Gruhalakshmi Scheme: ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ: ಲಕ್ಷಾಂತರ ಮಹಿಳೆಯರಿಗೆ ನಿರಾಸೆ!

Gruhalakshmi Scheme: ಗೃಹಲಕ್ಷ್ಮಿ ಯೋಜನೆ ಈಗಾಗಲೇ ಆರಂಭವಾಗಿದ್ದು ಸಾಕಷ್ಟು ಮಹಿಳೆಯರಿಗೆ 2000 ಗಳು ಅವರ ಖಾತೆಗೆ ಜಮಾ ಆಗಿದೆ. ಆದರೆ ಇನ್ನೂ ಹಲವರಿಗೆ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಒಂದು ವಾರ ಕಳೆದರೂ ಹಣ ಬಂದಿಲ್ಲ ಹಾಗಾಗಿ ಅರ್ಜಿ ಸಲ್ಲಿಸಿದ ಹಲವು ಮಹಿಳೆಯರು ಚಿಂತೆಗೊಳಗಾಗಿದ್ದಾರೆ. ಇದನ್ನೂ ಓದಿ: Mera Bill Meta Adhikar: ಇನ್ನು ಮುಂದೆ ಶಾಪಿಂಗ್ ಬಿಲ್ ಬಿಸಾಡಬೇಡಿ; ಈ ಒಂದು ಕೆಲಸ ಮಾಡಿದ್ರೆ ಗಳಿಸಬಹುದು ಒಂದು ಕೋಟಿವರೆಗೆ ಹಣ!

ನೋಂದಣಿ ಸ್ಥಗಿತ
ನಮ್ಮ ರಾಜ್ಯದಲ್ಲಿ 1.28 ಲಕ್ಷ ಫಲಾನುಭವಿಗಳು ಇದ್ದು 1.13 ಲಕ್ಷ ಫಲಾನುಭವಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹಲವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಇನ್ನು ಅರ್ಜಿ ಸಲ್ಲಿಸಿರುವವರ ಪೈಕಿ ಸುಮಾರು 8 ಲಕ್ಷದಷ್ಟು ಮಹಿಳೆಯರಿಗೆ ಹಣ ಬಂದಿಲ್ಲ. ಇದಕ್ಕೆ ಕಾರಣ ಅವರ ಖಾತೆ ಆಧಾರ್ ಸೀಡಿಂಗ್ ಆಗಿಲ್ಲ ಹಾಗೂ ಅವರ ನೀಡಿರುವ ಬ್ಯಾಂಕ್ ಖಾತೆ ಆಕ್ಟಿವ್ ಆಗಿಲ್ಲ ಎಂದು ಸರ್ಕಾರ ತಿಳಿಸಿದೆ.

ಗೃಹಿಣೀಯರ ಖಾತೆಯಲ್ಲಿ ಇರುವ ಲೋಪ ದೋಷಗಳನ್ನು ಪರಿಹರಿಸಿಕೊಂಡು ಅರ್ಜಿ ಸಲ್ಲಿಸಿರುವ ಗೃಹಿಣೀಯರ ಖಾತೆಗೆ 2000ಗಳನ್ನು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. ಹಾಗಾಗಿ ಅರ್ಜಿ ಸಲ್ಲಿಸಿರುವ ಪ್ರತಿಯೊಂದು ಮಹಿಳೆಗೂ ಕೂಡ 2000ಗಳನ್ನು ನೇರ ವರ್ಗಾವಣೆ ಮಾಡಿದ ನಂತರ ಮತ್ತೆ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಇದನ್ನೂ ಓದಿ: Diabetic Temple: ವಿಜ್ಞಾನಿಗಳಿಗೂ ಸವಾಲಾದ ದೇವಾಲಯ; ಇಲ್ಲಿ ಹೋದರೆ ಸಕ್ಕರೆ ಕಾಯಿಲೆ ಇರುವವರು ಸಂಪೂರ್ಣ ಗುಣಮುಖರಾಗುತ್ತಾರೆ, ಈ ಪವಾಡ ದೇವಾಲಯ ಇರುವುದು ಎಲ್ಲಿ ಗೊತ್ತೇ?

ಈಗ ಕರೆ ಸಾಕಷ್ಟು ಗೃಹಿಣಿಯರು ತಮ್ಮ ಖಾತೆಯ ಎಲ್ಲಾ ವಿಷಯಗಳು ಸರಿ ಇದ್ದರೂ ಕೂಡ ಹಣ ಬಂದಿಲ್ಲ ಎಂದು ದೂರು ನೀಡಿದ್ದಾರೆ. ಈಗಾಗಲೇ ಪಡಿತರ ಚೀಟಿ ತಿದ್ದುಪಡಿಗೂ ಕೂಡ ಅವಕಾಶ ನೀಡಲಾಗಿದ್ದು ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿದೆ. ನಿಮ್ಮ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಹೆಸರು ಇಲ್ಲದೆ ಮನೆಯ ಯಜಮಾನನ ಹೆಸರು ಇದ್ದರೆ ಆಗ ಹಣ ಜಮಾ ಆಗುವುದಿಲ್ಲ ಹಾಗಾಗಿ ಕೂಡಲೇ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರನ್ನು ಮೊದಲು ಸೇರಿಸಿಕೊಳ್ಳಿ. ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಹಾಗೂ ಬ್ಯಾಂಕ ಖಾತೆಯಲ್ಲಿ ಜೊತೆಗೆ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಒಂದೇ ರೀತಿಯಾಗಿದೆ ಎಂಬುದನ್ನು ಪರಿಶೀಲಿಸಿ ಇಲ್ಲವಾದರೆ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮಾಡಿಕೊಳ್ಳಿ. ನೀವು ಅರ್ಜಿ ಸಲ್ಲಿಸಿ ನಿಮ್ಮ ಖಾತೆಯ ಎಲ್ಲಾ ವಿವರಗಳು ಕೂಡ ಸರಿಯಾಗಿ ಇದ್ದರೆ ಖಂಡಿತವಾಗಿಯೂ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ 2000 ರೂ. ಬಂದು ಸೇರುತ್ತದೆ.

Best News in KannadaCM Siddaramaiah biopicgruha lakshmi yojanaGruhalakshmi Scheme stopped for time beingKannada Trending Newskarnataka government