Home Loan: ಹೋಂ ಲೋನ್ ತಗೊಂಡಿದೀರಾ? ಈ ರೀತಿ ಮಾಡಿದ್ರೆ 45 ಲಕ್ಷದ ಸಾಲಕ್ಕೆ 5 ಲಕ್ಷ ಸುಲಭ್ವಾಗಿ ಉಳಿಸ್ಬೌದು, ಹೇಗೆ ಗೊತ್ತಾ? ಇಷ್ಟ್ ಮಾಡಿ ಸಾಕು!

Home Loan: ಪ್ರತಿಯೊಬ್ಬರೂ ಕೂಡ ಬಾಡಿಗೆ ಮನೆಯಲ್ಲಿ ಇರೋ ಜಂಜಾಟದಿಂದ ಹೊರಬಂದು ತಮ್ಮದೇ ಆಗಿರುವಂತಹ ಸ್ವಂತ ಮನೆಯಲ್ಲಿ ಇರುವುದಕ್ಕೆ ಇಷ್ಟ ಪಡ್ತಾರೆ ಇದೇ ಕಾರಣಕ್ಕಾಗಿ ಅವರು ಮನೆಯನ್ನು ಖರೀದಿ ಮಾಡುವುದಕ್ಕಾಗಿ ಅಥವಾ ಕಟ್ಟಿಸುವದಕ್ಕಾಗಿ ಪೂರ್ತಿ ಹಣವನ್ನು ಕ್ಯಾಶ್ ನಲ್ಲಿ ನೀಡೋದಕ್ಕೆ ಸಾಧ್ಯ ಇರುವುದಿಲ್ಲ. ಇದೇ ಕಾರಣಕ್ಕಾಗಿ ಬ್ಯಾಂಕ್ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿ ಗಳಿಂದ ಇಲ್ಲವೇ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿ ಗಳಿಂದಲೂ ಕೂಡ ಹೋಂ ಲೋನ್ ಪಡೆದುಕೊಂಡು ಮನೆಯನ್ನು ಕಟ್ಟಿಸಿ ಅಥವಾ ಖರೀದಿಸಿದ ನಂತರ ಹೋಂ ಲೋನ್ ಅನ್ನು ದೀರ್ಘ ಕಾಲದವರೆಗೆ ಕಟ್ಟುತ್ತಾರೆ ಹಾಗೂ ಅದರಲ್ಲಿ ಬಡ್ಡಿ ಕೂಡ ಹೆಚ್ಚಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಉದಾಹರಣೆಗೆ ನೀವು 20 ವರ್ಷಗಳ ಅವಧಿಗೆ 50 ಲಕ್ಷ ರೂಪಾಯಿಗಳ ಹೋಂ ಲೋನ್ ಪಡೆದುಕೊಂಡರೆ ವಾರ್ಷಿಕವಾಗಿ 8.50% ಬಡ್ಡಿದರವನ್ನು ವಿಧಿಸಲಾಗುತ್ತದೆ. ನೀವು ಕೇವಲ ಬಡ್ಡಿಯನ್ನೇ 54 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅಂದ್ರೆ ನೀವು ಪಡೆದುಕೊಂಡಿರುವಂತಹ 50 ಲಕ್ಷ ರೂಪಾಯಿಗಳಿಗಿಂತ ಅದರ ಮೇಲೆ ಕಟ್ಟಬೇಕಾಗಿರುವಂತಹ ಬಡ್ಡಿಯೇ 4 ಲಕ್ಷ ರೂಪಾಯಿ ಹೆಚ್ಚಾಗಿರುತ್ತದೆ. ಅಂದ್ರೆ ನೀವು 20 ವರ್ಷಗಳಲ್ಲಿ ತೆಗೆದುಕೊಂಡಿರುವಂತಹ 50 ಲಕ್ಷ ರೂಪಾಯಿ ಹಣಕ್ಕೆ 1.04 ಕೋಟಿ ರೂಪಾಯಿ ಹಣ ಕಟ್ಟಬೇಕಾಗುತ್ತದೆ.

ಎಕ್ಸ್ಪರ್ಟ್ಗಳು ಹೇಳುವ ಪ್ರಕಾರ ಹೋಂ ಲೋನ್ ಅನ್ನು ಬೇರೆ ಕಡೆ ಕಡಿಮೆ ಬಡ್ಡಿಯನ್ನು ವಿಧಿಸುವಂತಹ ಬ್ಯಾಂಕ್ ಅಥವಾ ಫೈನಾನ್ಸಿಯಲ್ ಕಂಪನಿಗಳಿಗೆ ಟ್ರಾನ್ಸ್ಫರ್ ಮಾಡುವ ಮೂಲಕ ನೀವು ಕಡಿಮೆ ಹಣವನ್ನು ಕಟ್ಟಬಹುದಾದಂತಹ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳುತ್ತಾರೆ. ಇದರಿಂದಾಗಿ ನಿಮ್ಮ ಪ್ರತಿ ತಿಂಗಳ ಕಂತಿನ ಹಣ ಮತ್ತು ಬಡ್ಡಿ ಸೇರಿದಂತೆ ಸಾಕಷ್ಟು ಖರ್ಚುಗಳು ಕಡಿಮೆ ಆಗಬಹುದಾದ ಸಾಧ್ಯತೆ ಇದೆ.

ಮರುಪಾವತಿಯ ವಿಧಾನ!

ಒಂದು ವೇಳೆ ನೀವು 20 ವರ್ಷಗಳಿಗೆ 40 ಲಕ್ಷ ರೂಪಾಯಿಗಳ ಹೋಂ ಲೋನ್ ಅನ್ನು 9 ಪ್ರತಿಶತ ಬಡ್ಡಿ ದರಕ್ಕೆ ಪಡೆದುಕೊಂಡಿದ್ದೀರಿ ಹಾಗೂ 10 ವರ್ಷಗಳವರೆಗೆ ಈಗಾಗಲೇ ಕಟ್ಟಿಕೊಂಡು ಬಂದಿದ್ದೀರಿ ಹಾಗೂ ಈ ಸಂದರ್ಭದಲ್ಲಿ ಬೇರೆ ಬ್ಯಾಂಕಿನವರು ನಿಮಗೆ ಎಂಟು ಪ್ರತಿಶತ ಬಡ್ಡಿ ದರದಲ್ಲಿ ಲೋನ್ ಅನ್ನು ಟ್ರಾನ್ಸ್ಫರ್ ಮಾಡಿಸಿಕೊಳ್ಳುವಂತಹ ಆಫರ್ ನೀಡಿದರೆ ಆ ಸಂದರ್ಭದಲ್ಲಿ ನೀವು ಪಾವತಿ ಮಾಡಬೇಕಾಗಿರುವಂತಹ ಪ್ರತಿಯೊಂದು ಶುಲ್ಕಗಳನ್ನು ಪಾವತಿ ಮಾಡಿದ ನಂತರ ಹೊಸ ಬ್ಯಾಂಕಿಗೆ ನಿಮ್ಮ ಹೋಂ ಲೋನ್ ಅನ್ನು ಟ್ರಾನ್ಸ್ಫರ್ ಮಾಡಬಹುದಾಗಿದೆ.

  • ಈ ಸಂದರ್ಭದಲ್ಲಿ ನೀವು ಈ ಹಿಂದಿನ ಬ್ಯಾಂಕಿನಲ್ಲಿ ಕಟ್ಟುತ್ತಿದ್ದ EMI ಗೆ ಹೊಲಿಸಿದ್ರೆ ಕಡಿಮೆ ಹಣ ಕಟ್ಟಬಹುದಾಗಿದೆ.
  • ಪೂರ್ವಭಾವಿ ಮರುಪಾವತಿಯನ್ನು ನೀವು ಕಡಿಮೆಯಾಗಿ ಕಟ್ಟಬಹುದಾಗಿದೆ.
  • ಹಳೆಯ ಹೋಂ ಲೋನ್ ಗಿಂತ ಸಾಕಷ್ಟು ಕಡಿಮೆ ಬಡ್ಡಿ ಯಲ್ಲಿ ನಿಮಗೆ ಈ ಹೊಸ ಹೋಂ ಲೋನ್ ಟ್ರಾನ್ಸ್ಫರ್ ಸಿಗುವುದರಿಂದಾಗಿ ಬಡ್ಡಿಯಲ್ಲಿ ಕೂಡ ಸಾಕಷ್ಟು ಹಣ ಉಳಿತಾಯ ಮಾಡಬಹುದಾಗಿದೆ. ದೀರ್ಘಕಾಲಿಕವಾಗಿ ನಿಮಗೆ ಇದು ಸಾಕಷ್ಟು ಲಾಭದಾಯಕವಾಗಲಿದೆ

ಶುಲ್ಕ ಹಾಗೂ ಚಾರ್ಜಸ್ ಗಳು!

  • ಲೀಗಲ್ ಫೀಸ್ ಹಾಗೂ ಅಡ್ಮಿನಿಸ್ಟ್ರೇಟಿವ್ ಚಾರ್ಜಸ್ ಗಳನ್ನ ಈ ಸಂದರ್ಭದಲ್ಲಿ ನೀವು ಕಟ್ಟಬೇಕಾಗಿ ಬರುತ್ತದೆ.
  • ಈ ರೀತಿಯ ಯಾವುದೇ ಶುಲ್ಕ ಅಥವಾ ಚಾರ್ಜಸ್ ಗಳು ಇದ್ದರೂ ಕೂಡ ನೀವು ಟ್ರಾನ್ಸ್ಫರ್ ಮಾಡುವ ಸಂದರ್ಭದಲ್ಲಿ ಪ್ರಮುಖವಾಗಿ ಮೊದಲಿಗೆ ಕೇಳಿ ತಿಳಿದುಕೊಳ್ಳಬೇಕಾಗಿರುತ್ತದೆ.
  • ನಿಮ್ಮ ಹೋಂ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್ಫರ್ ಮಾಡೋದಕ್ಕಿಂತ ಮುಂಚೆ ಎರಡು ಬ್ಯಾಂಕಿನವರ ಬಳಿ ಕೂಡ ನೀವು ಫೈನಾನ್ಸಿಯಲ್ ಅಳವಡಿಕೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ.
home loan