Gruhalakshmi Scheme:ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣದ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

Gruhalakshmi Scheme: ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರ 2023ರಲ್ಲಿ ವಿಧಾನಸಭಾ ಚುನಾವಣೆ ಗೆದ್ದಾಗ ಐದು ಪ್ರಮುಖ ಯೋಜನೆಗಳನ್ನು ಜನಸಾಮಾನ್ಯರಿಗೆ ನೀಡುವಂತಹ ವಾಗ್ದಾನವನ್ನು ಮಾಡಿತ್ತು. ಅಂದಿನಿಂದ ಪ್ರಾರಂಭಿಸಿ ಬಹುತೇಕ ಐದು ಯೋಜನೆಗಳನ್ನು ಕೂಡ ಜನಸಾಮಾನ್ಯರಿಗೆ ಸರಿಯಾದ ಸಮಯಕ್ಕೆ ತಲುಪಿಸುವಂತಹ ಕೆಲಸವನ್ನು ಸರ್ಕಾರ ಮಾಡಿಕೊಂಡು ಬಂದಿತ್ತು.

ಆದರೆ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸೋತ ನಂತರದಿಂದ ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ಸೇರಬೇಕಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಿಕೊಂಡು ಬಂದಿಲ್ಲ ಎಂಬ ಮಾಹಿತಿ ದೊರಕಿದೆ. ಆರಂಭದಲ್ಲಿ ಮಹಿಳೆಯರು ಈ ವಿಚಾರದ ಬಗ್ಗೆ ಸಾಕಷ್ಟು ಅಸಮಾಧಾನವನ್ನು ಹೊರಹಾಕಿದ್ರು. ಆ ಸಂದರ್ಭದಲ್ಲಿ ಇಲಾಖೆ ಬ್ಯಾಂಕಿನ ಖಾತೆಗಳ ಕೆವೈಸಿ ಅಪ್ಡೇಟ್ ಅನ್ನು ಮಾಡಿಲ್ಲದೆ ಇರುವ ಕಾರಣಕ್ಕಾಗಿ ಈ ರೀತಿ ಆಗುತ್ತಿದೆ ಎಂಬುದಾಗಿ ಮತ್ತೆ ಅಪ್ಲಿಕೇಶನ್ ಹಾಕೋದಕ್ಕೆ ಕೂಡ ಹೇಳಿದ್ರು. ಆದರೆ ಇದೆಲ್ಲ ಮಾಡಿದ ನಂತರ ಕೂಡ ಮತ್ತೆ ಸಮಸ್ಯೆ ಕಂಡು ಬರ್ತಾ ಇರೋದು ಸಾಬೀತಾಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಈಗ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸರಿಯಾದ ಮಾಹಿತಿಯನ್ನು ನೀಡಿದ್ದು ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣದ ಬಗ್ಗೆ ಸರಿಯಾದ ಅಪ್ಡೇಟ್ ಅನ್ನು ಕೂಡ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣದ ಬಗ್ಗೆ ಬಂದಿರುವ ಅಪ್ಡೇಟ್ ಏನು ಗೊತ್ತಾ?

ಪ್ರತಿ ತಿಂಗಳು 2000 ರೂಪಾಯಿ ಕಂತಿನ ಹಣ ಸಿಗುತ್ತಿದ್ದ ಗೃಹಲಕ್ಷ್ಮಿ ಯೋಜನೆ ಈಗ ಸಿಕ್ತಾ ಇಲ್ಲ ಎನ್ನುವುದರ ಬಗ್ಗೆ ಇಲಾಖೆಯಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಹಣ ವರ್ಗಾವಣೆ ಆಗಿರುವಂತಹ ಡಿ ಬಿ ಟಿ ಸಿಸ್ಟಮ್ ನಲ್ಲಿ ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಆ ಸಮಸ್ಯೆಯನ್ನು ಈಗ ಪರಿಹರಿಸುವಂತಹ ಕೆಲಸ ವೇಗವಾಗಿ ಸಾಗಿ ಬರುತ್ತಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ವಿಚಾರದ ಬಗ್ಗೆ ಈಗ ಅಧಿಕೃತವಾಗಿ ಮಾತನಾಡಿರುವಂತಹ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ ಯಾವಾಗ ಬರುತ್ತೆ ಎನ್ನುವಂತಹ ಮಾಹಿತಿಯನ್ನು ಕೂಡ ನೀಡಿದ್ದಾರೆ.

ಹೌದು ಸಚಿವರೆ ಅಧಿಕೃತವಾಗಿ ಹೇಳಿರುವ ಮಾಹಿತಿಯ ಪ್ರಕಾರ ಇನ್ನು ಹತ್ತು ದಿನಗಳ ಒಳಗಾಗಿ ಪ್ರತಿಯೊಂದು ದಾಖಲೆ ಹಾಗೂ ಕೆವೈಸಿ ಅಪ್ಡೇಟ್ ಮಾಡಿರುವಂತಹ ಮಹಿಳೆಯರ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡುವಂತಹ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂಬುದಾಗಿ ಹೇಳಿದ್ದಾರೆ.

Gruhalakshmi Scheme