Recipe: 15 ನಿಮಿಷಗಳಲ್ಲಿ ರೆಡಿಯಾಗತ್ತೆ ಈ ದೋಸೆ; ಆಹಾ ಎಷ್ಟು ರುಚಿ ಗೊತ್ತಾ? ನಾಳೆ ಬೆಳಿಗ್ಗೆ ತಿಂಡಿಗೆ ಇದನ್ನೇ ಮಾಡಿ!

Recipe: ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 15 ನಿಮಿಷಗಳಲ್ಲಿ ಸೌತೆಕಾಯಿ (cucumber ದೋಸೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಈ ದೋಸೆಯನ್ನು ಸವಿಯಲಿಕ್ಕೆ ಚಟ್ನಿ ಅವಶ್ಯಕತೆ ಇರುವುದಿಲ್ಲ. ಬನ್ನಿ ಹಾಗಾದರೆ ಸುಲಭವಾಗಿ ಸೌತೆಕಾಯಿ ದೋಸೆ ಮಾಡೋದು ಹೇಗೆ ನೋಡೋಣ.

Recipe: 15 ನಿಮಿಷಗಳಲ್ಲಿ ರೆಡಿಯಾಗತ್ತೆ ಈ ದೋಸೆ; ಆಹಾ ಎಷ್ಟು ರುಚಿ ಗೊತ್ತಾ? ನಾಳೆ ಬೆಳಿಗ್ಗೆ ತಿಂಡಿಗೆ ಇದನ್ನೇ ಮಾಡಿ! https://sihikahinews.com/amp/how-to-do-cucumber-dosa-easy-recipe/

ಸೌತೆಕಾಯಿ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು:

1 ಬಟ್ಟಲು ರವೆ, 2 ಸೌತೆಕಾಯಿ, ಕಾಲು ಬಟ್ಟಲು ಹಸಿ ತೆಂಗಿನಕಾಯಿ, 2 ಒಣಮೆಣಸಿನಕಾಯಿ, 1 ಚಮಚ ಹಸಿ ತೆಂಗಿನಕಾಯಿ ತುರಿ, ಅರ್ಧ ಚಮಚ ಜೀರಿಗೆ, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಎಣ್ಣೆ ಅಥವಾ ತುಪ್ಪ.

ಸೌತೆಕಾಯಿ ದೋಸೆ ಮಾಡುವ ವಿಧಾನ:

ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ಒಂದು ಬಟ್ಟಲು ರವೆ ಹಾಗೂ ಒಂದು ಬಟ್ಟಲು ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. ಒಂದು ವೇಳೆ ಹೆಚ್ಚು ನೀರು ಅನಿಸಿದರೆ ನೀರನ್ನು ಸ್ವಲ್ಪ ತೆಗೆದುಕೊಳ್ಳಿ. ಆ ಸಮಯದಲ್ಲಿ ಮತ್ತೊಂದು ಕಡೆ ಸಿಪ್ಪೆಯನ್ನು ತೆಗೆಯದ ಹಾಗೆ ಸೌತೆಕಾಯಿಯನ್ನು ಸಣ್ಣ ಸಣ್ಣದಾಗಿ ಹಚ್ಚಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ನೆನೆಸಿದ ರವೆ, ಹಚ್ಚಿಕೊಂಡ ಸೌತೆಕಾಯಿ, ಕಾಲು ಬಟ್ಟಲು ತೆಂಗಿನ ತುರಿ, 2 ಒಣ ಮೆಣಸಿನಕಾಯಿ, 1 ಚಮಚ ದನಿಯ, ಅರ್ಧ ಚಮಚ ಜೀರಿಗೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡರೆ ಹಿಟ್ಟು ಸಿದ್ದವಾಗುತ್ತದೆ.

ನಂತರ ಗ್ಯಾಸ್ ಮೇಲೆ ಒಂದು ತವಾವನ್ನು ಇಟ್ಟುಕೊಂಡು ಕಾಯಲು ಬಿಡಿ. ಕಾದ ನಂತರ ಹಿಟ್ಟನ್ನು ತೆಳ್ಳಗೆ ಸವರಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ತುಪ್ಪವನ್ನು ಸವರಿಕೊಳ್ಳಿ. ಒಂದು ವೇಳೆ ತುಪ್ಪ ಎಲ್ಲದದ್ದರೆ ಎಣ್ಣೆಯನ್ನು ಸವರಿಕೊಂಡು ಬೇಯಿಸಿಕೊಂಡರೆ ಸೌತೆಕಾಯಿ ದೋಸೆ ಸವಿಯಲು ಸಿದ್ದ.

easy recipeHealthy foodLifestyleಅಡುಗೆ ಮನೆಸುಲಭ ಅಡುಗೆ