UPI Payment Refund:ನೀವು ಯಾರಿಗಾದರೂ ತಪ್ಪಾಗಿ ಹಣ ಕಳುಹಿಸಿದರೆ, ವಾಪಸ್ಸು ಪಡೆಯುವುದು ಹೇಗೆ ಗೊತ್ತೇ?? ಸುಲಭವಾಗಿ ವಾಪಾಸ್ ಪಡೆಯಿರಿ.

UPI Payment Refund:UPI ಬಳಕೆಗೆ ಬಂದಾಗಿನಿಂದ ಅದರ ಮೂಲಕವೇ ಜನರು  ಹಣದ ವಹಿವಾಟು (Money Transactions)  ಮಾಡುತ್ತಾರೆ. ಇದರಿಂದ ಸಾಕಷ್ಟು ಜನರಿಗೆ ಹಣದ ವ್ಯವಹಾರ ಸುಲಭವೂ ಆಗಿದೆ.  ನೀವು ಎಲ್ಲೇ ಇರಿ ಆದರೆ ಇನ್ನೊಂದು ಸ್ಥಳದಲ್ಲಿ ಕುಳಿತ ವ್ಯಕ್ತಿಗೆ ಹಣ ಕಳುಹಿಸಬಹುದು. ಇದಕ್ಕಾಗಿ ಬ್ಯಾಂಕ್ (bank) ಗೆ ಅಲೆದಾಡುವ ಪರಿಸ್ಥಿತಿ ಈಗಿಲ್ಲ. ಆದರೆ ಈ UPI ಹಣ ವಹಿವಾಟಿನಲ್ಲಿ ಒಮ್ಮೊಮ್ಮೆ ನಮ್ಮ ಕೈಮೀರಿ ಕೆಲವು ತಪ್ಪುಗಳೂ ಆಗುತ್ತವೆ. ಅದರಲ್ಲಿ ಮುಖ್ಯವಾಗಿ ತಪ್ಪಾಗಿ ಬೇರೆಯವರ ಖಾತೆಗೆ ಹಣ ಹೋಗುವುದು. ತಪ್ಪು ಸಂಖ್ಯೆಯನ್ನು ನಮೂದಿಸಿದಾಗ, ಆನ್‌ಲೈನ್ ವಂಚನೆ ಅಥವಾ ತಪ್ಪು QR ಕೋಡ್ ಅನ್ನು ಸ್ಕ್ಯಾನ್ ಮಾಡುವುದರಿಂದ ಇದು ಸಂಭವಿಸಬಹುದು. ಆದರೆ ಹಣವು ನೀವು ಕಳುಹಿಸಬೇಕಾದ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ವ್ಯಕ್ತಿಗೆ ಹೋದರೆ ಏನು ಮಾಡಬೇಕು ಎನ್ನುವ ಚಿಂತೆನಾ? ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಹಣವನ್ನು ವಾಪಾಸ್ (money refund)  ಪಡೆಯುವುದು ಹೇಗೆ ಎಂದು ನಾವು ಹೇಳುತ್ತೇವೆ. ಈ ಲೇಖನವನ್ನು ಪೂರ್ತಿ ಓದಿ:

ಇದನ್ನೂ ಓದಿ: Business Ideas: ನಿಮ್ಮ ಬಳಿ ಸಾವಿರ ರೂಪಾಯಿ ಇದ್ಯಾ? ಈ ಬ್ಯುಸನೆಸ್ ಮಾಡಿದ್ರೆ ಸಾಕು ತಿಂಗಳಿಗೆ 30ಸಾವಿರ ರೂಪಾಯಿ ಆದಾಯ ಫಿಕ್ಸ್!

UPI ವಂಚನೆಗಳಿಂದ ಹಣವನ್ನು ಮರಳಿ ಪಡೆಯುವುದು ಹೇಗೆ? (How To Get Money Back From UPI Frauds)

ಮೊದಲನೆಯದಾಗಿ ಆನ್‌ಲೈನ್ ಪಾವತಿ ಮಾಡುವಾಗ ಹಣವು ತಪ್ಪು ಖಾತೆಗೆ ಹೋದರೆ ಮೊದಲು ಬ್ಯಾಂಕ್ ಗೆ ಮೇಲ್ ಮಾಡಿ.  ಬ್ಯಾಂಕ್‌ಗೆ ಮೇಲ್ ಮಾಡಿದ ನಂತರ, ಉತ್ತರ ಸಿಗದಿದ್ದರೆ ಅಥವಾ ಸಮಸ್ಯೆ ಬಗೆಹರಿಯದಿದ್ದರೆ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ. ಬ್ಯಾಂಕಿನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತ್ತು ಪಾವತಿ ವಿವರಗಳನ್ನು ನೀಡಿ.  ಮ್ಯಾನೇಜರ್ ಎಲ್ಲವನ್ನೂ ಪರಿಶೀಲಿಸಿದ ನಂತರ ಹಣವನ್ನು ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ.

ಇದನ್ನೂ ಓದಿ: Job Tips: ಪದೇ ಪದೇ ಕೆಲಸ ಬದಲಾಯಿಸುವುದರಲ್ಲಿಯೂ ಇದೆ ಬೆನಿಫೀಟ್; ಏನು ಗೊತ್ತಾ?

ತಪ್ಪಾದ UPI ಹಣ ಪಾವತಿಯ ಕುರಿತು RBI ಏನು ಹೇಳುತ್ತೆ?

RBI ಮಾರ್ಗಸೂಚಿಗಳ ಪ್ರಕಾರ, ನಿಮ್ಮ ಹಣವು ತಪ್ಪು ಖಾತೆಗೆ ಹೋದರೆ ಮತ್ತು ನೀವು ಅದರ ಬಗ್ಗೆ ಬ್ಯಾಂಕಿನಲ್ಲಿ ದೂರು ನೀಡಿದರೆ, ಹಣವನ್ನು ಹೋದ ಖಾತೆಯಿಂದ ಮರು ಪಡೆದು ಬ್ಯಾಂಕ್ ನಿಮ್ಮ ಖಾತೆಗೆ ಹಣವನ್ನು ಮರುಪಾವತಿಸುತ್ತದೆ, ಈ ಬ್ಯಾಂಕಿಂಗ್ ಪ್ರಕ್ರಿಯೆಗೆ ಕನಿಷ್ಠ 15 ದಿನಗಳು ಬೇಕಾಗಬಹುದು. ಆದರೆ ಹಣ ಸಿಕ್ಕ ಕೂಡಲೇ (ತಪ್ಪು ಖಾತೆಗೆ ಕಳುಹಿಸಿದ್ದು) ವ್ಯಕ್ತಿಯು ಆ ಹಣವನ್ನು ಖರ್ಚು ಮಾಡಿದರೆ. ಆಗಲೂ ನಿಮ್ಮ ಹಣವನ್ನು ಬ್ಯಾಂಕ್ ನಿಮಗೆ ಹಿಂತಿರುಗಿಸುತ್ತದೆ. ವ್ಯಕ್ತಿಯ ಖಾತೆಯಲ್ಲಿ ಅಷ್ಟು ಹಣ ಇಲ್ಲದಿದ್ದರೆ ಅವರ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯ (Bank balance nill) ಮಾಡಲಾಗುತ್ತೆ.

how to get refundUPIUPI Paymentswrong money transaction