Instagram money earning: ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಜನರನ್ನು ರಂಜಿಸೋದು ಮಾತ್ರವಲ್ಲ, ಸಕ್ಕತ್ ಹಣ ಕೂಡ ಮಾಡಬಹುದು ಹೇಗೆ ಗೊತ್ತಾ?

Instagram money earning: ಸ್ನೇಹಿತರೆ ಸೋಶಿಯಲ್ ಮೀಡಿಯಾ (Social Media) ಇದೀಗ ಅತ್ಯುತ್ತಮ ಆದಾಯದ ಮೂಲ ಕೂಡ ಆಗಿದೆ ಎನ್ನುವುದು ನಿಮಗೂ ಗೊತ್ತು. ಇನ್ಸ್ಟಾಗ್ರಾಮ್ (Instagram) ನಲ್ಲಿ ರೀಲ್ಸ್ (Reels) ಮಾಡುವುದರ ಮೂಲಕ ಇಂದು ಹೆಚ್ಚು ಹಣ (Earn money) ಗಳಿಸುತ್ತಿದ್ದಾರೆ ಅದಕ್ಕೆ ತಕ್ಕ ಹಾಗೆ ನೀವು ಹಣವನ್ನು ಕೂಡ ಗಳಿಸಬಹುದು ಟಿಕ್ ಟಾಕ್ (TikTok app) ಎನ್ನುವ ಆಪ್ ಭಾರತದಲ್ಲಿ ಬ್ಯಾನ್ ಆಗುತ್ತಿದ್ದಂತೆ ಇನ್ಸ್ಟಾ ರೀಲ್ಸ್ ಬಳಕೆಗೆ ಬಂತು. ಈ ಮೂಲಕ ಜನರು ಹೆಚ್ಚಾಗಿ ರೀಲ್ಸ್ ಮಾಡುವುದಕ್ಕೆ ಶುರು ಮಾಡಿದ್ರು.

ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಆಪ್ಷನ್ ಇರೋದು ಎಲ್ಲರಿಗೂ ಬಹಳ ಉಪಯುಕ್ತವಾಗಿದೆ ಇನ್ಸ್ಟಾಗ್ರಾಮ್ ನಲ್ಲಿ ಟೈಂಪಾಸ್ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಅದರ ಜೊತೆಗೆ ಹಣದ ಮೂಲವಾಗಿಯೂ ಕೂಡ ರೀಲ್ಸ್ ಬಳಕೆ ಮಾಡಿಕೊಳ್ಳಬಹುದು. ಕೇವಲ ಮನೋರಂಜನೆಗಾಗಿ (Entrainment)  ಅಥವಾ ಸಮಯ ಕಳೆಯುವುದಕ್ಕೆ ಮಾತ್ರ ರಿಲ್ಸ್ ಸೀಮಿತವಾಗಿಲ್ಲ. ಆ ಮೂಲಕ ಹಣ ಸಂಪಾದನೆಯನ್ನು ಕೂಡ ಮಾಡಬಹುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಇದನ್ನೂ ಓದಿ:Kannada Film: ಸ್ತನ ಕ್ಯಾನ್ಸರ್ ಗೆ ಸಡ್ಡು ಹೊಡೆದು ಗೆದ್ದು ಬಂದ ನಟಿ ಹಂಸನಂದಿನಿ; ಜನ್ಮದಿನದಂದೆ ಚಿತ್ರೀಕರಣಕ್ಕೆ ಹಾಜರ್?!

ಫಾಲೋವರ್ಸ್ ಹೆಚ್ಚಿಸಿ;

ಇನ್ಸ್ಟಾಗ್ರಾಮ್ ನಲ್ಲಿ ಫೇಮಸ್ ಆಗೋದು ಅಂದ್ರೆ ಅಲ್ಲಿ ನಿಮ್ಮ ಖಾತೆಯ ಫಾಲೋವರ್ಸ್ (Followers)  ಜಾಸ್ತಿ ಆಗಬೇಕು. ರೀಲ್ಸ್ ನಲ್ಲಿ ಇದೀಗ ಸ್ಪರ್ಧೆ ಕೂಡ ಹೆಚ್ಚಾಗಿದೆ. ಪ್ರತಿಯೊಬ್ಬರೂ ರೀಲ್ಸ್ ಮೂಲಕ ತಮ್ಮ ಟ್ಯಾಲೆಂಟ್ ತೋರಿಸುತ್ತಿದ್ದಾರೆ. ಹಾಗಾಗಿ ನೀವು ರೀಲ್ಸ್ ಮೂಲಕ ಹಣ ಸಂಪಾದಿಸಬೇಕು ಅಂದ್ರೆ ನಿಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಆದರೆ ಸಾಮಾನ್ಯ ಜನರು ಫಾಲೋವರ್ಸ್ ಹೆಚ್ಚಿಸಿಕೊಳ್ಳುವುದಕ್ಕೆ ಶ್ರಮ ಪಡಬೇಕು. ಆದರೆ ಫಾಲೋವರ್ಸ್ ಸಂಖ್ಯೆ ಸಾವಿರ ದಾಟಿದರೆ ಗಳಿಕೆ ಶುರು ಆಗುತ್ತೆ. ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆದಾಯ ಕೂಡ ಹೆಚ್ಚಾಗುತ್ತಾ ಹೋಗುತ್ತೆ. 1000 ಫಾಲೋವರ್ಸ್ ಇದ್ರೆ ಅನೇಕ ಬ್ರಾಂಡ್ ಗಳು ತಮ್ಮ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದಕ್ಕೆ ನೀಡುತ್ತಾರೆ. ಜೊತೆಗೆ ಅವರ ಉತ್ಪನ್ನಗಳನ್ನು ಉಚಿತವಾಗಿಯೂ ನೀಡುತ್ತಾರೆ. ಪ್ರತಿ ಸಾವಿರ ಫಾಲ್ಲೋವರ್ಸ್ ಗೆ 10 ಡಾಲರ್ ಪಾವತಿಸಿದರೆ ಕೆಲವು ಕಂಪನಿಗಳು 80 ಡಾಲರ್ ಗಿಂತಲೂ ಹೆಚ್ಚು ಹಣವನ್ನು ಪಾವತಿಸುತ್ತವೆ. ಒಂದು ವೇಳೆ ನೀವು ಐದರಿಂದ ಹತ್ತು ಸಾವಿರ ಫಾಲ್ಲೋವಸ್ ಹೊಂದಿದ್ದರೆ ನಿಮ್ಮ ಪ್ರತಿ ಪೋಸ್ಟ್ ಗೆ 6,531 ರೂಪಾಯಿ ಹಣವನ್ನು ಪಡೆಯಬಹುದು. ಅದೇ ರೀತಿ 50ರಿಂದ 80,000 ಫಾಲೋಸ್ ಹೊಂದಿದವರು ಪ್ರತಿ ಪೋಸ್ಟ್ ಗೆ 14,000 ಕ್ಕಿಂತ ಹೆಚ್ಚಿನ ಹಣ ಗಳಿಕೆ ಮಾಡುತ್ತಾರೆ. ಇದನ್ನೂ ಓದಿ: Darling Krishna Casting call: ನಟಿಸುವುದಕ್ಕೆ ಆಸಕ್ತಿ ಇದ್ರೆ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾದಲ್ಲಿ ಸಿಗಲಿದೆ ಸುವರ್ಣಾವಕಾಶ; ಈ ಕೆಳಗಿನ ಅರ್ಹತೆಗಳು ಇದ್ರೆ ಇಂದೇ ಅಪ್ಲೈ ಮಾಡಿ

ವಿಡಿಯೋ ಜೊತೆ ಹ್ಯಾಶ್ ಟ್ಯಾಗ್ ಪ್ರಯೋಗ;

ಇನ್ಸ್ಟಾಗ್ರಾಮ್ ನಲ್ಲಿ ಇದು ಬಹಳ ಫೇಮಸ್ ಆಗಿದೆ. ನೀವು ಯಾವುದೇ ರೀಲ್ಸ್ ಅಥವಾ ಯಾವುದೇ ಪೋಸ್ಟ್ ಹಾಕುವಾಗ ಜನ ಅದನ್ನ ಹೆಚ್ಚು ನೋಡಬೇಕು ಅಂದ್ರೆ ಅದಕ್ಕೆ ಹ್ಯಾಶ್ ಟ್ಯಾಗ್  ಹಾಕುವುದು ಬಹಳ ಮುಖ್ಯ. ನೀವು ಜನರು ಹೆಚ್ಚಾಗಿ ಸರ್ಚ್ ಮಾಡುವಂತಹ, ಹೆಚ್ಚು ಫೇಮಸ್ ಆಗಿರುವ ವರ್ಡ್ ಗಳನ್ನು ಬಳಸಬೇಕು ಜೊತೆಗೆ ನೀವು ಮಾಡುವ ರೀಲ್ಸ್ ಗುಣಮಟ್ಟವೂ ಕೂಡ ಅಷ್ಟೇ ಮುಖ್ಯ. ಯಾವ ರೀತಿ ಮಾಡಿದರೆ ಜನ ನೋಡುತ್ತಾರೆ, ಈಗ ಟ್ರೆಂಡಿಂಗ್ ನಲ್ಲಿ ಇರುವ ರೀಲ್ಸ್ ಯಾವುದು ಎಂಬುದನ್ನು ನೋಡಿಕೊಂಡು ಅದಕ್ಕೆ ತಕ್ಕ ಹಾಗೆ ವಿಡಿಯೋಗಳನ್ನು ಮಾಡಿ. ಇದರಿಂದ ನೋಡುವವರ ಸಂಖ್ಯೆ ಜಾಸ್ತಿ ಆಗುತ್ತೆ ವೀವರ್ಸ್ (Viewers) ಹೆಚ್ಚಾದಂತೆಯೂ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಗಳಿಕೆಯೂ ಹೆಚ್ಚಾಗುತ್ತದೆ.

ಕಂಪನಿಯ ಜೊತೆ ಕೈಜೋಡಿಸಿ;

ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳು ಅವರ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದಕ್ಕೆ ಜನರನ್ನ ಹುಡುಕುತ್ತಿರುತ್ತಾರೆ. ನೀವು ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದರೆ ನಿಮಗೂ ಆಫರ್ ಕೂಡ ಸಿಗಬಹುದು ಜೊತೆಗೆ ನೀವು ಒಂದು ಪೋಸ್ಟ್ ಮಾಡಿದರೆ ನಿಮ್ಮ ಫಾಲೋವರ್ಸ್ ಆಧಾರದ ಮೇಲೆ ನಿಮಗೆ ಆ ಕಂಪನಿ ಹಣವನ್ನು ನೀಡುತ್ತದೆ.

ನಿಮ್ಮದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿ; 

ಇನ್ನು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದಕ್ಕೆ ಮುಕ್ತ ಅವಕಾಶ ಇದೆ. ಹಾಗಾಗಿ ನೀವು ನಿಮ್ಮದೇ ಆದ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೂ ಕೂಡ ಇಲ್ಲಿ ಸಾಧ್ಯ. ನೀವು ಮಾರಾಟ ಮಾಡುವ ವಸ್ತುಗಳು ಹಾಗೂ ಅದರ ಬೆಲೆ ಹಾಕಿ ಜಾಹೀರಾತನ್ನು ನೀಡಬಹುದು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಹಾಗೂ ಫೋಟೋಗಳ ಪೋಸ್ಟ್ ಹಾಕಬಹುದು. ನೀವೇ ತಯಾರಿಸಿದ ವಸ್ತುವಿನ ಗುಣಮಟ್ಟ ಚೆನ್ನಾಗಿದ್ದರೆ ಖಂಡಿತವಾಗಿಯೂ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಹಣ ಗಳಿಸಬಹುದು.

how to earn moneyInstagram reelsMoney making