Home Tips: ಮನೆ ಕಟ್ಟುವಾಗ ಈ ಟಿಪ್ಸ್ ಗಳನ್ನು ಫಾಲೋ ಮಾಡಿ ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ಬಜೆಟ್ ಉಳಿಸಬಹುದು; ಕಾಂಟ್ರೆಕ್ಟರ್ ಕೂಡ ಹೇಳ್ಕೊಡಲ್ಲ!

Home Tips: ಸ್ವಂತ ಮನೆಯನ್ನು ಕಟ್ಟುವಂತಹ ಅಥವಾ ಕಟ್ಟಿಸುವಂತಹ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ. ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬರುವಂತಹ ಪ್ರತಿಯೊಬ್ಬ ದುಡಿಯೋ ಹುಡುಗನಿಗೆ ಖಂಡಿತವಾಗಿ ತಮಗಾಗಿ ತಮ್ಮ ತಂದೆ ತಾಯಿಗಾಗಿ ತಮ್ಮ ಕುಟುಂಬಕ್ಕಾಗಿ ಒಂದು ಒಳ್ಳೆಯ ಮನೆಯನ್ನ ಕಟ್ಟಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತೆ. ಆದರೆ ಈ ಬೆಲೆ ಏರಿಕೆಯ ಯುಗದಲ್ಲಿ ಲೋನ್ ಮಾಡಿ ಮನೆ ಕಟ್ಟಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಎಷ್ಟೇ ಕಡಿಮೆ ಹಣದಲ್ಲಿ ದುಡ್ಡನ್ನು ಖರ್ಚು ಮಾಡಿ ಮನೆಯನ್ನು ಕಟ್ಟಿಸಬೇಕು ಅಂತ ಅಂದುಕೊಂಡ್ರೂ ಕೂಡ ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚಾಗುತ್ತದೆ.

ಅದರಲ್ಲೂ ವಿಶೇಷವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕನಿಷ್ಠಪಕ್ಷ 2bhk ಮನೆಯನ್ನು ಕಟ್ಟಿಸುವುದಕ್ಕೆ ಹೋದರು ಕೂಡ ಅದರಲ್ಲಿ ಸ್ವಲ್ಪ ಹಣವನ್ನು ಕೂಡ ಉಳಿಸುವುದಕ್ಕೆ ಆಗುವುದಿಲ್ಲ. ಆದರೆ ಇವತ್ತಿನ ಲೇಖನದಲ್ಲಿ ನಾವು ಹೇಳೋದಕ್ಕೆ ಹೊರಟಿರುವಂತಹ ಟಿಪ್ಸ್ ಗಳನ್ನು ಫಾಲೋ ಮಾಡಿದ್ರೆ ಖಂಡಿತವಾಗಿ ನೀವು ಮನೆ ಕಟ್ಟುವ ಸಂದರ್ಭದಲ್ಲಿ ನಾಲ್ಕರಿಂದ ಐದು ಲಕ್ಷ ಹಣವನ್ನು ಯಾವುದೇ ಅನುಮಾನವಿಲ್ಲದೆ ಅತ್ಯಂತ ಸುಲಭ ರೂಪದಲ್ಲಿ ಉಳಿತಾ ಮಾಡಬಹುದಾಗಿದೆ. ಹಾಗಿದ್ದರೆ ಯಾವೆಲ್ಲ ಟಿಪ್ಸ್ಗಳನ್ನು ಫಾಲೋ ಮಾಡುವ ಮೂಲಕ ನೀವು ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಉಳಿತಾಯ ಮಾಡಬಹುದು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಈ ಟಿಪ್ಸ್ ಗಳನ್ನು ಫಾಲೋ ಮಾಡಿ ಲಕ್ಷ ಲಕ್ಷ ಹಣವನ್ನು ಉಳಿಸುತ್ತೀರಾ!

  • ಲೆವೆಲ್ ಇಲ್ಲದ ನೆಲದಲ್ಲಿ ಮನೆಯನ್ನು ಕಟ್ಟೋದಕ್ಕೆ ಪ್ರಾರಂಭ ಮಾಡಿದ್ರೆ ಅದನ್ನ ಲೆವೆಲ್ ಮಾಡೋದಿಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ನೀವು ಹೊಸದಾಗಿ ಮನೆಯಲ್ಲೇ ಕಟ್ಟೋದಕ್ಕೆ ಪ್ರಾರಂಭ ಮಾಡಿದ್ರೆ ಲೆವೆಲ್ ಇರುವಂತಹ ಜಾಗದಲ್ಲಿಯೇ ಮನೆಯನ್ನು ಕಟ್ಟುವುದಕ್ಕೆ ಪ್ರಾರಂಭ ಮಾಡಿ ಇಲ್ಲಿ ಕೂಡ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಇದನ್ನ ಯಾವ ಮೇಸ್ತ್ರಿ ಕೂಡ ಹೇಳೋದಿಲ್ಲ.
  • ನೀವು ಮನೆ ಕಟ್ಟುತ್ತಿರುವಂತಹ ಪ್ರದೇಶದಲ್ಲಿ ಲಿಂಟಲ್ ಹಾಕಿ. ಒಳಗಿನ ಗೋಡೆಗಳಿಗೆ ಯಾವುದೇ ರೀತಿಯ ನೆಸ್ ಅನ್ನು ಹಾಕುವಂತಹ ಅಗತ್ಯ ಇರುವುದಿಲ್ಲ ಕೇವಲ ಹೊರಗಿನ ಗೋಡೆಗೆ ಮಾತ್ರ 6 ರಿಂದ 9 ಇಂಚು ದಪ್ಪ ಇರುವಂತಹ ನೆಸ್ ಅನ್ನು ಅಳವಡಿಸಿ ಪರ್ಫೆಕ್ಟ್ ಆಗಿರುತ್ತದೆ.
  • ಏನೋ ಇತ್ತೀಚಿನ ಆಧುನಿಕ ಯುಗದಲ್ಲಿ ಟಿವಿ ಜಾಹೀರಾತಿಗಳಲ್ಲಿ ಕಂಡುಬರುವಂತಹ ಸಿಮೆಂಟ್ ಹಾಗೂ ಇನ್ನಿತರ ವಸ್ತುಗಳನ್ನ ಖರೀದಿ ಮಾಡಿ ದುಬಾರಿ ಬೆಲೆಯಲ್ಲಿ ಮನೆಯನ್ನು ಕಟ್ಟಿಸುವುದಕ್ಕೆ ಹೋಗುತ್ತಾರೆ. ಮನೆಯನ್ನು ಕಟ್ಟಿಸುವುದಕ್ಕೆ ಅಂತಾನೆ ಇಂಜಿನಿಯರ್ ಇರ್ತಾರೆ ನೀವು ಅವರ ಮೂಲಕನೇ ಮನೆಯನ್ನು ಕಟ್ಟಿಸುತ್ತಿರುತ್ತೀರಿ. ಅವರಿಗೆ ತಿಳಿದಿರುವಂತಹ ಕಡಿಮೆ ಬೆಲೆಯ ಉತ್ತಮ ಕ್ವಾಲಿಟಿ ಸಿಮೆಂಟ್ ಅನ್ನು ಬಳಸಿ. ನಿರ್ದಿಷ್ಟವಾಗಿ ಹೇಳೋದಾದ್ರೆ ಕನ್ಸ್ಟ್ರಕ್ಷನ್ ಮಾಡೋದಕ್ಕೆ 53 ಗ್ರೇಡ್ ಪಿಪಿಸಿ ಹಾಗೂ ಪ್ಲಾಸ್ಟರ್ ರಿಂಗ್ ಮಾಡೋದಕ್ಕೆ 43 ಗ್ರೇಡ್ ಪಿಪಿಸಿ ಗುಣಮಟ್ಟದ ಸಿಮೆಂಟ್ ಅನ್ನು ಖರೀದಿಸುವುದು ಒಳ್ಳೆಯದು ಇವುಗಳು ಕಡಿಮೆ ಬೆಲೆಯಲ್ಲಿ ಕೂಡ ಸಿಗುತ್ತವೆ ಹಾಗೂ ಉತ್ತಮ ಕ್ವಾಲಿಟಿ ಕೂಡ ನೀಡುತ್ತವೆ.
  • ಪ್ರತಿಯೊಬ್ಬರು ಕೂಡ ಬಂದಾಗ ನೋಡೋದು ಮನೆಯ ಮುಂಭಾಗದ ಫಿನಿಶಿಂಗ್ ಅನ್ನು. ಹೀಗಾಗಿ ಮನೆಯ ಮುಂಭಾಗದಲ್ಲಿ ಅಳವಡಿಸಬೇಕಾಗಿರುವಂತಹ ಟೈಲ್ಸ್ ಗಳನ್ನು ದುಬಾರಿ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಕ್ವಾಲಿಟಿಯ ಹಾಗೂ ಸ್ಟೈಲಿಶ್ ಆಗಿ ಕಾಣಿಸುವಂತಹ ಇಂಜಿನಿಯರ್ ಗೆ ಹೇಳಿ ಅವರ ಸಲಹೆ ಮೇರೆಗೆ ತಂದು ಅಳವಡಿಸಿ. ಇವಿಷ್ಟು ಖರ್ಚನ್ನು ಉಳಿತಾಯ ಮಾಡುವುದರಿಂದ ನಾಲ್ಕರಿಂದ ಐದು ಲಕ್ಷ ರೂಪಾಯಿ ಹಣವನ್ನು ನೀವು ಉಳಿತಾಯ ಮಾಡಬಹುದಾಗಿದೆ.
home tips