Government Scheme: ಕೆಲಸ ಬಿಟ್ಟವರಿಗೂ ಕೂಡ ಸರ್ಕಾರದಿಂದ ಸಿಗುತ್ತೆ 25,000. ಏನಿದು ಯೋಜನೆ ಹೇಗೆ ಪಡೆದುಕೊಳ್ಳುವುದು? ಇಲ್ಲಿದೆ ಮಾಹಿತಿ!

Government Scheme: ಕರ್ನಾಟಕ ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವ ಆಗಿರುವಂತಹ ಪ್ರಿಯಾಂಕ್ ಖರ್ಗೆ ಉದ್ಯೋಗವನ್ನು ತೊರೆದವರಿಗೆ ಉದ್ಯಮಶೀಲತೆಯನ್ನು ಹೆಚ್ಚಿಸಲು ವರ್ಷಕ್ಕೆ 25000 ಹಣವನ್ನು ನೀಡುವಂತಹ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಹಾಗಿದ್ದರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಒಂದು ವೇಳೆ ಹೊಸ ಉದ್ಯಮವನ್ನು ಪ್ರಾರಂಭ ಮಾಡುವ ದೃಷ್ಟಿಯಲ್ಲಿ ಯಾರಾದರೂ ಉದ್ಯೋಗವನ್ನು ತೊರೆದಿದ್ರೆ ಅವರಿಗೆ ಸಹಾಯ ಆಗುವ ದೃಷ್ಟಿಯಲ್ಲಿ ಒಂದು ವರ್ಷಕ್ಕೆ ತಮ್ಮ ಕನಿಷ್ಠ ಖರ್ಚುಗಳನ್ನು ನೋಡಿಕೊಳ್ಳುವುದಕ್ಕೆ ಸಹಾಯ ಆಗುವ ರೀತಿಯಲ್ಲಿ 25,000 ರೂಪಾಯಿ ಹಣವನ್ನು ಅವರಿಗೆ ನೀಡುವಂತಹ ಯೋಜನೆಯನ್ನು ಸರ್ಕಾರ ಮಾಡಿದೆ. ಅದರಲ್ಲಿ ವಿಶೇಷವಾಗಿ ಈ ಯೋಜನೆಯನ್ನು ಹೊಸದಾಗಿ ಕರ್ನಾಟಕ ಸರ್ಕಾರದ ಅಡಿಯಲ್ಲಿ ಪ್ರಾರಂಭಿಸುವಂತಹ ಸ್ಟಾರ್ಟ್ ಅಪ್ ಗಳಿಗೆ ಸಹಾಯಕ ಆಗುವ ರೀತಿಯಲ್ಲಿ ಜಾರಿಗೆ ತರಲಾಗಿದೆ.

ಈ ಆರ್‌ಜಿಇಪಿ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಆರ್ ಜಿ ಪಿ ಸೈನ್ಸ್ ಅಥವಾ ಇಂಜಿನಿಯರಿಂಗ್ ಹಿನ್ನಲೆಯನ್ನು ಹೊಂದಿರುವಂತಹ ಯುವ ಉದ್ಯಮಿಗಳಿಗೆ ಈ ಯೋಜನೆಯ ಒದಗಿಸುವಂತಹ ಇರಾದೆಯನ್ನು ಸರ್ಕಾರ ಹೊಂದಿದೆ ಎಂಬುದಾಗಿ ತಿಳಿಸಲಾಗಿದೆ. 12 ತಿಂಗಳವರೆಗೂ ಕೂಡ 25,000 ರೂಪಾಯ ಹಣವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಕಷ್ಟು ಜನರು ಅಥವಾ ಸಂಸ್ಥೆಗಳು ನೋಂದಾಯಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕರ್ನಾಟಕ ರಾಜ್ಯ ಸರ್ಕಾರದ ಜೊತೆಗೆ ನೋಂದಾಯಿಸಿಕೊಳ್ಳುವಂತಹ ಸ್ಟಾರ್ಟ್ ಅಪ್ ಗಳಿಗೆ ವಿದೇಶಿ ಮಾರುಕಟ್ಟೆಯನ್ನು ಕೂಡ ಖಚಿತಪಡಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿಕೊಂಡಿದ್ದಾರೆ. ಇನ್ನು ಈ ರೀತಿಯ ಹೊಸ ಯೋಜನೆಯ ಮೂಲಕ ಕೇವಲ ಸ್ಟಾರ್ಟ್ ಗಳಿಗಾಗಿ ಈ ರೀತಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಯಾವುದೇ ರಾಜ್ಯ ಸರ್ಕಾರ ಕೂಡ ಸಿದ್ದ ಇರುವುದಿಲ್ಲ ಆದರೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೊಸದಾಗಿ ಉದ್ಯಮವನ್ನು ಪ್ರಾರಂಭ ಮಾಡುವಂತಹ ಯುವ ಜನತೆಗೆ ಪೂರಕವಾಗಿರುವಂತಹ ವಾತಾವರಣವನ್ನು ನಿರ್ಮಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಕ್ಕೆ ಹೊರಟಿದೆ ಅನ್ನೋದನ್ನ ನಾವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆರ್ಥಿಕ ಸಹಾಯದ ಜೊತೆಗೆ ಕರ್ನಾಟಕ ಸರ್ಕಾರದ ಜೊತೆಗೆ ನೋಂದಾಯಿಸಿಕೊಳ್ಳುವಂತಹ ಹೊಸ ಸ್ಟಾರ್ಟ್ ಅಪ್ ಗಳಿಗೆ ತಕ್ಕದಾಗಿರುವಂತಹ ಮಾರುಕಟ್ಟೆಯನ್ನು ಕೂಡ ಸಿದ್ಧಪಡಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.

government scheme