Govt.Policy: ಹೆಣ್ಣು ಮಗು ಹುಟ್ಟಿದ್ರೆ ಟೆನ್ಶನ್ ಇಲ್ಲ, ಹುಟ್ಟುದಾಗಿನಿಂದ ಶಿಕ್ಷಣದವರೆಗೂ ಸರ್ಕಾರದ ಜವಾಬ್ದಾರಿ, ನೀವು ಇಷ್ಟು ಮಾಡಿದ್ರೆ ಸಾಕು!

Govt.Policy: ನಮ್ಮ ಕೇಂದ್ರ ಸರ್ಕಾರ ಈಗ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಮ್ದು ಬೇಟಿ ಬಚಾವೋ ಬೇಟಿ ಪಢಾವೋ ಮೂಲಕ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುತ್ತಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗಬೇಕು, ಅವರಿಗೆ ಜ್ಞಾನ ಇರಬೇಕು ಎಂದು ಹಲವು ಯೋಜನೆಗಳನ್ನು ತಂದಿದೆ. ಆದರೆ ಈ ಹಿಂದಿನ ಸರ್ಕಾರಗಳು ಕೂಡ ಹೆಣ್ಣುಮಕ್ಕಳಿಗಾಗಿ ಅವರ ವಿದ್ಯಾಭ್ಯಾಸಕ್ಕಾಗಿ ಯೋಜನೆಯೊಂದನ್ನು ಜಾರಿಗೆ ತಂದಿತ್ತು. ಅದು ಬಾಲಿಕಾ ಸಮೃದ್ಧಿ ಯೋಜನೆ ಆಗಿದೆ. ಇದನ್ನೂ ಓದಿ: Film News:ಅಧ್ಬುತವಾಗಿ ವಿಲನ್ ಪಾತ್ರ ನಿಭಾಯಿಸುತ್ತಿದ್ದ ನಟ ಶೋಭರಾಜ್ ಆಕ್ಟಿಂಗ್ ಚಂದನವನಕ್ಕೆ ಬೇಡವಾಯ್ತಾ? ಏನನ್ನುತ್ತೆ ನೋಡಿ ಗಾಂಧಿ ನಗರ!

ಈ ಯೋಜೆನೆಯನ್ನು 1997ರಲ್ಲಿ ಜಾರಿಗೆ ತರಲಾಗಿತ್ತು. ಈ ಯೋಜನೆಯಲ್ಲಿ ಸಿಗುವ ಲಾಭ ಏನು ಎಂದರೆ, ಹೆಣ್ಣುಮಗು ಹುಟ್ಟಿದಾಗಿನಿಂದ ಆಕೆಯ ಪೂರ್ತಿ ಓದಿಗೆ ಸರ್ಕಾರ ಹಣಕಾಸಿನ ಸಹಾಯ ಮಾಡುತ್ತದೆ. ಹೆಣ್ಣುಮಗು ಹುಟ್ಟಿದ ತಕ್ಷಣದಿಂದಲೇ ಮಗುವಿನ ತಾಯಿಗೆ 500 ರೂಪಾಯಿಗಳನ್ನು ಸರ್ಕಾರ ನೀಡುತ್ತದೆ. ಬಳಿಕ ಮಗು 10ನೇ ತರಗತಿಯಲ್ಲಿ ಓದುವ ವರೆಗು ಪ್ರತಿ ಹಂತದ ಶಿಕ್ಷಣಕ್ಕೂ ಸರ್ಕಾರದಿಂದ ನಿಮಗೆ ಸಹಾಯ ಸಿಗುತ್ತದೆ. ಈ ಯೋಜನೆಯ ಲಾಭವನ್ನು ನಗರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ವಾಸ ಮಾಡುವ..

ಹೆಣ್ಣುಮಗುವಿನ ತಂದೆ ತಾಯಿ ಅರ್ಹರಾಗುತ್ತಾರೆ, ಹಾಗೆಯೇ ಇವರ ಹತ್ತಿರ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಒಂದು ಮನೆಯ ಇಬ್ಬರು ಹೆಣ್ಣುಮಕ್ಕಳು ಮಾತ್ರ ಈ ಯೋಜನೆಯ ಲಾಭ ಪಡೆಯಲು ಸಾಧ್ಯ. ಈ ಯೋಜನೆಯ ಲಾಭವನ್ನು ನಿಮ್ಮ ಮಗು ಪಡೆಯಬೇಕು ಎಂದರೆ, ನಿಮ್ಮ ಮಗುವಿನ ಜನನ ಪ್ರಮಾಣ ಪತ್ರ, ತಂದೆ ತಾಯಿಯ ಅಡ್ರೆಸ್ ಪ್ರೂಫ್ ಅಥವಾ ರಿಲೇಟಿವ್ ಯಾರಾದರೂ ಒಬ್ಬರ ಐಡಿ ಇದಕ್ಕಾಗಿ ನೀವು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಇದರಲ್ಲಿ ಯಾವುದಾದರೂ ಒಂದನ್ನು ನೀಡಬಹುದು.

ಬಾಲಿಕಾ ಸಮೃದ್ಧಿ ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಹುದು. ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸೇವಾ ಕೇಂದ್ರಗಳಲ್ಲಿ ನಿಮಗೆ ಫಾರ್ಮ್ ಸಿಗುತ್ತದೆ. ನೀವು ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ನಗರದ ಕುಟುಂಬಗಳಿಗೆ ಹಾಗೂ ಗ್ರಾಮೀಣ ಕುಟುಂಬಗಳಿಗೆ ಬೇರೆ ಬೇರೆ ರೀತಿಯಲ್ಲಿ ಅರ್ಜಿ ಇರುತ್ತದೆ, ಅದೆಲ್ಲವನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ಅರ್ಜಿಯನ್ನು ಸಲ್ಲಿಸಿ.

ಈ ಬಾಲಿಕಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಹೆಣ್ಣುಮಗುವಿನ ಶಿಕ್ಷಣಕ್ಕಾಗಿ ವಾರ್ಷಿಕವಾಗಿ ವೇತನ ಕೊಡುತ್ತದೆ. 1 ರಿಂದ 3ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ₹300 ರೂಪಾಯಿ, 4ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ₹500 ರೂಪಾಯಿ. 5ನೇ ತರಗತಿ ವಿದ್ಯಾರ್ಥಿಗಳಿಗೆ ₹600 ರೂಪಾಯಿ, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ₹700 ರೂಪಾಯಿ, 8ನೇ ತರಗತಿ ವಿದ್ಯಾರ್ಥಿಗಳಿಗೆ ₹800 ರೂಪಾಯಿ, 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ₹1000 ವಿದ್ಯಾರ್ಥಿ ವೇತನ ಸಿಗುತ್ತದೆ. ಈ ಯೋಜನೆ ಗ್ರಾಮೀಣ ಭಾಗದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ವತಿಯಿಂದ ಕೆಲಸ ಮಾಡುತ್ತದೆ, ನಗರಗಳಲ್ಲಿ ಆರೋಗ್ಯ ಇಲಾಖೆಯು ಈ ಯೋಜನೆಯನ್ನು ನಿರ್ವಹಿಸುತ್ತದೆ.

Best News in KannadaCentral Govt SchemeGirlgovt policyKannada NewsKannada Trending NewsLive News KannadaNews in Kannada