Health Tips: ಬಾರಿಗೆ ಹೋದಾಗ ಎಣ್ಣೆ ಜೊತೆಗೆ ಕಡ್ಲೆ ಬೀಜ ಕೊಡೋದರ ಹಿಂದೆ ಇರೋ ನಿಜವಾದ ಸೀಕ್ರೆಟ್ ಏನು ಗೊತ್ತಾ? ಇದನ್ನ ತಿಳ್ಕೊಳ್ದೇ ತಿನ್ನೋದಕ್ ಹೋಗ್ಬೇಡಿ!

Health Tips: ಸಾಕಷ್ಟು ಕಡೆ ಮಧ್ಯಪ್ರಿಯರು ಬಾರಿಗೆ ಹೋದಾಗ ಮಧ್ಯದ ಜೊತೆಗೆ ಬೇರೆ ಬೇರೆ ರೀತಿಯ ತಿನಿಸು ಖಾದ್ಯಗಳನ್ನು ತಿನ್ನುವುದು ಸರ್ವೇಸಾಮಾನ್ಯ ಆಗಿರುತ್ತದೆ ಆದರೆ ಬಹುತೇಕ ಎಲ್ಲಾ ಬಾರ್ ಗಳಲ್ಲಿ ಕೂಡ ನಿಮಗೆ ಎಣ್ಣೆಯ ಜೊತೆಗೆ ಏನೇ ಕೊಟ್ಟಿಲ್ಲ ಅಂತ ಅಂದ್ರು ಕನಿಷ್ಟ ಪಕ್ಷ ‌ ಕಡಲೆ ಬೀಜವನ್ನು ಖಂಡಿತವಾಗಿ ಕೊಟ್ಟೆ ಕೊಡ್ತಾರೆ. ಇದರ ಹಿಂದಿನ ನಿಜವಾದ ಸೀಕ್ರೆಟ್ ಏನು ಅನ್ನೋದನ್ನ ನಾವು ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳೋದಕ್ಕೆ ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

ಕಡಲೆ ಬೀಜಗಳಿಗೆ ಮಸಾಲೆ ಹಾಗೂ ಉಪ್ಪನ್ನು ಮಿಶ್ರಿತ ಮಾಡಲಾಗಿರುತ್ತದೆ ಹೀಗಾಗಿ ಮಧ್ಯಪಾನವನ್ನು ಮಾಡುವ ಸಂದರ್ಭದಲ್ಲಿ ಇವುಗಳನ್ನು ತಿನ್ನುವುದರಿಂದಾಗಿ ಇನ್ನಷ್ಟು ಹೆಚ್ಚಿನ ಮಧ್ಯಪಾನ ಮಾಡುವಂತಹ ಬಯಕೆ ಮಧ್ಯಪ್ರಿಯರಲ್ಲಿ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕಾಗಿ ಪ್ರತಿಯೊಂದು ಬಾರ್ ಗಳಲ್ಲಿ ಕೂಡ ಈ ರೀತಿ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇವುಗಳು ರಕ್ತದಲ್ಲಿ ಆಲ್ಕೋಹಾಲ್ ಹೀರಿಕೆಯನ್ನು ಕಡಿಮೆ ಮಾಡುವುದರಿಂದಾಗಿ ನಿದ್ರಾಹೀನತೆಯನ್ನು ಕೂಡ ಕಡಿಮೆ ಮಾಡುತ್ತವೆ ಎನ್ನುವುದು ಕೂಡ ಇಲ್ಲಿ ಒಂದು ಪ್ರಮುಖವಾದ ವಿಚಾರವಾಗಿ ಕಂಡುಬರುತ್ತದೆ. ಮಧ್ಯ ವ್ಯಸನಿಗಳು ಬೀಳದೆ ಇರುವ ಕಾರಣಕ್ಕಾಗಿ ಕೂಡ ಈ ರೀತಿ ಉಪ್ಪು ಮಿಶ್ರಿತ ಕಡಲೆ ಬೀಜಗಳನ್ನು ನೀಡಲಾಗುತ್ತದೆ ಎಂಬ ಮಾತು ಕೂಡ ಇದೆ.

ಉಪ್ಪು ಮಿಶ್ರಿತ ಮಸಾಲೆ ಕಡಲೆ ಬೀಜಗಳನ್ನು ತಿಂದಾಗ ಸಹಜವಾಗಿಯೇ ಉಪ್ಪು ಇರುವ ಕಾರಣದಿಂದಾಗಿ ಬಾಯಾರಿಕೆ ಹೆಚ್ಚಿಸುತ್ತದೆ ಹಾಗೂ ಮಧ್ಯ ವಿಷನ್ಗಳು ಬಾಯಾರಿಕೆ ಹೆಚ್ಚಾದಾಗ ಹೆಚ್ಚಾಗಿ ಮಧ್ಯವನ್ನು ಆರ್ಡರ್ ಮಾಡುತ್ತಾರೆ ಹೀಗಾಗಿ ಹೆಚ್ಚಾಗಿ ಹಣವನ್ನು ಗಳಿಸುವ ನಿಟ್ಟಿನಲ್ಲಿ ಕೂಡ ಇದು ಒಂದು ಸೀಕ್ರೆಟ್ ಫಾರ್ಮುಲಾ ಆಗಿದೆ. ಕಹಿಯಾಗಿರುವಂತಹ ಮದ್ಯಪಾನ ಸೇವನೆ ಮಾಡುವಾಗ ಅದಕ್ಕೆ ರುಚಿ ಆಗಿರುವಂತಹ ಕಾಂಬಿನೇಷನ್ ರೂಪದಲ್ಲಿ ಉಪ್ಪು ಮಿಶ್ರಿತ ಕಡಲೆ ಬೀಜಗಳು ಬೆಸ್ಟ್ ಆಗಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮಧ್ಯಪಾನದ ಜೊತೆಗೆ ಕಡಿಮೆ ಬೆಲೆಯಲ್ಲಿ ಸಿಗುವಂತಹ ಸೈಡ್ ಆಗಿರುವುದರಿಂದಾಗಿಯೇ ಉಪ್ಪು ಮಿಶ್ರಿತ ಕಡಲೆ ಬೀಜಗಳನ್ನ ಎಲ್ಲರೂ ಸೇವನೆ ಮಾಡ್ತಾರೆ.

ಇನ್ನು ಅತ್ಯಂತ ದೊಡ್ಡ ಮಟ್ಟದ ಮಧ್ಯಪಾನ ಪ್ರಿಯರಿಗೆ ಖಂಡಿತವಾಗಿ ಹೆಚ್ಚು ಮಧ್ಯಪಾನ ಮಾಡಲು ಇದು ಪ್ರೇರೇಪಿಸುವ ಕಾರಣದಿಂದಾಗಿ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ ಎಂಬುದಾಗಿ ಕೂಡ ಕೆಲವರು ಹೇಳ್ತಾರೆ. ಹೀಗಾಗಿ ಇವಿಷ್ಟು ಕಾರಣಗಳಿಗಾಗಿ ಮಧ್ಯಪಾನ ಮಾಡುವ ಜೊತೆಗೆ ಮಸಾಲೆ ಹಾಗೂ ಉಪ್ಪು ಮಿಶ್ರಿತವಾಗಿರುವಂತಹ ಕಡಲೆ ಬೀಜಗಳನ್ನು ಬಾರಿನಲ್ಲಿ ಹೆಚ್ಚಾಗಿ ನೀಡುತ್ತಾರೆ ಅನ್ನೋದನ್ನ ತಿಳಿದುಕೊಳ್ಳಬಹುದು.

Health Tips