ಮನೆಯಲ್ಲಿಯೇ ಎಷ್ಟು ಸುಲಭವಾಗಿ ಇಷ್ಟು ರುಚಿಕರವಾದ ಪಿಜ್ಜಾ ಮಾಡಬಹುದು ಅಂತ ನಿಮಗೆ ಗೊತ್ತಾ; ಇಲ್ಲಿದೆ ನೋಡಿ ಪನ್ನೀರ್ ಚೀಸ್ ಪಿಜ್ಜಾ ರೆಸಿಪಿ

ಪಿಜ್ಜಾ ಅನ್ನೋದು ಜಂಕ್ ಫುಡ್ ಆಗಿದ್ರೂ ಅಪರೂಪಕ್ಕೆ ಒಮ್ಮೆ ತಿನ್ನೋದಕ್ಕೆ ಚೆನ್ನಾಗಿರುತ್ತೆ. ಆದರೆ ಪಿಚ್ಚಾವನ್ನು ಪಿಜ್ಜಾ ಹಟ್ ಗೋ, ಡಾಮಿನೊಸ್ ಗೊ ಹೋಗಿಯೇ ತಿನ್ನಬೇಕು. ಆದರೆ ಎಲ್ಲ ಸಮಯದಲ್ಲಿ ಹೀಗೆ ಹೊರಗಡೆ ತಿನ್ನೋದು ಅಷ್ಟು ಸೇಫ್ ಕೂಡ ಅಲ್ಲ. ಚಿಂತೆ ಬಿಡಿ ಮಳೆಗಾಲದಲ್ಲಿಯೂ ಕೂಡ ಮನೆಯಲ್ಲಿಯೇ ಕುಳಿತು ಬಿಸಿ ಬಿಸಿ ಎಂಜಾಯ್ ಮಾಡಿ. ಬನ್ನಿ ನಾವಿನ್ನು ಮನೆಯಲ್ಲಿಯೇ ಸುಲಭವಾಗಿ ಕೆಲಸವನ್ನು ಹೇಗೆ ಮಾಡುವುದು ಅಂತ ಹೇಳಿ ಕೊಡ್ತೀವಿ. ಅಂದಹಾಗೆ ಇದಕ್ಕೆ ಓವನ್ ಕೂಡ ಬೇಡ.

ಪನೀರ್ ಚೀಸ್ ಪಿಜ್ಜಾ ಮಾಡಲು ಬೇಕಾಗುವ ಸಾಮಗ್ರಿಗಳು;

ಪಿಜ್ಜಾ ಬೇಸ್ ಒಂದು

ಪಿಜ್ಜಾ ಸಾಸ್ -ಇದು ಸೂಪರ್ ಮಾರ್ಕೆಟ್ ಳಲ್ಲಿ ಲಭ್ಯವಿದೆ

ಈರುಳ್ಳಿ ಹಾಗೂ ಕ್ಯಾಪ್ಸಿಕಂ ತಲಾ ಒಂದು – ಹೆಚ್ಚಿದ್ದು (ಇದನ್ನ ಹೊಂಬಣ್ಣಕ್ಕೆ ಬರುವ ಹಾಗೆ ಎಣ್ಣೆಯಲ್ಲಿ ಹುರಿದು ಇಟ್ಟುಕೊಳ್ಳಿ)

ಟೊಮ್ಯಾಟೊ ಸ್ಲೈಸ್ ಗಳು -5

ಮಾಡುವ ವಿಧಾನ:

ಮೊದಲಿಗೆ ಒಂದು ಪಿಜ್ಜಾ ಬೇಸ್ ನ್ನ ತೆಗೆದುಕೊಳ್ಳಿ. ಅದರ ಮೇಲೆ ಪಿಜ್ಜಾ ಸಾಸ್ ಅನ್ನು ಚೆನ್ನಾಗಿ ಹರಡಿ. ನಂತರ ಫ್ರೈ ಮಾಡಿದ ಈರುಳ್ಳಿ ಚೂರುಗಳನ್ನು ಇದರ ಮೇಲೆ ಹರಡಿ. ಹಾಗೆಯೇ ಫ್ರೈ ಮಾಡಿಟ್ಟುಕೊಂಡ ಕ್ಯಾಪ್ಸಿಕಂ ಅನ್ನು ಕೂಡ ಪಿಜ್ಜಾ ಬೇಸ್ ಮೇಲೆ ಹರಡಿ. ಇದರ ಮೇಲೆ ನಾಲ್ಕರಿಂದ ಐದು ಟೊಮೆಟೊ ಸ್ಲೈಸ್ ಗಳನ್ನು ಇಡಿ.

ಈಗ ಈ ಎಲ್ಲಾ ತರಕಾರಿಗಳನ್ನು ಹರಡಿದ ಮೇಲೆ ಚೀಸ್ ಅನ್ನು ತೆಗೆದುಕೊಂಡು ಪಿಜ್ಜಾ ಬೇಸ್ ಮೇಲೆ ತುರಿಯಿರಿ. ಬಳಿಕ ಇದೇ ರೀತಿ ಪನ್ನೀರನ್ನು ತೆಗೆದುಕೊಂಡು ಪಿಜ್ಜಾ ಬೇಸ್ ಮೇಲೆ ತುರಿಯಿರಿ. ಎಲ್ಲಾ ಟಾಪಿಂಗ್ ಗಳು ಸರಿಯಾಗಿ ಹರಡಿದ್ದೀರಿ ಎಂದು ಖಚಿತಪಡಿಸಿಕೊಂಡ ನಂತರ, ಒಂದು ತವಾ ಅಥವಾ ಫ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ. ಬಿಸಿಯಾದ ಕೂಡಲೇ ಪಿಜ್ಜಾ ಬೇಸ್ ಅನ್ನು ಅದರ ಮೇಲಿಡಿ. ನಂತರ ಒಂದು ಮುಚ್ಚಳ ಮುಚ್ಚಿ ಬೇಯಿಸಿ. ಇಷ್ಟೇ ಪಿಜ್ಜಾ ಬೆಂದ ನಂತರ ಕಾವಲಿಯಿಂದ ತೆಗೆದು ಬಿಸಿಬಿಸಿಯಾಗಿ ಸಾಸ್ ಜೊತೆ ಸವಿಯಿರಿ.

Comments (0)
Add Comment