Husband and wife:ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ದಾಂಪತ್ಯ ಜೀವನದ ಅರ್ಥವೇ ಬದಲಾಗಿ ಹೋಗಿದೆ. ಹಲವು ಗಂಡಸರು ಹಾಗೂ ಹೆಂಗಸರು ಮದುವೆ ನಂತರ ಸಂಬಂಧಗಳನ್ನು ಇಟ್ಟುಕೊಳ್ಳುವ ಕಾರಣ, ಅವರ ಸಂಸಾರದಲ್ಲಿ ಬಿರುಕು ಜಗಳಗಳು ಶುರುವಾಗಿ, ಗಂಡ ಹೆಂಡತಿಯನ್ನು ಹೆಂಡತಿ ಗಂಡನ ಉಸಿರು ನಿಲ್ಲಿಸುವಂಥ ಸಾಕಷ್ಟು ಘಟನೆಗಳು ಕೂಡ ನಡೆಯುತ್ತಲೇ ಇರುತ್ತದೆ.
ದಿನ ಬೆಳಗಾದರೆ ಇಂಥಹ ಘಟನೆಗಳು ಮಾಧ್ಯಮಗಳಲ್ಲಿ ರಿಪೋರ್ಟ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ. ಹೆಂಡತಿಯೊಬ್ಬಳು ತಾನು ಬೇರೊಬ್ಬರ ಜೊತೆಗೆ ಇಟ್ಟುಕೊಂಡಿರುವ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು, ಮಾಡಿರುವ ಕೆಲಸ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಆಕೆ ಅದಾಗಲೇ ಮೂರು ಸಾರಿ ತನ್ನ ಲವ್ವರ್ ಜೊತೆಗೆ ಓಡಿ ಹೋಗಿದ್ದಳು. ಈಕೆ ಮಾಡಿರುವುದೇನು ಎಂದು ತಿಳಿಸುತ್ತೇವೆ ನೋಡಿ..
ಈ ಘಟನೆ ನಡೆದಿರುವುದು ತಮಿಳು ನಾಡು ರಾಜ್ಯದ ಕಡಲೂರು ಜಿಲ್ಲೆಯ ರಾಮನಾಥಮ್ ನಲ್ಲಿರುವ ತಾಚೂರು ಗ್ರಾಮದಲ್ಲಿ ನೆಲೆಸಿರುವ ಬಾಲಕೃಷ್ಣನ್ ಮತ್ತು ರಾಧಿಕಾ ಎನ್ನುವ ದಂಪತಿಗೆ ಇಬ್ಬರು ಗಂಡು ಮಕ್ಕಳು. ಬಾಲಕೃಷ್ಣನ್ ಅವರು ಹಲವು ಕೆಲಸಗಳನ್ನು ಮಾಡುತ್ತಾ, ಕುಟುಂಬವನ್ನು ಪೋಷಿಸುತ್ತಿದ್ದಾರೆ.
ಸಂಸಾರ ಒಂದು ಹಂತದ ವರೆಗು ಚೆನ್ನಾಗಿಯೇ ಇತ್ತು, ಆದರೆ ರಾಧಿಕಾಗೆ ದಿನೇಶ್ ಎನ್ನುವ 23 ವರ್ಷದ ಹುಡುಗನ ಪರಿಚಯವಾಯಿತು. ನಂತರ ಇದು ಸಂಬಂಧಕ್ಕೆ ತಿರುಗಿತು. ಇವರಿಬ್ಬರ ಈ ಸಂಬಂಧ ಸುಮಾರು 2 ವರ್ಷದವರೆಗೂ ಚೆನ್ನಾಗಿಯೇ ಸಾಗಿತ್ತು, ಈ ಎರಡು ವರ್ಷಗಳಲ್ಲಿ ಈ ಜೋಡಿ ಮೂರು ಸಾರಿ ಓಡಿ ಹೋಗಿದ್ದರು. ಹೀಗಾದಾಗ ಬಾಲಕೃಷ್ಣನ್ ಪೊಲೀಸರಿಗೆ ದೂರು ನೀಡಿದ ಕಾರಣ, ಪೊಲೀಸರು ಆಕೆಯನ್ನು ಗಂಡನ ಹತ್ತಿರ ಕರೆದುಕೊಂಡು ಬಂದಿದ್ದರು.
ಇದೆಲ್ಲವೂ ನಡೆದ ನಂತರ ಬುಧವಾರ ಯಾರು ಊಹಿಸದ ಘಟನೆಯೊಂದು ನಡೆದೇ ಹೋಗಿದೆ. ಬುಧವಾರ ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಬಾಲಕೃಷ್ಣನ್ ಅವರು ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿಡ್ಫಾರೆ. ಅವರ ತಂದೆ ದೂರು ನೀಡಿದ್ದು, ಅದರ ಅನುಸಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಶುರು ಮಾಡಿದ್ದಾರೆ.
ರಾಧಿಕಾಗೆ ಪೊಲೀಸರು ತಮ್ಮ ಸ್ಟೈಲ್ ನಲ್ಲಿ ಪ್ರಶ್ನೆ ಕೇಳಿದ್ದು, ಆಗ ರಾಧಿಕಾ ತನ್ನಿಂದಲೇ ಆದದ್ದು ಎಂದು ಒಪ್ಪಿಕೊಂಡಿದ್ದಾಳೆ. ತನ್ನ ಲವ್ವರ್ ಜೊತೆ ಇರುವುದಕ್ಕೆ ಗಂಡ ಅಡ್ಡಿಯಾಗಿದ್ದ ಎಂದು ಈ ರೀತಿ ಮಾಡಿದ್ದಾಳೆ ಎಂದು ಒಪ್ಪಿಕೊಂಡಿದ್ದು, ತಕ್ಷಣವೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಲವ್ವರ್ ಮೇಲಿನ ಆಸೆಯಿಂದ, ಗಂಡನಿಗೆ ಹೀಗೆ ಮಾಡಿ, ಕೊನೆಗೆ ಮಕ್ಕಳಿಗೆ ತಾಯಿ ತಂದೆ ಇಲ್ಲದ ಹಾಗೆ ಆಗಿದೆ.