Kannada Recipe: ಮಳೆಗಾಲ ಚಳಿಗಾಲದ ಪೂರ್ತಿ ಗರಿಗರಿಯಾದ ಹಪ್ಪಳ ತಿನ್ನಬೇಕಾ? ಅದಕ್ಕೆ ಮಾರ್ಕೆಟ್ ಯಾಕೆ, ಮನೆಯಲ್ಲಿಯೇ ಈ ರೀತಿಯಾಗಿ ಒಮ್ಮೆ ಹಪ್ಪಳ ತಯಾರಿಸಿ, ವರ್ಷವಾದರೂ ಕೆಡುವುದಿಲ್ಲ ನೋಡಿ

Kannada Recipe: ಹಪ್ಪಳ, ಸಂಡಿಗೆ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಮಳೆಗಾಲದಲ್ಲಿ, ಚಳಿಗಾಲದಲ್ಲಿ ಗರಿಗರಿಯಾದ ಹಪ್ಪಳ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗಿರುವ ಹಪ್ಪಳವನ್ನು ತರುತ್ತೇವೆ. ಆದರೆ ನೀವು ಮನೆಯಲ್ಲಿಯೇ ಅತ್ಯಂತ ರುಚಿಕರವಾದ ಹಾಗೂ ಬಹಳ ಸಮಯ ಕೆಡದಂತಹ ಹಪ್ಪಳವನ್ನು ಮಾಡಿಕೊಂಡು ತಿನ್ನಬಹುದು. ಇಲ್ಲಿದೆ ನೋಡಿ ಸುಲಭ ರೆಸಿಪಿ.

Kannada Recipe: ಮಳೆಗಾಲ ಚಳಿಗಾಲದ ಪೂರ್ತಿ ಗರಿಗರಿಯಾದ ಹಪ್ಪಳ ತಿನ್ನಬೇಕಾ? ಅದಕ್ಕೆ ಮಾರ್ಕೆಟ್ ಯಾಕೆ, ಮನೆಯಲ್ಲಿಯೇ ಈ ರೀತಿಯಾಗಿ ಒಮ್ಮೆ ಹಪ್ಪಳ ತಯಾರಿಸಿ, ವರ್ಷವಾದರೂ ಕೆಡುವುದಿಲ್ಲ ನೋಡಿ https://sihikahinews.com/amp/how-to-do-rice-happala/

ಹಪ್ಪಳ ಮಾಡಲು ಬೇಕಾಗಿರುವ ಸಾಮಗ್ರಿಗಳು:

ಅಕ್ಕಿ – 1 ಕೆಜಿ.

ಸಬ್ಬಕ್ಕಿ – 1/4 ಕೆಜಿ

ಅಚ್ಚ ಖಾರದ ಪುಡಿ – 50 ಗ್ರಾಂನಷ್ಟು

ಕಾಳುಮೆಣಸಿನ ಪುಡಿ – 20 ಗ್ರಾಂನಷ್ಟು್

ಜೀರಿಗೆ- 25 ಗ್ರಾಂನಷ್ಟು

ಹಪ್ಪಳದ ಖಾರ – 2 ಪ್ಯಾಕೆಟ್‌ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ  ವಿಧಾನ:

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ವಚ್ಛವಾದ ಬಟ್ಟೆಯಲ್ಲಿ ಹರಡಿ ಬಿಸಿಲಿನಲ್ಲಿ ಒಣಗಿಸಿ, ನಂತರ ಸಬ್ಬಕ್ಕಿ ಸೇರಿಸಿ ಮಿಲ್‌ನಲ್ಲಿ ಪುಡಿ ಮಾಡಿಸಿ. (ಸ್ವಲ್ಪ ಪ್ರಮಾಣದ್ದಾದರೆ ಮನೆಯಲ್ಲಿಯೇ ಮಾಡಬಹುದು. ಆದರೆ ನುಣ್ಣಗೆ ಪುಡಿಮಾಡಬೇಕು)

ಈಗ ಒಂದು ದೊಡ್ಡ ಪಾತ್ರೆಗೆ ಎರಡುವರೆ  ಲೀಟರ್‌ ನೀರು ಸೇರಿಸಿ ಸ್ಟೋವ್‌ ಮೇಲಿಡಿ. ಅಥವಾ ನಿಮ್ಮ ಅಂದಾಜಿನ ನೀರನ್ನು ಬಳಸಿ. ನೀರು ಸ್ವಲ್ಪ ಬಿಸಿ ಆದಾಗ 3-4 ಟೇಬಲ್‌ ಸ್ಪೂನ್‌ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಂಟಿಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ನೀರು ಕುದಿ ಬಂದು ಗಂಜಿಯಂತೆ ಆದಾಗ ಅದಕ್ಕೆ ಅಚ್ಚ ಖಾರದ ಪುಡಿ, ಕಾಳುಮೆಣಸಿನ  ಪುಡಿ, ಹಪ್ಪಳದ ಖಾರ (ಮಾರ್ಕೆಟ್ ನಲ್ಲಿ ದೊರೆಯುತ್ತದೆ), ಹಾಗೂ ಜೀರಿಗೆ ಸೇರಿಸಿ ಮಿಕ್ಸ್ ಮಾಡಿ.

ನಂತರ ಮಧ್ಯಭಾಗಕ್ಕೆ ಅಕ್ಕಿಹಿಟ್ಟು ಸುರಿದು ಮಧ್ಯಮ ಉರಿಯಲ್ಲಿ 10-15 ನಿಮಿಷ ಕುದಿಯಲು ಬಿಡಬೇಕು. ಇದಕ್ಕೆ ತಿರುವು ಕೋಲನ್ನು ಬಳಸಿ ಮಿಶ್ರಣವನ್ನು ಚೆನ್ನಾಗಿ ತಿರುವಿ. ಇದು ಮುದ್ದೆಯಾಗಬೇಕು. ಮುದ್ದೆ ಗಟ್ಟಿಯಾಗಿರಲಿ. ಇಲ್ಲವಾದರೆ ಹಪ್ಪಳ ಲಟ್ಟಿಸಲು ಬರುವುದಿಲ್ಲ.

ಈಗ ಪಾತ್ರೆಯಿಂದ ಸ್ವಲ್ಪ ಸ್ವಲ್ಪವೇ ಮುದ್ದೆಯನ್ನು ತೆಗೆದುಕೊಂಡು ನೆಲದ ಮೇಲೆ ಅತಹ್ಆ ದೊಡ್ಡ ಪ್ಲೇಟ್ ನಲ್ಲಿಟ್ಟು ಚೆನ್ನಾಗಿ ನಾದಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಸ್ವಲ್ಪ ಎಣ್ಣೆ ಸವರಿಕೊಂಡು ಪೂರಿ ಆಕಾರದಲ್ಲಿ ಒತ್ತಿಕೊಳ್ಳಿ. ಜಾಸ್ತಿ ಎಣ್ಣೆ ಬಳಸಬೇಡಿ. ಹಪ್ಪಳ ಬೇಗ ಕೆಡುತ್ತದೆ.

ಲಟ್ಟಣಿಗೆಯಿಂದ ಅಥವಾ ಪ್ರೆಸ್ಸಿಂಗ್‌ ಮೆಷೀನ್‌ ನಿಂದ ಹಪ್ಪಳ ಒತ್ತಿಕೊಳ್ಳಿ. ಒಂದು ಶುದ್ಧವಾದ ಬಟ್ಟೆ ಮೇಲೆ ಹಪ್ಪಳವನ್ನು ಹರಡಿ, ಚೆನ್ನಾಗಿ ಗಾಳಿ ಆಡುವ ಜಾಗದಲ್ಲಿ ನೆರಳಿನಲ್ಲಿ 4-5 ದಿನಗಳ ಕಾಲ ಒಣಗಿಸಿ ಬಳಿಕ ಬಿಸಿಲಿನಲ್ಲಿ 2 ಗಂಟೆ ಒಣಗಿಸಿದರೂ ಸಾಕು. ನಂತರ ಗಾಳಿಯಾಡದ ಒಂದು ಡಬ್ಬದಲ್ಲಿ ಹಪ್ಪಳವನ್ನು ಶೇಖರಿಸಿಡಿ. ಬೇಕಾದಾಗ ಕರಿದು ತಿನ್ನಿ. ಒಣಗಿದ ಹಪ್ಪಳವನ್ನು ಒಂದು ಡಬ್ಬದಲ್ಲಿ ಮುಚ್ಚಳ ಮುಚ್ಚಿ ಶೇಖರಿಸಿದರೆ 1 ವರ್ಷವಾದರೂ ಕೆಡುವುದಿಲ್ಲ.

LifestyleRecipe