Silk cloth care: ನಿಮ್ಮ ಬಳಿ ಇರುವ ರೇಷ್ಮೆ ಸೀರೆ ಹಳೆಯದಾಗಿದೆ ಅಂತ ಬೇಸರಾನಾ? ಚಿಂತೆ ಬೇಡ ಹಳೆಯ ರೇಷ್ಮೆ ಸೀರೆ ಹೊಸದಾಗಿ ಕಾಣುವಂತೆ ಮಾಡುತ್ತೆ ಈ ಸಿಂಪಲ್ ಟಿಪ್ಸ್; ಏನು ಗೊತ್ತಾ?

Silk cloth care: ಸಾಮಾನ್ಯವಾಗಿ ಹೆಣ್ಣು ಮಕ್ಕಳ ವಾರ್ಡ್ ರೋಬ್ (Wardrobe)  ತುಂಬಾ ಬಟ್ಟೆ (Cloth) ಗಳಿಂದ ತುಂಬಿರುತ್ತೆ ಎಲ್ಲ ರೀತಿಯ ಬಟ್ಟೆಗಳನ್ನು ಸಂಗ್ರಹಿಸುವ ಆಸಕ್ತಿ ಹೆಣ್ಣು ಮಕ್ಕಳಿಗೆ ಜಾಸ್ತಿ. ಅದರಲ್ಲೂ ಸೀರೆಪ್ರಿಯರಿಗೆ ರೇಷ್ಮೆ ಸೀರೆಗಳು ಅಂದ್ರೆ ಬಹಳ ಇಷ್ಟ. ಬನಾರಸಿ ಸೀರೆಗಳು, ಮೈಸೂರ್ ಸಿಲ್ಕ್ ಸೀರೆಗಳು, ಇಳಕಲ್ ಸೀರೆಗಳು ಹೀಗೆ ಬೇರೆ ಬೇರೆ ರೀತಿಯ ಸೀರೆಗಳ ಕಲೆಕ್ಷನ್ ಮಾಡಿ ಇಟ್ಟುಕೊಳ್ಳುತ್ತಾರೆ. ಆದರೆ ಇತರ ಸೀರೆಗೆ ಹೋಲಿಸಿದರೆ ರೇಷ್ಮೆ ಸೀರೆ ಸ್ವಲ್ಪ ಕಾಸ್ಟ್ಲಿ (Costly). ಹಾಗಾಗಿ ರೇಷ್ಮೆ ಬಟ್ಟೆಯನ್ನು ನಿರ್ವಹಣೆ ಮಾಡುವುದು ಬಹಳ ಇಂಪಾರ್ಟೆಂಟ್.

Silk cloth care: ನಿಮ್ಮ ಬಳಿ ಇರುವ ರೇಷ್ಮೆ ಸೀರೆ ಹಳೆಯದಾಗಿದೆ ಅಂತ ಬೇಸರಾನಾ? ಚಿಂತೆ ಬೇಡ ಹಳೆಯ ರೇಷ್ಮೆ ಸೀರೆ ಹೊಸದಾಗಿ ಕಾಣುವಂತೆ ಮಾಡುತ್ತೆ ಈ ಸಿಂಪಲ್ ಟಿಪ್ಸ್; ಏನು ಗೊತ್ತಾ? https://sihikahinews.com/amp/how-to-take-care-of-your-silk-sarees-at-home/

ಸಿಲ್ಕ್ ಸೀರೆಗಳು ಅಥವಾ ಸಿಲ್ಕ್ ಡ್ರೆಸ್ (Silk Dress) ಗಳು ಸಿಕ್ಕಾಪಟ್ಟೆ ರಿಚ್ ಲುಕ್ ಕೊಡುತ್ತವೆ ಹಾಗಾಗಿ ಅದನ್ನು ಯಾವುದೇ ಸಮಾರಂಭಗಳಿಗೆ ತೊಡಬಹುದು. ನೀವು ಸರಿಯಾದ ರೀತಿಯಲ್ಲಿ ಈ ಬಟ್ಟೆಗಳನ್ನ ನಿರ್ವಹಣೆ ಮಾಡಿದರೆ ಅದು ದೀರ್ಘಾವಧಿ (Long Tearm)ಯವರೆಗೂ ಹಾಳಾಗದೆ ಹಾಗೆ ಇರುತ್ತದೆ ಸರಿಯಾದ ರೀತಿಯಲ್ಲಿ ಮಡಿಚಿ ಬಟ್ಟೆ ಇಡುವುದು ಕೂಡ ಬಹಳ ಮುಖ್ಯ. ನಿಮ್ಮ ರೇಷ್ಮೆ ಸೀರೆ ಅಥವಾ ರೇಷ್ಮೆ ಬಟ್ಟೆ ಪ್ರತಿ ಬಾರಿ ತೆರೆದಾಗಲೂ ಹೊಸದಾಗಿಯೇ ಕಾಣುವಂತೆ ಮಾಡಲು ಈ ರೀತಿ ಮಾಡಿ.

ಎಷ್ಟು ಬಾರಿ ರೇಷ್ಮೆ ಸೀರೆಯನ್ನು ಹುಟ್ಕೊಂಡು ಸಮಾರಂಭದಿಂದ ಬಂದ ನಂತರ ಅದನ್ನು ಸ್ವಚ್ಛಗೊಳಿಸಿ ವಾರ್ಡ್ರೋಬ್ ನಲ್ಲಿ ಮಡಚಿ ಇಡುತ್ತಾರೆ. ಅದೆಷ್ಟೇ ಸಮಯ ಕಳೆದರೂ ಅದನ್ನು ಓಪನ್ ಮಾಡುವುದೇ ಇಲ್ಲ. ಹೀಗೆ ಮಾಡಿದ್ರೆ ರೇಷ್ಮೆಯ ಬಣ್ಣ ಫೇಡ್ (Colour Fade) ಆಗುವುದಕ್ಕೆ ಶುರುವಾಗುತ್ತದೆ. ಅದಕ್ಕಾಗಿ ರೇಷ್ಮೆ ಬಟ್ಟೆಗಳ ಮಡಿಕೆಗಳನ್ನ ಆಗಾಗ ಮಗ್ಗಲು ಬದಲಾಯಿಸಿ ಇದರಿಂದ ಒಂದಕ್ಕೊಂದು ಬಟ್ಟೆಗಳು ಅಂಟಿಕೊಳ್ಳುವುದಿಲ್ಲ. ಜೊತೆಗೆ ಯಾವುದೇ ಕೀಟಗಳು ಬರುವುದಿಲ್ಲ.

ಇನ್ನು ರೇಷ್ಮೆ ಸೀರೆಗಳನ್ನು ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ವಾರ್ಡ್ರೋಬ್ ನಿಂದ ಹೊರ ತೆಗೆದು ಬಿಸಿಲಿಗೆ ಒಣಗಿಸಿ ಇಡಿ ಇದರಿಂದ ಯಾವುದೇ ಕೀಟಗಳು ಶಿಲೀಂಧ್ರ ಅಥವಾ ಕೆಟ್ಟ ವಾಸನೆ ಬರುವುದಿಲ್ಲ ಇನ್ನು ರೇಷ್ಮೆ ಸೀರೆಗಳನ್ನ ಅಥವಾ ಬಟ್ಟೆಗಳನ್ನ ಮರದ ಅಥವಾ ಕಬ್ಬಿಣದ ಹ್ಯಾಂಗರ್ ಮೇಲೆ ನೇತು ಹಾಕುವುದು ಸೂಕ್ತವಲ್ಲ.

ರೇಷ್ಮೆ ಸೀರೆಗಳನ್ನು ಡ್ರೈ ವಾಶ್ ಕೊಡುವುದು ಒಳ್ಳೆಯದು. ಆದಾಗ್ಯೂ ನೀವು ಮನೆಯಲ್ಲಿಯೇ ಸೀರೆ ತೊಳೆಯುವುದಾದರೆ ಯಾವುದೇ ಕಾರಣಕ್ಕೂ ಡಿಟರ್ಜೆಂಟ್ ಅನ್ನು ಬಳಸಬೇಡಿ, ಅದೇರೀತಿ ಶಾಂಪೂವಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬಾರದು. ಹೀಗೆ ಮಾಡಿದರೆ ಸೀರಿಯ ಬಣ್ಣ ಬದಲಾಗುತ್ತದೆ. ಟಾಲ್ಕಮ್ ಪೌಡರ್ ಅನ್ನು ಸ್ವಲ್ಪ ಉಜ್ಜಿ ನಂತರ ಟಿಶ್ಯೂ ಪೇಪರ್ ನಿಂದ ಅಥವಾ ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಇಡಬೇಕು. ಇನ್ನು ರೇಷ್ಮೆ ಸೀರೆಗಳ ನಡುವಲ್ಲಿ ಇತರ ಬಣ್ಣದ ಬಟ್ಟೆಯನ್ನು ಇಡಬೇಡಿ ಇದರಿಂದ ರೇಷ್ಮೆ ಬಟ್ಟೆ ಹಾಳಾಗಬಹುದು.

ಇನ್ನು ಸೀರೆ ಧರಿಸಿದ ಬಳಿಕ ಅದರ ಕುಪ್ಪಸ ಅಥವಾ ಬ್ಲೌಸ್ ಬೆವರಿನ ಕಲೆ ಆಗಿರಬಹುದು ಅದನ್ನು ಸ್ವಚ್ಛಗೊಳಿಸಿ ಗಾಳಿಯಲ್ಲಿ ಒಣಗಿಸಿ ನಂತರವಷ್ಟೇ ಮಡಚಿಡಿ. ಈ ರೀತಿ ಮಾಡಿದ್ರೆ ನೀವು ಧೀರ್ಘಕಾಲದವರೆಗೆ ನಿಮ್ಮ ಇಷ್ಟುದ್ದ ರೇಷ್ಮೆ ಬಟ್ಟೆಗಳನ್ನ ದೀರ್ಘಕಾಲದ ವರೆಗೆ ಬಣ್ಣ ಮಾಸದಂತೆ ಹೊಸದಾಗಿಯೇ ಇಟ್ಟುಕೊಳ್ಳಬಹುದು.

carehome tipsLifestylesilk saree