Cash Back:ಗೂಗಲ್ ಪೇನಲ್ಲಿ ಕ್ಯಾಶ್ ಬ್ಯಾಕ್ ಬದಲು ಬೇರೆ ಬೇರೆ ಆಫರ್ಗಳು ಬರುತ್ತಿವೆಯೇ? ಹಾಗಾದರೆ ಈ ಟ್ರಿಕ್ಸ್ ಫಾಲೋ ಮಾಡಿ, ಕ್ಯಾಶ್ ಬ್ಯಾಕ್ ಪಡೆಯಿರಿ

Cash Back:ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವಿಧಾನಗಳು ಬಂದು ೪-೫ ವರ್ಷಗಳೇ ಆಗಿ ಹೋದವು. ಈಗ ಯಾರೂ ಕೂಡ ಶಾಪಿಂಗ್ ಆಗಲಿ, ಕಿರಾಣಿ ಸಾಮಗ್ರಿಗಳನ್ನು ತರಲಾಗಲಿ ಹಣವನ್ನು ತೆಗೆದುಕೊಂಡು ಹೋಗುವುದಿಲ್ಲ. ಬದಲಾಗಿ ಮೊಬೈಲ್ ತೆಗೆದುಕೊಂಡು ಹೋಗಿ ಅದರಿಂದಲೇ ಹಣವನ್ನು ಪಾವತಿ ಮಾಡುತ್ತಾರೆ. ಈಗಿಗ ಜನರಿಗೆ ಕೈನಲ್ಲಿ ಹಣ ಇಟ್ಟುಕೊಳ್ಳುವುದು ಮರೆತು ಹೋಗಿದೆ ಎಂದರೆ ತಪ್ಪಾಗಲಾರದು. ಗೂಗಲ್ ಪೇ ಕಿಂತ ಮೊದಲು ಸ್ಕ್ರಾಚ್ ಕಾರ್ಡ್ ಬಳಕೆ ಆಗುತ್ತಿತ್ತು. ಜೊತೆಗೆ ಹೆಚ್ಚೆಚ್ಚು ಕ್ಯಾಶ್ ಬ್ಯಾಕ್ ಬರುತ್ತಿತ್ತು. ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಹೆಚ್ಚೆಚ್ಚು ಗೂಗಲ್ ಪೇ ಬಳಸಿದರೂ ಕ್ಯಾಶ್ ಬ್ಯಾಕ್ ಮಾತ್ರ ಬರುತ್ತಿಲ್ಲ. ಅದರ ಬದಲು ಬೇರೆ ಬೇರೆ ಕಂಪನಿಯ ಕೂಪನ್ಗಳು ಬರುತ್ತಿವೆ. ಈ ಕೂಪನ್ಗಳ ಬದಲು ಕ್ಯಾಶ್ ಪಡೆಯಲು ಮಾರ್ಗವಿದೆ.

ಈಗ ಹಣವನ್ನು ವರ್ಗಾವಣೆ ಮಾಡಲು ಗೂಗಲ್ ಪೇ ಒಂದೇ ಅಲ್ಲ ಬೇರೆ ಬೇರೆ ಅಪ್ಲಿಕೇಶನ್ ಸಹ ಇದೆ. ಹಾಗಾಗಿ ನೀವು ಜಿ ಪೇ ಬದಲು ಬೇರೆ ಅಪ್ಲಿಕೇಶನ್ಗಳನ್ನು ಬಳಕೆ ಮಾಡಬಹುದು. ಈ ರೀತಿ ಅಪ್ಲಿಕೇಶನ್ ಗೆ ಖಾತೆಯನ್ನು ಲಿಂಕ್ ಮಾಡಿ ಗ್ಯಾಸ್ ಬಿಲ್, ವಿದ್ಯುತ್ ಬಿಲ್ಗೆ ಪೇ ಮಾಡುವುದರಿಂದ ನೀವು ಕ್ಯಾಶ್ ಬ್ಯಾಕ್ ಪಡೆಯುತ್ತೀರಿ.
ಗೂಗಲ್ ಪೇ ಅಪ್ಲಿಕೇಶನ್ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಬಹುದು. ನೀವು ಯಾವಾಗಲೂ ಒಂದೇ ಬ್ಯಾಂಕ್ ಖಾತೆಯಿಂದ ಹಣವನ್ನು ಕಳುಹಿಸಿದರೆ ಕಡಿಮೆ ಕ್ಯಾಶ್ ಬ್ಯಾಕ್ ಪಡೆಯುತ್ತೀರಿ. ಒಂದಕ್ಕಿಂತ ಹೆಚ್ಚು ಖಾತೆಗಳಿಂದ ಹಣ ವರ್ಗಾವಣೆ ಮಾಡಿದಾಗ ನೀವು ಹೆಚ್ಚಿನ ಕ್ಯಾಶ್ ಬ್ಯಾಕ್ ಪಡೆಯುತ್ತೀರಿ.
ಇದಲ್ಲದೆ ನೀವು ಹಣ ಕಳುಹಿಸುವ ವ್ಯಕ್ತಿ ಬೇರೆ ಬೇರೆ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ನೀವು ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದರಿಂದ ಹೆಚ್ಚಿನ ಕ್ಯಾಶ್ ಬ್ಯಾಕ್ ಪಡೆದುಕೊಳ್ಳುತ್ತೀರಿ.

Cash backGoogle Payhow to get cash back from google pay