Home Loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೋಂ ಲೋನ್ ಪ್ಲಾನ್; ಎಲ್ಲಾ ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರಕ್ಕೆ ಸಾಲ; ಇಲ್ಲಿದೆ ಲೆಕ್ಕಾಚಾರ!

Home Loan: ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಸ್ವಂತವಾದ ಮನೆಯನ್ನು ಕಟ್ಟುವುದಕ್ಕೆ ಪರಿಶ್ರಮಪಡ್ತಾರೆ ಯಾಕೆಂದರೆ ಅದು ಅವರ ಜೀವಮಾನದ ಕನಸಾಗಿರುತ್ತದೆ. ತಾನು ಕಟ್ಟಿದ ಮನೆಯಲ್ಲಿ ತನ್ನ ಕೊನೆಯವರೆಗೂ ಜೀವನವನ್ನು ಕಳೆಯಬೇಕು ಅನ್ನೋದು ಅವರ ಗುರಿಯಾಗಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಏರುತ್ತಿರುವಂತಹ ಬೆಲೆ ಏರಿಕೆಯ ಕಾರಣದಿಂದಾಗಿ ಪೂರ್ತಿಯಾಗಿ ತಮ್ಮದೇ ಹಣದಲ್ಲಿ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಬ್ಯಾಂಕಿನಿಂದ ಲೋನ್ ಪಡೆದು ಹೋಂ ಲೋನ್ ಮೂಲಕವೇ ನೀವು ಮನೆಯನ್ನು ಕಟ್ಟಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ನೀವು ಸಾಲವನ್ನು ಪಡೆದುಕೊಂಡು ಯಾವ ರೀತಿಯಲ್ಲಿ ಪ್ರತಿ ತಿಂಗಳು ಇಎಂಐ ಕಟ್ಟಬೇಕಾಗಿರುತ್ತದೆ ಅನ್ನೋದ್ರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ.

SBI ನಿಂದ 15 ವರ್ಷಕ್ಕೆ 25 ಲಕ್ಷ ರೂಪಾಯಿ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಇಎಂಐ ಎಷ್ಟು ಕಟ್ಟಬೇಕಾಗುತ್ತೆ?

ಭಾರತ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಂತ ಸುರಕ್ಷಿತ ಬ್ಯಾಂಕುಗಳಲ್ಲಿ ಮೊದಲನೇ ಸ್ಥಾನ ಪಡೆದುಕೊಳ್ಳುವಂತಹ ಬ್ಯಾಂಕ್ ಅದರಲ್ಲೂ ಸರ್ಕಾರಿ ಬ್ಯಾಂಕ್ ಅಂದ್ರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಇಲ್ಲಿ ನೀವು ಹೋಂ ಲೋನ್ ಪಡೆದುಕೊಳ್ಳುವುದು ಅತ್ಯಂತ ಸುರಕ್ಷಿತ ಎಂದು ಹೇಳಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು ಪಡೆದುಕೊಳ್ಳುವಂತಹ ಹೋಂ ಲೋನ್ ಮೇಲೆ ಬ್ಯಾಂಕಿನವರು 8.50 ಪ್ರತಿಶತ ವಾರ್ಷಿಕ ಬಡ್ಡಿದರವನ್ನು ಅಪ್ಲೈ ಮಾಡುತ್ತಾರೆ. ಈ ಬಡ್ಡಿಯ ಲೆಕ್ಕಚಾರದಲ್ಲಿ ನೀವು 15 ವರ್ಷಗಳಿಗೆ 25 ಲಕ್ಷಗಳ ಹೋಮ್ ಲೋನ್ ಮಾಡಿದ್ರೆ ಆ ಸಂದರ್ಭದಲ್ಲಿ ಪ್ರತಿ ತಿಂಗಳು ಎಷ್ಟು ಕಟ್ಟಬೇಕಾಗುತ್ತದೆ ಅನ್ನೋದನ್ನ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ಹೇಳೋದಕ್ಕೆ ಹೊರಟಿರುವುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಮೇಲೆ ಹೇಳಿರುವಂತಹ ಅವಧಿ ಹಾಗೂ ಅಮೌಂಟ್ಗೆ ತಕ್ಕಂತೆ ನೀವು ಹೋಂ ಲೋನ್ ಪಡೆದುಕೊಂಡರೆ ಪ್ರತಿ ತಿಂಗಳು ನೀವು 15 ವರ್ಷಗಳವರೆಗೆ 24618 ರೂಪಾಯಿಗಳನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗುತ್ತದೆ. ಅಂದರೆ ಪಡೆದುಕೊಂಡಿರುವಂತಹ 25 ಲಕ್ಷ ರೂಪಾಯಿಗಳ ಹೋಂ ಲೋನ್ ಮೇಲೆ ನೀವು ಮೆಚ್ಯೂರಿಟಿ ಸಂದರ್ಭದಲ್ಲಿ ಕಟ್ಟಿ ಮುಗಿಸುವಾಗ ಒಟ್ಟಾರೆಯಾಗಿ 44.31 ಲಕ್ಷಗಳ ಹಣವನ್ನು ಕಟ್ಟ ಬೇಕಾಗಿರುತ್ತದೆ. ಇನ್ನು ಹೋಂ ಲೋನ್ ನಿಮಗೆ ಸಿಗೋದು ಕೂಡ ನಿಮ್ಮ ಉತ್ತಮ ಕ್ರೆಡಿಟ್ ಸ್ಕೋರ್ ನೋಡಿ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಹೋಂ ಲೋನ್ ಗಳು ಸಾಮಾನ್ಯವಾಗಿ ದೀರ್ಘಕಾಲಿಕವಾಗಿರುವುದರಿಂದಾಗಿ ಅವುಗಳ ಮೇಲೆ ವಿಧಿಸಲಾಗುವಂತಹ ಹಾಗೂ ನೀವು ಕಟ್ಟಬೇಕಾಗಿರುವಂತಹ ಬಡ್ಡಿ ದರ ಕೂಡ ಹೆಚ್ಚಾಗಿರುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಒಂದು ವೇಳೆ ನೀವು ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೋಂ ಲೋನ್ ಪಡೆದುಕೊಳ್ಳುವ ಯೋಚನೆ ಮಾಡಿದ್ರೆ ಈ ವಿಚಾರವನ್ನು ಪ್ರಮುಖವಾಗಿ ಗಮನಿಸಿ.

home loan