Government Scheme: ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ – ಬಡ್ಡಿ ರಹಿತ ಸಾಲ. 3 ಲಕ್ಷ ಸಾಲ ಕೊಡುತ್ತಾರೆ ಜೊತೆಗೆ ಸಬ್ಸಿಡಿ

Government Scheme: ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎನ್ನುವ ಕಾರಣಕ್ಕಾಗಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಈ ಯೋಜನೆಯ ಮೂಲಕ ಮಾಡಲಾಗುತ್ತಿದೆ. ಬಡ ಹಾಗೂ ಅನಕ್ಷರಸ್ಥ ಮಹಿಳೆಯರಿಗೆ ವಿಶೇಷವಾಗಿ ಈ ಯೋಜನೆಯ ಮೂಲಕ ಬೆಂಬಲವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ 50,000ಕ್ಕೂ ಹೆಚ್ಚಿನ ಮಹಿಳೆಯರು ರಾಜ್ಯದಲ್ಲಿ ಈ ಯೋಜನೆಯ ಮೂಲಕ ಲಾಭವನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಯೋಜನೆಯ ಮೇಲೆ ಸಿಗುವಂತಹ ಸಾಲದ ಬಡ್ಡಿ ದರದ ವಿವರ!

ಮೊದಲಿಗೆ ಈ ಯೋಜನೆಯ ಮೂಲಕ ನೀವು ಅಂದರೆ ಮಹಿಳೆಯರು 3,00,000 ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ವಿಧವೆ, ಅಂಗವಿಕಲರು ಹಾಗೂ ದಲಿತ ವರ್ಗದ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ಸಾಮಾನ್ಯ ಮಹಿಳೆಯರಿಗೆ ಹತ್ತರಿಂದ ಹನ್ನೆರಡು ಪ್ರತಿಶತ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಇನ್ನು ನಿಮ್ಮ ಕುಟುಂಬದ ವರ್ಷದ ಆದಾಯವನ್ನು ಸರಿಯಾದ ರೀತಿಯಲ್ಲಿ ಗಮನ ವಹಿಸಿದ ನಂತರ ನೀವು ಪಡೆದುಕೊಂಡಿರುವಂತಹ ಸಾಲದಲ್ಲಿ 30% ಸಬ್ಸಿಡಿಯನ್ನು ನೀಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತೆ. ಈ ಸಲ ಸೌಲಭ್ಯಗಳನ್ನು ನಿಮ್ಮ ಬದುಕನ್ನು ಸ್ವಾವಲಂಬಿಯಾಗಿ ನಡೆಸಿಕೊಳ್ಳುವುದಕ್ಕಾಗಿ ಬೇಕಾಗಿರುವಂತಹ ಚಿಕ್ಕಪುಟ್ಟ ವ್ಯಾಪಾರಗಳನ್ನು ಪ್ರಾರಂಭ ಮಾಡುವ ಮೂಲಕ ಬಳಸಿಕೊಳ್ಳಬಹುದಾಗಿದೆ.

ಉದ್ಯೋಗಿನಿ ಯೋಜನೆ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರೋ ಅರ್ಹತೆ

  • 18 ರಿಂದ 55 ವರ್ಷದ ವಯಸ್ಸಿನ ನಡುವೆ ಇರುವಂತಹ ಭಾರತೀಯ ಮಹಿಳೆಯರಾಗಿರಬೇಕು.
  • ಇನ್ನು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವಂತಹ ಮಹಿಳೆಯರ ಕುಟುಂಬ ವಾರ್ಷಿಕವಾಗಿ 1.50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರಬಾರದು.
  • ಇನ್ನು ಸಾಲ ಪಡೆದುಕೊಳ್ಳುವಂತಹ ಮೊತ್ತ ಮೂರು ಲಕ್ಷ ರೂಪಾಯಿಗಳನ್ನು ಮೀರಿರಬಾರದು.
  • ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದೆಯಾ ಇಲ್ವಾ ಅನ್ನೋದನ್ನ ಚೆಕ್ ಮಾಡಲಾಗುತ್ತದೆ.
  • ಈ ಹಿಂದೆ ಯಾವುದಾದರೂ ಯೋಜನೆಯಲ್ಲಿ ಸಾಲವನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡದೇ ಇದ್ರೆ ನಿಮಗೆ ಸಾಲ ಸಿಗಲ್ಲ.
  • ಅಂಗವಿಕಲ ಹಾಗೂ ವಿಧವಾ ಮಹಿಳೆಯರಿಗೆ ಕುಟುಂಬದ ವಾರ್ಷಿಕ ಆದಾಯದ ಯಾವುದೇ ಮಿತಿ ಇರುವುದಿಲ್ಲ.

ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು!

  • ಆಧಾರ್ ಕಾರ್ಡ್ ಮತ್ತು ಯೋಜನೆಯಗೆ ಅರ್ಜಿ ಸಲ್ಲಿಸುತ್ತಿರುವಂತಹ ಮಹಿಳೆಯ ಬರ್ತ್ ಸರ್ಟಿಫಿಕೇಟ್.
  • ಎರಡು ಪಾಸ್ ಪೋರ್ಟ್ ಸೈಜ್ ಫೋಟೋ.
  • ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ತಮ್ಮ ಬಿಪಿಎಲ್ ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.
  • ಅರ್ಜಿ ಹಾಗೂ ಇನ್ಕಮ್ ಸರ್ಟಿಫಿಕೇಟ್ ಪ್ರತಿ ಬೇಕಾಗಿರುತ್ತದೆ.
  • ಜಾತಿ ದೃಢೀಕರಣ ಪತ್ರ, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಹಾಗೂ ನಿಮ್ಮ ಅಡ್ರೆಸ್ ಪ್ರೂಫ್ ಬೇಕಾಗಿರುತ್ತದೆ.

ಉದ್ಯೋಗಿನಿ ಯೋಜನೆಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ!

  • ಅಗತ್ಯ ಇರುವಂತಹ ಡಾಕ್ಯುಮೆಂಟ್ ಗಳನ್ನು ನಿಮ್ಮ ಜೊತೆಗೆ ಹಿಡಿದುಕೊಂಡು ಹತ್ತಿರದ ಬ್ಯಾಂಕಿನ ಬ್ರಾಂಚಿಗೆ ಬಂದು ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವಂತಹ ಅರ್ಜಿ ಪ್ರತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
  • ಅರ್ಜಿ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿದ ನಂತರ ಡಾಕ್ಯೂಮೆಂಟ್ಸ್ಗಳ ಫೋಟೋ ಕಾಪಿಯನ್ನು ಅದಕ್ಕೆ ಲಗತ್ತಿಸಬೇಕು.
  • ನಿಮ್ಮ ಫೋಟೋವನ್ನು ಕೂಡ ಅದಕ್ಕೆ ಅಟ್ಯಾಚ್ ಮಾಡಿದ ನಂತರ ಬ್ಯಾಂಕಿನ ಅಧಿಕಾರಿಗಳಿಗೆ ನೀವು ಇದನ್ನ ಸಬ್ಮಿಟ್ ಮಾಡಬೇಕು. ಅರ್ಜಿ ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಿದ ಮೇಲೆ ಅಧಿಕಾರಿಗಳು ನಿಮ್ಮ ಲೋನ್ ಹಣವನ್ನು ಮಂಜೂರು ಮಾಡುವಂತಹ ಕೆಲಸವನ್ನು ಮಾಡುತ್ತಾರೆ.
government scheme