Gruhalakshmi Scheme: ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ವಾ? ಹಾಗಿದ್ರೆ ಇಲ್ಲಿ ಚೆಕ್ ಮಾಡಿ!

Gruhalakshmi Scheme: ಯೋಜನೆಯ ಹಣ ಇತ್ತೀಚಿನ ದಿನಗಳಲ್ಲಿ ತಡವಾಗಿ ವರ್ಗಾವಣೆಯಾಗುವುದು ಅಥವಾ ಕೆಲವರಿಗೆ ವರ್ಗಾವಣೆ ಆಗದೆ ಇರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ ಎಂದು ಹೇಳಬಹುದಾಗಿದೆ. ಕೆಲವರು ಅರ್ಹತೆ ಇಲ್ಲದೆ ಇದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇನ್ಮುಂದೆ ಅವರು ಪಡೆದುಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ಅದನ್ನೇ ಪರಿಶೀಲಿಸಿ ಯಾರಿಗೆ ಹಣವನ್ನು ವರ್ಗಾವಣೆ ಮಾಡಬೇಕು ಮಾಡಬಾರದೋ ಎನ್ನುವಂತ ಲೆಕ್ಕಾಚಾರವನ್ನು ಮಾಡಿಕೊಂಡೆ ಹಣವನ್ನು ವರ್ಗಾವಣೆ ಮಾಡುತ್ತಿದ್ದಾರೆ. ಒಂದು ವೇಳೆ ನಿಮಗೆ ಈ ಯೋಜನೆಯ ಹಣ ವರ್ಗಾವಣೆ ಆಗದೆ ಇದ್ರೆ ಅದನ್ನ ಯಾವ ರೀತಿಯಲ್ಲಿ ಚೆಕ್ ಮಾಡುವುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಗೃಹಲಕ್ಷ್ಮಿ ಯೋಜನೆಯ ಕಂತುಗಳು ಕ್ರೆಡಿಟ್ ಆಗಿರುವ ಬಗ್ಗೆ ಇಲ್ಲಿ ಚೆಕ್ ಮಾಡಿ.

  • https://mahitikanaja.karnataka.gov.in/home ಮೊದಲಿಗೆ ಈ ವೆಬ್ ಸೈಟ್ ಅನ್ನು ಕ್ಲಿಕ್ ಮಾಡಿ ಓಪನ್ ಮಾಡಬೇಕು.
  • ನಂತರ ಅಲ್ಲಿ ಕಾಣುವಂತಹ ಗೃಹಲಕ್ಷ್ಮಿ ಯೋಜನೆಯ ಡೀಟೇಲ್ಸ್ ಎನ್ನುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸಬೇಕಾಗಿರುತ್ತದೆ.
  • ಅದಾದ ಮೇಲೆ ಕಾಣಿಸಿಕೊಳ್ಳುವಂತಹಡೀಟೇಲ್ಸ್ ಎನ್ನುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
  • ಆಗ ಅಲ್ಲಿ ನೀವು ಯಾವ್ಯಾವ ತಿಂಗಳು ಎಷ್ಟು ಹಣ ಯಾವಾಗ ಜಮೆ ಆಗಿದೆ ಅನ್ನೋದನ್ನ ಸಂಪೂರ್ಣವಾಗಿ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಇದನ್ನು ನೀವು ನಿಮ್ಮ ಫೋನ್ ಬಳಸಿ ತಿಳಿದುಕೊಳ್ಳಬಹುದು ಅಥವಾ ನಿಮ್ಮ ಪರಿಚಯಿಸ್ಥರ ಫೋನನ್ನು ಬಳಸಿ ಕೂಡ ತಿಳಿದುಕೊಳ್ಳಬಹುದಾಗಿದೆ. ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಕಳೆದ ಮೂರು ಕಂತುಗಳ ಹಣವನ್ನು ಪಡೆದುಕೊಳ್ಳದೆ ಇರುವವರಿಗೆ ಖಾತೆಗೆ ನೇರವಾಗಿ 6000 ರೂಪಾಯಿ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಲಿದೆ ಅನ್ನುವುದಾಗಿ ತಿಳಿದುಬಂದಿದೆ.

ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳಾಗಲು ಮಹಿಳೆಯರು ಈ ಅರ್ಹತೆಗಳನ್ನು ಹೊಂದಿರಬೇಕು!

  • ಮನೆಯಲ್ಲಿ ಯಾವುದೇ ರೇಷನ್ ಕಾರ್ಡ್ ಇರಲಿ ಆದರೆ ಆ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಸ್ಥಾನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುವಂತಹ ಮಹಿಳೆಯ ಹೆಸರು ಇರಬೇಕು.
  • ಒಂದು ಕುಟುಂಬದಲ್ಲಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯ.
  • ಒಂದು ವೇಳೆ ಗ್ರಹ ಲಕ್ಷ್ಮಿ ಯೋಜನೆ ಹಣವನ್ನು ಪಡೆದುಕೊಳ್ಳುತ್ತಿರುವಂತಹ ಮಹಿಳೆ ಅಥವಾ ಅವರ ಪತಿ ಟ್ಯಾಕ್ಸ್ ಕಟ್ತಾ ಇದ್ರೆ ಅವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗುವುದಿಲ್ಲ.

ಒಂದು ವೇಳೆ ಗ್ರಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿಲ್ಲ ಅಂದ್ರೆ ನೀವು ಕೆವೈಸಿ ಅಪ್ಡೇಟ್ ಮಾಡಿರುವುದಿಲ್ಲ ಅಥವಾ ಈ ಮೇಲೆ ಹೇಳಿರುವಂತಹ ಅರ್ಹತೆಗಳಲ್ಲಿ ಯಾವುದಾದರೂ ಉಲ್ಲಂಘನೆ ಆಗಿರ್ಬೋದು ಅನ್ನೋದನ್ನ ಒಂದು ವೇಳೆ ಈ ಉಲ್ಲಂಘನೆ ಆಗಿದೆ ಅಂದ್ರೆ ಅದು ತಪ್ಪಾಗಿದ್ದಲ್ಲಿ ನೀವೇ ಸಂಬಂಧಪಟ್ಟಂತಹ ಇಲಾಖೆಗೆ ಹೋಗಿ ಮಾಹಿತಿಯನ್ನು ಒದಗಿಸ ಬೇಕಾಗಿರುತ್ತದೆ.