Call record:ನಿಮ್ಮ ಕರೆಯನ್ನು ಯಾರಾದರೂ ಕದ್ದು ಕೇಳಿಸಿಕೊಳ್ಳಬಹುದು; ಹುಷಾರಾಗಿರಿ; ನಿಮ್ಮ ಫೋನ್ ರೆಕಾರ್ಡ್ ಮಾಡ್ತಿದ್ದಾರೆ ಅಂತ ತಿಳಿದುಕೊಳ್ಳುವುದು ಹೇಗೆ ಗೊತ್ತಾ?

Call record: ಮೊದಲೆಲ್ಲ ಮನೆಯಲ್ಲಿ ಒಂದು ಲ್ಯಾಂಡ್ ಲೈನ್ ಫೋನ್ ಇರುತ್ತಿತ್ತು. ಅಥವಾ ಎಸ್ಟಿಡಿ ಭೂತ್ಗಳು ಇರುತ್ತಿದ್ದವು. ಆಗ ತೀರಾ ಅವಶ್ಯವಿದ್ದರಷ್ಟೆ ಕರೆ ಮಾಡಲಾಗುತ್ತಿತ್ತು. ಈಗ ಎಲ್ಲ ಮೊಬೈಲ್ ಜಮಾನಾ. ಎಲ್ಲ ಕಂಪನಿಗಳು ಉಚಿತ ಕರೆಗಳನ್ನು ನೀಡುತ್ತಿವೆ. ಹಾಗಾಗಿ ಈಗ ಅವಶ್ಯವಿದ್ದರೂ ಇಲ್ಲದಿದ್ದರೂ ಸಹ ಕರೆ ಮಾಡಿ ಮಾತನಾಡುತ್ತಾರೆ. ಕೆಲವೊಮ್ಮೆ ಸ್ನೇಹಿತರ ಜೊತೆ ಕಾಲಹರಣ ಮಾಡಲು ಕರೆ ಮಾಡುತ್ತಾರೆ. ಆದರೆ ಈ ವೇಳೆ ಯಾರಾದರೂ ನಾವು ಮಾತನಾಡುವುದನ್ನು ಕದ್ದು ಕೇಳಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದರ ಬಗ್ಗೆಯೂ ನಾವು ಜಾಗೃತರಾಗಿರಬೇಕು. ಇದನ್ನೂ ಓದಿ: Astrology: ಹೊಸ ವರ್ಷದ ಆರಂಭದಲ್ಲಿ ಶನಿಯು ರಾಶಿ ಬದಲಾಯಿಸಿದರೆ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಗೊತ್ತೇ? ಸುರಿಯಲಿದೆ ಹಣದ ಸುರಿಮಳೆ!!

ಅನೇಕ ದೇಶಗಳಲ್ಲಿ ಕರೆಯನ್ನು ರೆಕಾರ್ಡ್ ಮಾಡುವುದು ಕಾನೂನು ಬಾಹಿರವಾಗಿದೆ. ಈ ಕಾರಣಕ್ಕಾಗಿಯೇ ಗೂಗಲ್ ಕೂಡ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ಇದಕ್ಕಾಗಿ ಫೋನ್ ಅಂತರ್ಗತ ರೆಕಾರ್ಡಿಂಗ್ ಸೌಲಭ್ಯ ಹೊಂದಿತ್ತು. ಈ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಆನ್ ಮಾಡಿದರೆ ಮುಂದೆ ಆತ ಅದರ ಮಾಹಿತಿ ಪಡೆಯಬಹುದು. ನಿಮ್ಮ ಜೊತೆ ಮಾತನಾಡುತ್ತಿರುವ ವ್ಯಕ್ತಿ ನಿಮ್ಮ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಾನೋ ಇಲ್ಲವೋ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು. ಇದನ್ನೂ ಓದಿ: Reliance-Jio Recharge Plan: ಏರ್ಟೆಲ್ ಗೆ ಮತ್ತೊಂದು ಶಾಕ್ ಕೊಟ್ಟ ಅಂಬಾನಿ ಜಿಯೋ: ಕೇವಲ 222ರೂ.ಗೆ ಕೊಟ್ಟ ಆಕರ್ಷಕ ಆಫರ್ ಏನು ಗೊತ್ತೇ?

ನಿಮ್ಮ ಕರೆಯು ರೆಕಾರ್ಡ್ ಆಗುತ್ತಿದೆಯೇ ಇಲ್ಲವೇ ಎನ್ನುವದನ್ನು ತಿಳಿದುಕೊಳ್ಳಲು ನೀವು ಕಷ್ಟಪಡಬೇಕಾಗಿಲ್ಲ. ಇತ್ತಿಚಿನ ದಿನಗಳಲ್ಲಿ ಕರೆ ರೆಕಾರ್ಡ್ ಮಾಡುವ ಪ್ರಕಟಣೆ ಸುಲಭವಾಗಿ ಕೇಳಿಬರುತ್ತದೆ. ಈ ಫೀಚರ್ ಇಲ್ಲದ ಫೋನಿನಿಂದ ಕರೆ ಮಾಡಿ ರೆಕಾರ್ಡ್ ಮಾಡುತ್ತಿದ್ದಾರೆ ಎಂದು ಅನಿಸಿದರೆ ನೀವು ಈ ರೀತಿ ಮಾಡಿದರೆ ಆರಾಮವಾಗಿ ತಿಳಿದುಕೊಳ್ಳಬಹುದು.

ನೀವು ಕರೆ ಮಾಡಿರುವ ವೇಳೆ ಬೀಪ್ ಶಬ್ದ ಕೇಳಿಬರುತ್ತಿದೆಯೇ ಎಂದು ಗಮನಿಸಬೇಕು. ಕರೆ ಮಾಡುತ್ತಿರುವ ಸಂದರ್ಭದಲ್ಲಿ ಬೀಪ್ ಶಬ್ದ ಪದೆ ಪದೇ ಕೇಳಿಬರುತ್ತಿದ್ದರೆ ನಿಮ್ಮ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎಂದು ನೀವು ತಿಳಿದುಕೊಳ್ಳಬಹುದು.

ಇನ್ನು ಒಂದು ವಿಚಾರ ಏನೆಂದರೆ ಹಲವರಿಗೆ ಕರೆ ರೆಕಾರ್ಡ್ ಮಾಡುವುದು ಹಾಗೂ ಕರೆ ಟ್ಯಾಪಿಂಗ್ ಮಾಡುವುದರ ನಡುವೆ ಇರುವ ವ್ಯತ್ಯಾಸ ಸಹ ಗೊತ್ತಿರುವುದಿಲ್ಲ. ನೀವಿಬ್ಬರು ಮಾತನಾಡುತ್ತಿರುವ ವೇಳೆ ಮೂರನೇ ವ್ಯಕ್ತಿ ನಿಮ್ಮ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರೆ ಅದನ್ನು ಟ್ಯಾಪಿಂಗ್ ಎಂದು ಕರೆಯುತ್ತಾರೆ. ಅನೇಕ ಅಪರಾಧ ಪ್ರಕರಣದಲ್ಲಿ ಈ ರೀತಿ ಮಾಡುವದರಿಂದ ಅಪರಾಧಿಗಳನ್ನು ಹಿಡಿಯಬಹುದಾಗಿದೆ. ನ್ಯಾಯಾಲಯದಿಂದ ಅನುಮತಿ ಪಡೆದ ಖಾಸಗಿ ಭದ್ರತಾ ಏಜೇನ್ಸಿಗಳು ಈ ರೀತಿ ಕರೆ ಟ್ಯಾಪಿಂಗ ಮಾಡುತ್ತವೆ. ಯಾರಾದರೂ ನಮ್ಮ ಕರೆಯನ್ನು ಟ್ಯಾಪ್ ಮಾಡುತ್ತಿದ್ದರೂ ಅದನ್ನು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಕರೆಯೂ ಪದೆ ಪದೇ ಡ್ರಾಪ್ ಆಗುತ್ತಿದ್ದರೆ ಆಗ ನಿಮ್ಮ ಕರೆಯನ್ನು ಯಾರೋ ಟ್ಯಾಪ್ ಮಾಡುತ್ತಿದ್ದಾರೆ ಎಂದು ನೀವು ಊಹಿಸಬಹುದು.

call recordmobileTechnology