Gruhalakshmi Scheme:ಗೃಹಲಕ್ಷ್ಮಿಯ ಬಾಕಿ ಹಣ ಇವತ್ತು ಈ ಜಿಲ್ಲೆಗಳಿಗೆ ಮೊದಲಿಗೆ ಬಿಡುಗಡೆಯಾಗುತ್ತದೆ; ನಿಮಗೂ ಬರುತ್ತೆ ಚೆಕ್ ಮಾಡಿ!

Gruhalakshmi Scheme: ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಆಗಸ್ಟ್ ತಿಂಗಳಿನಿಂದಲೂ ಕೂಡ ನಡೆದುಕೊಂಡು ಬರುತ್ತಿದೆ. ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿ ಹಣವನ್ನು ಮಾತಾಶನದ ರೂಪದಲ್ಲಿ ನೀಡುವ ಮೂಲಕ ಅವರಿಗೆ ಆರ್ಥಿಕ ಸಹಾಯವನ್ನು ಮಾಡುವಂತಹ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಹೇಳಬಹುದಾಗಿದೆ. ರಾಜ್ಯ ಸರ್ಕಾರ ಈ ಕೆಲಸವನ್ನು ಲೋಕಸಭೆಯ ಚುನಾವಣೆಯವರೆಗೂ ಕೂಡ ಸರಿಯಾಗಿ ಮಾಡಿಕೊಂಡು ಬಂದಿತ್ತು ಅನ್ನೋದನ್ನ ನೀವೆಲ್ಲರೂ ತಿಳಿದುಕೊಳ್ಳಬಹುದಾಗಿದೆ. ಆದರೆ ಲೋಕಸಭಾ ಚುನಾವಣೆಯ ರಿಸಲ್ಟ್ ನಂತರದಿಂದ ಸರಿಯಾದ ರೀತಿಯಲ್ಲಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡುವ ಕೆಲಸವನ್ನು ಮಾಡಿಕೊಂಡು ಬಂದಿಲ್ಲ ಎಂಬುದಾಗಿ ಎಲ್ಲಾ ಕಡೆ ಆರೋಪಗಳು ಕೇಳಿ ಬರುತ್ತಿವೆ.

ಈಗ ತಡವಾಗಿ ಬರುತ್ತಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ಎಂಬುದಾಗಿ ಕಾಯುತ್ತಿದಂತಹ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ಜೂನ್ ಹಾಗೂ ಜುಲೈ ತಿಂಗಳ ಹಣ ಸಿಗದೆ ಕಾಯುತ್ತಿದಂತಹ ಮಹಿಳೆಯರಿಗೆ ಕೊನೆಗೂ ಕೂಡ ಇವತ್ತು ಅಂದ್ರೆ ಆಗಸ್ಟ್ 6ನೇ ದಿನಾಂಕದಂದು ಮೊದಲ ಹಂತವಾಗಿ ಈ ಕೆಲವು ಜಿಲ್ಲೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದ್ದು ಬನ್ನಿ ಆ ಜಿಲ್ಲೆಗಳು ಯಾವುವು ಎಂಬುದನ್ನು ತಿಳಿಯೋಣ.

ಜೂನ್ ಹಾಗೂ ಜುಲೈ ತಿಂಗಳ ಬಾಕಿ ಹಣವನ್ನು ಮೊದಲಿಗೆ ಈ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ!

  • ಬೀದರ್
  • ಕಲ್ಬುರ್ಗಿ
  • ಬಳ್ಳಾರಿ
  • ವಿಜಯಪುರ
  • ರಾಯಚೂರು
  • ಗದಗ
  • ಬಾಗಲಕೋಟೆ
  • ಹಾವೇರಿ
  • ಕೊಪ್ಪಳ
  • ಯಾದಗಿರಿ
  • ಚಿತ್ರದುರ್ಗ
  • ಬೆಂಗಳೂರು
  • ಕೋಲಾರ

ಇವಿಷ್ಟು ಜಿಲ್ಲೆಗಳಿಗೆ ಇವತ್ತು ಮೊದಲ ಹಂತವಾಗಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವಂತಹ ಕಂತಿನ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂಬುದಾಗಿ ಸಚಿವಾಲಯದಿಂದ ತಿಳಿದುಬಂದಿದೆ. ಈ ವಿಚಾರದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯ ಹಾಗೂ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಎರಡು ಕಂತಿನ ಹಣ ಸಿಗದೆ ಕಾಯುತ್ತಿರುವ ಮಹಿಳೆಯರು ಇನ್ಮುಂದೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವರಿಗೆ ಸೇರಬೇಕಾಗಿರುವಂತಹ ಗ್ರಹಲಕ್ಷ್ಮಿ ಯೋಜನೆಯ ಕಂತಿನ ಹಣ ಡಿ ಬಿ ಟಿ ಮೂಲಕ ನೇರವಾಗಿ ನಿಮ್ಮ ಖಾತೆಗೆ ಬಂದು ಸೇರಲಿದೆ. ಇದಾದ ನಂತರ ಎರಡನೇ ಹಂತದಲ್ಲಿ ರಾಜ್ಯದಲ್ಲಿರುವ ಉಳಿದ ಜಿಲ್ಲೆಗಳ ಮಹಿಳೆಯರಿಗೆ ಹಣ ವರ್ಗಾವಣೆ ಆಗಲಿದೆ.

Gruhalakshmi Scheme