Government news: ನಿಮ್ಮ ವಾಹನದ ವಯಸ್ಸೆಷ್ಟು ನೋಡಿಕೊಳ್ಳಿ; 15 ವರ್ಷ ಪೂರೈಸಿದ ವಾಹನಗಳು ಗುಜರಿಗೆ!?

Government news: ಜನ ಚಲಾಯಿಸುವ ವಾಹನಗಳಿಗೆ ಸಂಬಂಧಪಟ್ಟಂತೆ ವಹತ್ವದ ನಿರ್ಧಾರ ಕೈಗೊಂಡಿದೆ ಕೇಂದ್ರ ಸರ್ಕಾರ.  2023ರಲ್ಲಿ ಈ ನಿರ್ಣಯವನ್ನು ಚಲಾವಣೆಗೆ ತರಲಾಗುವುದು ಎಂದು ಸಚಿವ ನಿತೀನ್ ಗಡ್ಕರಿ ತಿಳಿಸಿದ್ದಾರೆ. 2023 ಏಪ್ರಿಲ್ ತಿಂಗಳಿನಲ್ಲಿ ಈ ನಿಯಮ ಜಾರಿಗೆ ಬರಲಿದೆ. ಹಳೆಯ ಗಾಡಿಯನ್ನು ಇನ್ನೂ ಇಟ್ಟುಕೊಂಡಿರುವ ಜನರು ಯೋಚಿಸಬೇಕಾಗಿದೆ.

Government news: ನಿಮ್ಮ ವಾಹನದ ವಯಸ್ಸೆಷ್ಟು ನೋಡಿಕೊಳ್ಳಿ; 15 ವರ್ಷ ಪೂರೈಸಿದ ವಾಹನಗಳು ಗುಜರಿಗೆ!? https://sihikahinews.com/amp/in-2023-15-years-old-vehicles-can-be-used-nitin-gadkari-said/

ಹೌದು, 2023, ಎಪ್ರಿಲ್ ವೇಳೆಗೆ 15 ವರ್ಷ ಪೂರೈಸಿದ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಸಂಬಂಧಿಸಿದ  ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ನಿತೀನ್ ಗಡ್ಕರಿ ತಿಳಿಸಿದ್ದಾರೆ. 15 ವರ್ಷ ಪೂರೈಸಿದ ಹಾಗೂ ಕೇಂದ್ರ ಸರ್ಕಾರ (Central Government) ಕ್ಕೆ ಸೇರಿದ ಎಲ್ಲಾ ವಾಹನ (Vehicles) ಗಳನ್ನು ಗುಜರಿ ಹಾಕುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಮಾರ್ಗದರ್ಶನದಲ್ಲಿ ಕಡತಕ್ಕೆ ಸಹಿ ಹಾಕಲಾಗಿದೆ ಎಂದು ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇನ್ನೂ ರಾಜ್ಯಮಟ್ಟದಲ್ಲಿಯೂ ಕೂಡ ಇದನ್ನ ಅಳವಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರಗಳಿಗೂ ಕೂಡ ನೀತಿಯ ಸುತ್ತೋಲೆಯನ್ನು ಕಳುಹಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:Business Idea: ಎಷ್ಟು ಕಡಿಮೆ ಹೂಡಿಕೆ ಮಾಡಿದ್ರೂ ಸರಿ; ಈ ಉದ್ಯೋಗ ಪ್ರಾರಂಭಿಸಿದರೆ ತಿಂಗಳಿಗೆ ಕನಿಷ್ಟ 4೦,೦೦೦ ರೂ. ಅಂತೂ ಎಣಿಸ್ತೀರಿ ಯಾವುದು ಗೊತ್ತೇ ಆ ಉದ್ಯೋಗ?

ದೇಶದಲ್ಲಿ ಸುಮಾರು 80 ಲಕ್ಷ ಟನ್ ಬಯೋ ಬಿಟುಮೆನ್ ಬೇಕು. ಪ್ರಸ್ತುತ ಕೇವಲ 50 ಲಕ್ಷ ಟನ್ ಬಿಟುಮೆನ್  ಉತ್ಪಾದಿಸಲಾಗುತ್ತಿದೆ. ಉಳಿದ 25 ಲಕ್ಷ ಆಮದು ಮಾಡಿಕೊಳ್ಳಲಾಗುತ್ತಿದೆ ಆದ್ದರಿಂದ ಸರ್ಕಾರ ಮಾಲಿನ್ಯ ನಿಯಂತ್ರಣ ಮಾಡುವುದಕ್ಕೆ ಈ ರೀತಿಯ ಹೊಸ ಯೋಜನೆ ರೂಪಿಸಿದೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ (nitin Gadkari)  ಅವರು ತಿಳಿಸಿದ್ದಾರೆ. ಇದನ್ನೂ ಓದಿ:Bangalore share market : ಮುಂದಿನ ವರ್ಷ ಬೆಂಗಳೂರು ಎರ್ಪೋರ್ಟ್ ಐಪಿಒ; 3೦,೦೦೦ ಕೋಟಿಗೆ ಶೇರು ಮಾರಾಟಕ್ಕೆ ಚಿಂತನೆ?!

ನೂತನ ಇಂಡಿಯನ್ ಆಯಿಲ್ (Indian Oil) ಘಟಕ ಸ್ಥಾಪನೆ: ಪಾಣಿಪತ್ ನಲ್ಲಿ ಶೀಘ್ರದಲ್ಲಿಯೇ ಮತ್ತೆರಡು ಇಂಡಿಯನ್ ಆಯಿಲ್ ಘಟಕಗಳನ್ನು ಆರಂಭಿಸಲಾಗುತ್ತದೆ. ಒಂದು ಘಟಕದಲ್ಲಿ ಒಂದು ಲಕ್ಷ ಟನ್ ಎಥೆನಾಲ್ ಅನ್ನು ಉತ್ಪಾದಿಸಲಾಗುವುದು. ಇನ್ನು ಎರಡನೇ ಘಟಕದಲ್ಲಿ ದಿನಕ್ಕೆ 150 ಟನ್ ಗಳಷ್ಟು ಜೈವಿಕ ಬಿಟುಮೆನ್ ಅನ್ನು ಬತ್ತದ ಹುಲ್ಲು ಬಳಸಿ  ಉತ್ಪಾದಿಸಲಾಗುತ್ತದೆ. ಸಾಮಾನ್ಯವಾಗಿ ಬತ್ತದ ಹುಲ್ಲು ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ. ಈಗ ಅದರ ಬದಲು ಉತ್ಪಾದನೆಗೆ ಇದನ್ನ ಬಳಸಲಾಗುವುದು ಇದರಿಂದ ಮಾಲಿನ್ಯದಲ್ಲಿ ನಿಯಂತ್ರಣ ತರಬಹುದು ಎಂದು ತಿಳಿಸಿದ್ದಾರೆ. ಇದರಿಂದಾಗಿ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಹಾಗೂ ಅಕ್ಕಿ ಉತ್ಪಾದನೆ ಮಾಡುವ ಭಾಗಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬುದಾಗಿಯೂ ನಿತಿನ್ ಗಡ್ಕರಿ ಹೇಳಿದ್ದಾರೆ.

GovernmentGovt. VehiclesNItin Gadkari