ಲಂಡನ್ ನಲ್ಲಿ ಜೊತೆಯಾಗಿ ಸಮಯ ಕಳೆದ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ? ಎಷ್ಟು ಕೋಟಿಯ ಒಡೆಯ ಗೊತ್ತಾ, ಲಲಿತ್ ಮೋದಿ

ಸ್ನೇಹಿತರೆ, ಇತ್ತೀಚಿಗೆ ಹೆಚ್ಚು ಚರ್ಚೆ ಆಗುತ್ತಿರುವ ವಿಷಯ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರ ಡೇಟಿಂಗ್ ವಿಚಾರ. ಐಪಿಎಲ್ ನ ಮೊದಲ ಆವೃತ್ತಿಯ ಚೇರ್ಮನ್ ಆಗಿದ್ದ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರ ಜೊತೆ ತಾನು ಡೇಟಿಂಗ್ ನಲ್ಲಿ ಇದ್ದೇನೆ ಅಂತ ಟ್ವಿಟ್ ಮಾಡಿ ಹಂಚಿಕೊಂಡಿದ್ದರು. ಮೊದಲು ಲೈಫ್ ಪಾರ್ಟ್ನರ್ ಅಂತ ಕರೆದು ನಂತರ ನಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಅಂತ ಸಮಜಾಯಿಷಿ ಯನ್ನು ಕೂಡ ಕೊಟ್ಟಿದ್ರು ಲಲಿತ್ ಮೋದಿ.

ಹೌದು ಉದ್ಯಮಿ ಇಲ್ಲಲಿದ್ದಾರೆ ಈ ವಯಸ್ಸಿನಲ್ಲಿ ಇವರಿಗೆ ಡೇಟಿಂಗ್ ಬೇಕಿತ್ತಾ ಅಂತ ಕೆಲವು ಜನ ಮಾತನಾಡಿಕೊಳ್ಳುತ್ತಿದ್ದಾರೆ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಅವರ ಬಗ್ಗೆ ಜನ ತರಾವರಿಯಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ತನಗಿಂತ 15 ವರ್ಷ ಚಿಕ್ಕವನಾದ ಮಾಡೆಲ್ ಒಬ್ಬನ ಜೊತೆ ಸುಶ್ಮಿತಾ ಸೈನ್ ಅವರು ರಿಲೇಶನ್ ಶಿಪ್ ನಲ್ಲಿ ಇದ್ರು. ಅದು ಬ್ರೇಕ್ ಅಪ್ ಆದ ಹಿನ್ನೆಲೆಯಲ್ಲಿ ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಜನರು ಏನೇ ಮಾತನಾಡಿಕೊಳ್ಳಿ, ನಾವು ಮಾತ್ರ ಅದಕ್ಕೆ ತಲೆಕೆಡಿಸಿಕೊಳ್ಳೋದಿಲ್ಲ ಅಂತ ಲಲಿತ್ ಮೋದಿ ಹಾಗೂ ನಟಿ ಸುಶ್ಮಿತಾ ಸೇನ್ ಅವರು ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಲಲಿತ್ ಮೋದಿ ಅವರು ಈಗಾಗಲೇ ಹಲವಾರು ಫೋಟೋಗಳನ್ನ ಶೇರ್ ಮಾಡಿ ಸುಶ್ಮಿತಾ ಅವರ ಜೊತೆಗಿನ ಡೇಟಿಂಗ್ ಬಗ್ಗೆ ಹೇಳಿಕೊಂಡಿದ್ದರು. ಇವರು ರಿಲೇಷನ್ಶಿಪ್ ಮಾತ್ರವಲ್ಲದೆ ಲಲಿತ್ ಮೋದಿಯ ಬಳಿ ಇರುವ ಆಸ್ತಿಯ ವಿಚಾರ ಕೂಡ ತುಂಬಾನೇ ಚರ್ಚೆಗೆ ಕಾರಣವಾಗುತ್ತಿದೆ. ಮೋದಿ ಭಾರತದಿಂದ ಓಡಿಹೋಗಿ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ವಿಶ್ವದ ಈ ದುಬಾರಿ ನಗರದಲ್ಲಿ ಲಲಿತ ಮೋದಿ ಅವರದು ಐದು ಅಂತಸ್ತಿನ ಮಹಲ್ ಕೂಡ ಇದೆ ಅಂತೆ. ಇದರಲ್ಲಿ ಐಷಾರಾಮಿ ಯಾದ 14 ಕೊಠಡಿಗಳಿವೆ.

ಈ ಬಂಗಲೆಯಲ್ಲಿ ಎರಡು ಅತಿಥಿ ಕೊಠಡಿಗಳು ಏಳು ಸ್ನಾನ ಗ್ರಹಗಳು ಎರಡು ಅಡಿಗೆ ಮನೆ ನಾಲ್ಕು ಸ್ವಾಗತ ಕೊಠಡಿಗಳು ಇವೆಯಂತೆ. ಈ ಮನೆಯ ವಿಸ್ತೀರ್ಣ ಸುಮಾರು ಏಳು ಸಾವಿರ ಚದುರ ಅಡಿ ಎನ್ನಲಾಗುತ್ತಿದೆ. ಇದೀಗ ತಮ್ಮ ಕುಟುಂಬದ ಸಮೇತ ಲಲಿತ್ ಮೋದಿ ಈ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಹಾಗೆ ಈ ಬಂಗಲೆಯನ್ನು ಕೊಂಡುಕೊಳ್ಳುವುದಕ್ಕಿಂತಲೂ ಮೊದಲು ಇದೇ ನಗರದಲ್ಲಿ 12 ಲಕ್ಷ ತಿಂಗಳಿಗೆ ಬಾಡಿಗೆಯನ್ನು ಕೊಟ್ಟು ಬೇರೆ ಮನೆಯಲ್ಲಿ ವಾಸಿಸುತ್ತಿದ್ದರಂತೆ ಲಲಿತ್ ಮೋದಿ.

ಉದ್ಯಮಿ ಇಲ್ಲಲಿತ್ ಮೋದಿ 8 ಐಷಾರಾಮಿ ಕಾರುಗಳ ಒಡೆಯ. ಇನ್ನು ಈ ಕಾರುಗಳು ಅಂತಿಂಥ ಕಾರುಗಳಲ್ಲ ಒಂದೊಂದು ಕಾರಿನ ಬೆಲೆ ಕನಿಷ್ಠ ಅಂದ್ರು ಮೂರರಿಂದ ನಾಲ್ಕು ಕೋಟಿ. ಇವರ ಬಳಿ ಇರುವ ಕಾರುಗಳು ಫೆರಾರಿ, ಬಿಎಂಡಬ್ಲ್ಯೂ ಅಂತಹ ಐಷಾರಾಮಿ ಕಾರುಗಳೆ. ಇನ್ನು ಲಲಿತ್ ಮೂರ್ತಿ ಅವರ ಬಳಿ ಇರುವ ಹಣ ಸುಮಾರು 12 ಸಾವಿರ ಕೋಟಿ ರೂಪಾಯಿ. ಕೆಲವು ವರದಿಯ ಪ್ರಕಾರ ಲಲಿತ್ ಮೋದಿ ಅವರ ಬಳಿ ನಾಲ್ಕು ಪಾಯಿಂಟ್ ಐದು ಸಾವಿರ ಕೋಟಿಗೂ ಹೆಚ್ಚು ಆಸ್ತಿ ಇದೆಯಂತೆ. ಒಟ್ಟಿನಲ್ಲಿ ಕುಬೇರರಂತೆ ಇರುವ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಸುಶ್ಮಿತಾ ಸೇನ್ ಕೂಡ ಸಾಕಷ್ಟು ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.

Comments (0)
Add Comment