Relationship: ರಜಾ ಇದೆ ಎಂದು ಭಾನುವಾರದಂದು ಪತಿ-ಪತ್ನಿ ಒಂದಾಗಲು ಪ್ರಯತ್ನಿಸಿದರೆ ಆಗುವ ಅಪಾಯ ತಪ್ಪಿಸುವುದಕ್ಕೆ ದೇವರು ಬರಲ್ಲ ಯಾಕೆ ಗೊತ್ತೇ?

Relationship: ಶಾಸ್ತ್ರಗಳ ಪ್ರಕಾರ ಕೆಲವು ದಿನ ಕೆಲವು ತಿಥಿ, ಕೆಲವು ನಕ್ಷತ್ರಗಳ ಆಧಾರದ ಮೇಲೆ ಆ ದಿನ ಪತಿ-ಪತ್ನಿ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂದು ಹೇಳಲಾಗುತ್ತೆ. ಅದರಲ್ಲೂ ಮಗುವಿಗಾಗಿ ಪ್ರಯತ್ನಿಸುತ್ತಿರುವ ಗಂಡ ಹೆಂಡತಿ ಸರಿಯಾದ ಸಮಯ ದಿನಗಳನ್ನು ನೋಡಿ ಸೇರಬೇಕು. ಇಲ್ಲವಾದರೆ ಅದು ಹುಟ್ಟುವ ಮಗುವಿನ ಮೇಲೆ ಪರಿಣಾಮ ಇರುತ್ತದೆ. ಹಾಗಾಗಿ ವರ್ಷದ ಈ ಕೆಲವು ದಿನ ಲೈಂಗಿಕ ಕ್ರಿಯೆಯನ್ನು ಪತಿ-ಪತ್ನಿ ತಪ್ಪಿಸಿದರೆ ಒಳ್ಳೆಯದು. ಇಲ್ಲವಾದರೆ ಗಂಡ ಹೆಂಡತಿಯ ಸಂಬಂಧ ಹಾಳಾಗಬಹುದು ಅಥವಾ ಹುಟ್ಟುವ ಮಗು ಅನಾರೋಗ್ಯ ಸಮಸ್ಯೆಯನ್ನು ಅನುಭವಿಸಬಹುದು ಹಾಗಾಗಿ ಯಾವ ದಿನ ಗಂಡ ಹೆಂಡತಿ ಸೇರಬಾರದು ಎಂಬುದನ್ನು ನೋಡೋಣ.

ಮೊದಲನೇದಾಗಿ ಹುಣ್ಣಿಮೆ ಹಾಗೂ ಅಮಾವಾಸ್ಯೆಯಂದು ಪತಿ ಪತ್ನಿಯರು ಸಂಬಂಧವನ್ನು ದೈಹಿಕ ರೀತಿಯಲ್ಲಿ ಬೆಳೆಸದೆ ಇರುವುದು ಒಳ್ಳೆಯದು. ಆ ದಿನ ಪರಸ್ಪರ ದೂರ ಇರಬೇಕು ಎಂದು ಶಾಸ್ತ್ರಗಳಲ್ಲಿಯೂ ಕೂಡ ಹೇಳಲಾಗಿದೆ. ಹೀಗೆ ಮಾಡಿದರೆ ಅದು ಸಂಬಂಧದ ಮೇಲೆ ದುಷ್ಪರಿಣಾಮ ಬೀರಬಹುದು ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಗೆಲುವು ಸಾಧಿಸುತ್ತದೆ ಹಾಗಾಗಿ ಇದು ಸಂಬಂಧದ ಮೇಲೆಯೂ ಕೂಡ ಪರಿಣಾಮ ಬೀರಬಹುದು. ಇದನ್ನೂ ಓದಿ: Darshan Kranti Film: ದರ್ಶನ್ ಗೆ ಮತ್ತೊಂದು ಬಿಗ್ ಶಾಕ್: ದಿನೇ ದಿನೇ ಕುಗ್ಗುತ್ತಿದೆ ದರ್ಬಾರ್: ಕ್ರಾಂತಿ ಸಿನೆಮಾಗೆ ಒಳ್ಳೆ ಮಾತುಗಳು ಕೇಳಿ ಬಂದರು ಏನಾಗಿದೆ ಗೊತ್ತೇ??

ಅದೇ ರೀತಿ ತಿಂಗಳಿನ ಚತುರ್ಥಿ ಮತ್ತು ಅಷ್ಟಮಿ ತಿಥಿ ಎಂದು ಕೂಡ ಪತಿ ಪತ್ನಿ ಶಾರೀರಿಕವಾಗಿ ಒಂದಾಗಬಾರದು ಎಂಬುದು ಪುರಾಣಗಳಲ್ಲಿಯೂ ಉಲ್ಲೇಖವಾಗಿದೆ. ಚತುರ್ಥಿ ಮತ್ತು ಅಷ್ಟಮಿ ತಿಥಿಯ ದಿನದಂದು ಹಾಗೂ ಭಾನುವಾರ ಗಂಡ ಹೆಂಡತಿ ಒಂದಾಗುವುದನ್ನ ತಪ್ಪಿಸಬೇಕು. ಇಲ್ಲವಾದರೆ ಮಕ್ಕಳು ಹಾಗೂ ನಿಮ್ಮ ವೃತ್ತಿ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಇನ್ನು 15 ದಿನಗಳ ಕಾಲ ಶ್ರಾದ್ದ ಪಕ್ಷದಲ್ಲಿ ಅಂದ್ರೆ ಪಿತೃ ಪಕ್ಷದಲ್ಲಿಯೂ ಕೂಡ ಗಂಡ ಹೆಂಡತಿ ದೈಹಿಕ ಸಂಬಂಧವನ್ನು ಬೆಳೆಸುವುದನ್ನ ನಿಷಿದ್ಧ ಎನ್ನಲಾಗಿದೆ. ಏಕೆಂದರೆ ಈ ಸಮಯದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುವುದಕ್ಕಾಗಿ ಪೂಜೆ, ಹವನ, ತರ್ಪಣ ಮೊದಲಾದವುಗಳನ್ನು ಮಾಡಲಾಗುತ್ತೆ. ಹಾಗಾಗಿ ಈ ಸಮಯದಲ್ಲಿ ಗಂಡ ಹೆಂಡತಿ ಮೈ ಮರೆತು ಸುಖ ಅನುಭವಿಸಿದರೆ ಪೂರ್ವಜರು ಕೋಪಗೊಳ್ಳುತ್ತಾರೆ ಎಂದು ಹೇಳಲಾಗುತ್ತೆ. ಇದನ್ನೂ ಓದಿ: Banana recipe Kannada: ಕೇವಲ ಐದು ಪದಾರ್ಥಗಳನ್ನ ಬಳಸಿಕೊಂಡು, ಒಮ್ಮೆ ಮಾಡಿದ್ರೆ ವಾರದ ಪೂರ್ತಿ ಇಟ್ಟು ತಿನ್ನಬಹುದಾದಂತಹ ಬಾಳೆಹಣ್ಣಿನ ತಿನಿಸು ಮಾಡೋದು ಹೇಗೆ ಗೊತ್ತೇ ? ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅಂತಾರೆ ನೋಡಿ!

ಇನ್ನು ಶಕ್ತಿಯ ಅಧಿದೇವತೆ ದುರ್ಗಾದೇವಿಯನ್ನು ಪೂಜಿಸುವಂತಹ ನವರಾತ್ರಿಯ 9 ದಿನಗಳಲ್ಲಿ ಗಂಡು ಹೆಣ್ಣು ಸೇರಬಾರದು. ಈ ದಿನ ಆದಷ್ಟು ವ್ರತ ಉಪವಾಸ ಮಾಡಿ ತಾಯಿ ದುರ್ಗೆಯನ್ನು ಪೂಜಿಸಬೇಕು. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ನವರಾತ್ರಿಯ ದಿನ ಅತ್ಯಂತ ಶಾಸ್ತ್ರೋಕ್ತವಾಗಿ ಭಕ್ತಿಯಿಂದ ದೇವಿಯ ಪೂಜೆ ಮಾಡಿದರೆ ಆಕೆ ಕೇಳಿದ್ದೆಲ್ಲವನ್ನು ಕರುಣಿಸುತ್ತಾಳೆ. ಹಾಗಾಗಿ ಇಹಲೋಕದ ಸುಖವನ್ನ ಈ ಸಮಯದಲ್ಲಿ ತ್ಯಜಿಸಿ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಬೇಕು ಎಂದು ಹೇಳಲಾಗುತ್ತೆ.

ಅದೇ ರೀತಿಯಾಗಿ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತನ್ನ ಪಥ ಬದಲಾಯಿಸುವ ದಿನ ಕೂಡ ಗಂಡ ಹೆಂಡತಿ ಸೇರುವುದನ್ನ ನಿಷೇಧಿಸಲಾಗಿದೆ ಅಂದರೆ ಸಂಕ್ರಾಂತಿಯ ದಿನ ಶಾರೀರಿಕವಾಗಿ ಪತಿ-ಪತ್ನಿ ಸೇರುವುದು ಒಳ್ಳೆಯದಲ್ಲ. ಈ ದಿನ ಸಂಕ್ರಾಂತಿಯ ಸ್ನಾನ ಮಾಡಿ ಧ್ಯಾನ ದೇವರ ಪೂಜೆ ಧ್ಯಾನ ಇಂತವುಗಳನ್ನ ಮಾಡಿದರೆ ಸಂಬಂಧ ಇನ್ನಷ್ಟು ಗಟ್ಟಿಯಾಗಿರುತ್ತದೆ.

ಇನ್ನು ಈ ದಿನಗಳನ್ನು ಬಿಟ್ಟು ಪುರುಷರು ಅಥವಾ ಮಹಿಳೆಯರು ಯಾವಾಗ ಉಪವಾಸ ಅಥವಾ ಇತರ ವಿರುದ್ಧವನ್ನು ಆಚರಿಸುತ್ತಾರೋ ಆ ದಿನ ಗಂಡ ಹೆಂಡತಿ ಸೇರುವುದು ಶಾಸ್ತ್ರಗಳ ಪ್ರಕಾರ ಸರಿಯಲ್ಲ.

husband and wifePhysical relationshipಗಂಡ ಹೆಂಡತಿಮದುವೆಸಂಬಂಧ