೂಲಕ ದೇಶವನ್ನು ಉತ್ತಮ ಆರ್ಥಿಕತೆಗೆ ಕೊಂಡೊಯ್ಯುವಂತಹ ದೇಶದ ಪ್ರಧಾನ ಮಂತ್ರಿಗಳ ಪ್ರಯತ್ನಕ್ಕೆ ನೀವು ಕೂಡ ಒಂದು ಹೆಜ್ಜೆಯನ್ನು ಇಡುವಂತಹ ಪ್ರಯತ್ನವನ್ನು ಮಾಡಿ.