Government Rules: ಏನೇ ಆಗಿರ್ಲಿ ಇನ್ನು ಮುಂದೆ ಈ ದಿನ ನೇರವಾಗಿ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಹಣ!

Government Rules: ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇರುವಂತಹ ರಾಜ್ಯದ ಕಾಂಗ್ರೆಸ್ ಸರ್ಕಾರ ತಾವು ಅಧಿಕಾರಕ್ಕೆ ಬಂದ ಮೇಲೆ ಕೂಡ ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ಮಾಸಾಶನದ ರೂಪದಲ್ಲಿ ನೀಡುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಈಗಾಗಲೇ ಈ ಯೋಜನೆ ಅಡಿಯಲ್ಲಿ ಹತ್ತು ಕಂತುಗಳನ್ನು ಸರಿಯಾಗಿ ಕೂಡ ವರ್ಗಾವಣೆ ಮಾಡಲಾಗಿದೆ ಎನ್ನುವಂತಹ ಮಾಹಿತಿ ಕೇಳಿ ಬಂದಿದೆ. ಇನ್ನು 11 ಹಾಗೂ 12ನೇ ಕಂತಿನ ಹಣವನ್ನು ಯಾವಾಗ ವರ್ಗಾವಣೆ ಮಾಡಬಹುದು ಎನ್ನುವುದರ ಬಗ್ಗೆ ರಾಜ್ಯದ ಮಹಿಳೆಯರಲ್ಲಿ ಸಾಕಷ್ಟು ಗೊಂದಲ ಇದೆ ಎಂಬುದಾಗಿ ತಿಳಿದು ಬಂದಿದೆ.

ಈ ವಿಚಾರದ ಬಗ್ಗೆ ರಾಜ್ಯದ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತವಾದ ಹೇಳಿಕೆ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡುವಂತಹ ಕೆಲಸವನ್ನು ಕೂಡ ಈ ಸಂದರ್ಭದಲ್ಲಿ ಮಾಡಿದ್ದಾರೆ. ಬರಬೇಕಾಗಿರುವಂತಹ 11ನೇ ಹಾಗೂ ಮುಂದಿನ ದಿನಗಳಲ್ಲಿ ವರ್ಗಾವಣೆ ಮಾಡಬೇಕಾಗಿರುವಂತಹ 12ನೇ ಕಂತಿನ ಹಣವನ್ನ ಯಾವಾಗ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ರಾಜ್ಯದ ಮಹಿಳೆಯರಲ್ಲಿ ಚಿಂತೆ ಹೆಚ್ಚಿದೆ ಎಂದು ಹೇಳಬಹುದಾಗಿದೆ.

ಜೂನ್ ತಿಂಗಳ ಬರಬೇಕಾಗಿರುವ ಹಣವನ್ನು ಹಾಗೂ ಜುಲೈ ತಿಂಗಳ ಹಣವನ್ನು ಸೇರಿಸಿ ಜುಲೈನಲ್ಲಿಯೇ ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎನ್ನುವುದಾಗಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ಬಗ್ಗೆ ರಾಜ್ಯದ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿರುವ ಪ್ರಕಾರ ಜುಲೈ 20ನೇ ದಿನಾಂಕದ ಒಳಗಾಗಿ ಎರಡು ಕಂತಿನ ಹಣವನ್ನು ಅಂದರೆ ಒಟ್ಟಾರೆಯಾಗಿ 4000 ರೂಪಾಯಿಯನ್ನು ದಾಖಲೆಗಳು ಸರಿಯಾಗಿರುವಂತಹ ಮಹಿಳೆಯರ ಖಾತೆಗೆ ನೇರವಾಗಿ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಸಿಸ್ಟಮ್ ಮೂಲಕ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ನಾವು ಮಾಡಲಿದ್ದೇವೆ ಅನ್ನೋದನ್ನ ಹೇಳಿಕೊಂಡಿದ್ದಾರೆ.

ಇನ್ನು ಒಂದು ವೇಳೆ ಹಣ ಬರ್ತಾ ಇಲ್ಲ ಎನ್ನುವಂತಹ ಸಮಸ್ಯೆಯನ್ನು ಮಹಿಳೆಯರು ಎದುರಿಸುತ್ತಿದ್ದಾರೆ ತಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತಹ ಕೆಲಸವನ್ನು, ಆಧಾರ್ ಕಾರ್ಡ್ ಸೀಡಿಂಗ್, ಆಧಾರ್ ಕಾರ್ಡ್ ಅಪ್ಡೇಟ್ ಹಾಗೂ ರೇಷನ್ ಕಾರ್ಡ್ ಅಪ್ಡೇಟ್ ಗಳಿದಂತಹ ಕೆಲವೊಂದು ಪ್ರಮುಖ ದಾಖಲೆ ಪತ್ರಗಳಿಗೆ ಸಂಬಂಧಪಟ್ಟಂತಹ ಕೆಲಸಗಳನ್ನು ಮಾಡುವುದು ಅತ್ಯಂತ ಪ್ರಮುಖವಾಗಿದೆ ಅನ್ನೋದನ್ನು ಕೂಡ ಈ ಸಂದರ್ಭದಲ್ಲಿ ಅವರು ಜನಸಾಮಾನ್ಯರಿಗೆ ಹೇಳಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಕಾಂತಿನ ಹಣ ಬರಬೇಕು ಅಂತ ಅಂದ್ರೆ ಈ ಕೆಲಸಗಳನ್ನು ನೀವು ಮಾಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ ಅನ್ನೋದನ್ನು ಕೂಡ ತಿಳಿದುಕೊಳ್ಳಿ.

Government Rules