Home Loan: 50 ಲಕ್ಷಕ್ಕಿಂತ ಹೆಚ್ಚಿನ ಗೃಹಸಾಲಕ್ಕೆ ಈ ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡಿದರ ರೀ; ಮೊದ್ಲು ಸಂಪರ್ಕ ಮಾಡಿ!

Home Loan: ಮನೆಯನ್ನು ಖರೀದಿ ಮಾಡೋದಕ್ಕೆ ಹಾಗೂ ಮನೆಯನ ಕಟ್ಟುವುದಕ್ಕೆ ಹೋಂ ಲೋನ್ ಮೂಲಕವೇ ಹಣವನ್ನು ನೀವು ಬ್ಯಾಂಕುಗಳಿಂದ ಪಡೆದುಕೊಳ್ಳಬೇಕಾಗಿರುತ್ತದೆ. ಇನ್ನು ಇವುಗಳ ದೀರ್ಘಕಾಲಿಕ ಸಾಲಗಳಾಗಿರುತ್ತವೆ ಹೀಗಾಗಿ ಹೆಚ್ಚಿನ ಸಾಲದ ಮೊತ್ತ ಹಾಗೂ ಹೆಚ್ಚಿನ ಮರುಪಾವತಿ ಅವಧಿ ಕೂಡ ಇದಕ್ಕೆ ಇರುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಯಾವೆಲ್ಲ ಬ್ಯಾಂಕುಗಳು ನಿಮಗೆ 50 ಲಕ್ಷಕ್ಕಿಂತ ಹೆಚ್ಚಿನ ಹೋಮ್ ಲೋನ್ ಗಳನ್ನು ನೀಡುತ್ತವೆ ಹಾಗೂ ಅವುಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

50 ಲಕ್ಷಕ್ಕಿಂತ ಹೆಚ್ಚಿನ ಹೋಂ ಲೋನ್ ನೀಡುವ ಬ್ಯಾಂಕುಗಳು!

HDFC Bank: ಈ ಬ್ಯಾಂಕಿನಲ್ಲಿ ನೀವು 50 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹೋಂ ಲೋನ್ ಸೆಗ್ಮೆಂಟ್ ನಲ್ಲಿ ಪಡೆದುಕೊಳ್ಳಬಹುದು. ಸಾಮಾನ್ಯ ಬಡ್ಡಿದರ 8.9 ರಿಂದ 9.6 ಪ್ರತಿಶತದ ನಡುವೆ ಇರುತ್ತದೆ. ವಿಶೇಷ ಬಡ್ಡಿದರ 8.55 ರಿಂದ 9.10 ಪ್ರತಿಶತ ನಡುವೆ ಇರುತ್ತದೆ.

ICICI BANK: ಇಲ್ಲಿ ಕೂಡ 50 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಹೋಂ ಲೋನ್ ನಲ್ಲಿ ನೀಡಲಾಗುತ್ತದೆ. 35 ಲಕ್ಷದಿಂದ 75 ಲಕ್ಷ ರೂಪಾಯಿಗಳ ನಡುವೆ ಹೋಂ ಲೋನ್ ಸಾಲ ಇದ್ದಾಗ ಈ ಬ್ಯಾಂಕಿನಲ್ಲಿ 9.5 ರಿಂದ 9.8% ನಡುವೆ ಇರುತ್ತೆ. ಸಾಲ 75 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದರೆ ಆ ಸಂದರ್ಭದಲ್ಲಿ 9.6 ರಿಂದ 9.9ರ ನಡುವೆ ಇರುತ್ತದೆ. ಸ್ವಯಂ ಉದ್ಯೋಗಿಗಳಿಗೆ 9.75 ರಿಂದ 10.05 ಪ್ರತಿಶತದ ಬಡ್ಡಿ ದರವನ್ನು ವಿಧಿಸಲಾಗುತ್ತದೆ.

State Bank of India SBI: ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೋಂ ಲೋನ್ ನ ಮೇಲಿನ ಬಡ್ಡಿದರವನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ 9.15 ರಿಂದ 9.55 ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ ಆದರೆ ಆ ನಿಮ್ಮ ಕ್ರೆಡಿಟ್ ಸ್ಕೋರ್ 700 ರಿಂದ 749 ರ ಒಳಗೆ ಇದ್ರೆ ಆ ಸಂದರ್ಭದಲ್ಲಿ 9.35 ರಿಂದ 9.75 ರವರೆಗೆ ಹೆಚ್ಚಿಸಲಾಗುತ್ತದೆ. ನಂತರ 650 ರಿಂದ 699 ಕ್ರೆಡಿಟ್ ಸ್ಕೋರ್ ಹೊಂದಿರುವವರು ಹೋಂ ಲೋನ್ ಪಡೆದುಕೊಂಡರೆ 9.45 ರಿಂದ 9.85 ರೈ ಬಡ್ಡಿದರವನ್ನು ವಿಧಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಇದಕ್ಕಿಂತಲೂ ಕಳಪೆ ಆಗಿದ್ದರೆ ಆ ಸಂದರ್ಭದಲ್ಲಿ ನೀವು ತೆಗೆದುಕೊಳ್ಳುವಂತಹ ಹೋಂ ಲೋನ್ ಮೇಲೆ 9.65 ರಿಂದ 10.05 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್PNB: ಇಲ್ಲಿ ಕೂಡ ಸಾಲ ನೀಡಲಾಗುತ್ತದೆ ಆದರೆ ಇಲ್ಲಿ ಕೂಡ ಕ್ರೆಡಿಟ್ ಸ್ಕೋರ್ ಅನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ. 800 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇರುವಂತಹ 30 ಲಕ್ಷ ರೂಪಾಯಿಗಳ ಮೇಲಿನ ಸಾಲಕ್ಕೆ 8.40 ಪ್ರತಿಶತ ವಾರ್ಷಿಕ ಬಡ್ಡಿ ದರವನ್ನು ವಿಧಿಸಲಾಗುತ್ತದೆ. 750 ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್ ಮೇಲೆ ಬಡಿದರೆ 9.45 ಪ್ರತಿಶತ ಆಗಿರುತ್ತದೆ. 700 ರಿಂದ 749ರ ನಡುವಿನ ಕ್ರೆಡಿಟ್ ಸ್ಕೋರ್ ಮೇಲೆ 9.9 ಆಗಿರುತ್ತದೆ ಹಾಗೂ ಅದಕ್ಕಿಂತಲೂ ಕಡಿಮೆ ಇರುವಂತಹ ಕ್ರೆಡಿಟ್ ಸ್ಕೋರ್ ಗೆ 11 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ.

ಬ್ಯಾಂಕ್ ಆಫ್ ಬರೋಡದಲ್ಲಿ ಮಾತ್ರ ನೀವು ಪಡೆದುಕೊಳ್ಳುವಂತಹ ಹೋಂ ಲೋನ್ ಮೇಲೆ 8.4 ರಿಂದ 10.6 ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.

home loan