Independence Day: ಪಕ್ಷಿಯಿಂದಾಗಿ ಧ್ವಜಾರೋಹಣ ಆಗಿರುವಂತಹ ವಿಡಿಯೋದ ನಿಜವಾದ ರಹಸ್ಯ ಏನು ಗೊತ್ತಾ? ವೈರಲ್ ಸ್ಟೋರಿ ಗಿಂತ ವಿಭಿನ್ನವಾಗಿದೆ ನಿಜ ಕತೆ!

Independence Day: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವೈರಲ್ ಆಗಿರುವಂತಹ ಒಂದು ವಿಡಿಯೋದ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು. ಹೌದು ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಒಂದು ಹಳ್ಳಿಯಲ್ಲಿ ಧ್ವಜಾರೋಹಣ ಮಾಡುವಾಗ ಅದು ಸಿಕ್ಕಿಬಿದ್ದ ನಂತರ ಹಕ್ಕಿ ಬಂದು ಅದನ್ನು ಬಿಚ್ಚುವ ಹಾಗೆ ಮಾಡಿದ್ದು ಎಂಬುದಾಗಿ ಆ ವಿಡಿಯೋದಲ್ಲಿ ತೋರಿಸಲಾಗಿದ್ದು ಎಲ್ಲರೂ ಕೂಡ ಇದನ್ನೇ ಅರ್ಥ ಮಾಡಿಕೊಂಡಿದ್ದಾರೆ. ಆದರೆ ನಿಜಕ್ಕೂ ಕೂಡ ಆ ವಿಡಿಯೋದ ರಹಸ್ಯ ಅಥವಾ ನಿಜ ಘಟನೆ ಏನಾಗಿತ್ತು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ ಬನ್ನಿ.

ಆಗಸ್ಟ್ 17ಕ್ಕೆ ಪೋಸ್ಟ್ ಮಾಡಲಾಗಿರುವಂತಹ ಈ ವಿಡಿಯೋ ತುಣುಕು ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು ಲಕ್ಷಾಂತರ ಲೈಕ್ಸ್ ಗಳನ್ನು ಕೂಡ ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಕೇರಳದ ಹಳ್ಳಿಯ ಶಾಲೆ ಒಂದರಲ್ಲಿ ಮಾಡುತ್ತಿರುವಂತಹ ಧ್ವಜಾರೋಹಣದ ಸಂದರ್ಭದಲ್ಲಿ ಧ್ವಜ ಬಿಚ್ಚಿಕೊಳ್ಳುವುದಕ್ಕೆ ಹಕ್ಕಿ ಸಹಾಯ ಮಾಡಿತು ಎನ್ನುವುದಾಗಿ ತಿಳಿದು ಬಂದಿದೆ. ಧ್ವಜ ಮೇಲಕ್ಕೆ ಹೋಗಿ ಬಿಚ್ಚಿಕೊಳ್ಳುವ ಸಂದರ್ಭದಲ್ಲಿ ಅದರಲ್ಲಿ ಕೆಲವೊಂದು ಸಮಸ್ಯೆಗಳು ಕಂಡುಬಂದು ಅದು ಬಿಚ್ಚಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗೂ ಎಲ್ಲಿಂದಲೋ ಬಂದ ಹಕ್ಕಿ ಅದರ ಮೇಲೆ ಕುಳಿತುಕೊಂಡು ಧ್ವಜ ಬಿಚ್ಚುವ ಕೆಲಸವನ್ನು ಮಾಡುವ ರೀತಿಯಲ್ಲಿ ಆ ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಅವಲೋಕಿಸಿ ನೋಡಿದಾಗ ಅದರ ಸತ್ಯ ಬೇರೇನೇ ಇದೆ ಅನ್ನೋದನ್ನ ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಹೌದು ಬಿಚ್ಚಿಕೊಳ್ಳುತ್ತಿರುವಂತಹ ಧ್ವಜಕ್ಕೂ ಹಾಗೂ ಎಲ್ಲಿಂದಲೋ ಹಾರಿ ಬರುತ್ತಿರುವಂತಹ ಪಕ್ಷಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವುದರ ನೀವು ಸರಿಯಾದ ರೀತಿಯಲ್ಲಿ ಗಮನಿಸಿ ನೋಡಿದರೆ ಅರ್ಥವಾಗುತ್ತದೆ. ಅಲ್ಲಿ ಪಕ್ಷಿ ಹಾರಿ ಬಂದಿರುವುದು ನಿಜ ಆದರೆ ಬಿಚ್ಚಿಕೊಳ್ಳುತ್ತಿರುವಂತಹ ಬಾವುಟಕ್ಕೆ ಹಾಗೂ ಪಕ್ಷಿಗೆ ಯಾವುದೇ ರೀತಿಯ ಸಂಬಂಧ ಇಲ್ಲ ಅನ್ನೋದು ಸತ್ಯ. ನಿಜ ಹೇಳಬೇಕೆಂದರೆ ಆ ಬಾವುಟದ ಧ್ವಜಸ್ಥಂಭದ ಹಿಂದೆ ಇರುವಂತಹ ತೆಂಗಿನ ಮರದಲ್ಲಿ ಆ ಪಕ್ಷಿ ಕುಳಿತುಕೊಂಡಿತ್ತು ಹಾಗೂ ಕ್ಯಾಮರದ ಆಂಗಲ್ ನಲ್ಲಿ ನೀವು ಪಕ್ಷಿಯನ್ನು ಹಾಗೂ ಧ್ವಜಸ್ತಂಬವನ್ನ ನೇರವಾಗಿ ನೋಡುವುದರಿಂದಾಗಿ ಈ ರೀತಿಯಾಗಿ ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ ಎಂಬುದನ್ನ ನೆಟ್ಟಿಗರು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿ ಈ ರಹಸ್ಯದ ಬಗ್ಗೆ ತಿಳಿಸಿದ್ದಾರೆ.

ಇದಕ್ಕೆ ವಿವರಣೆ ನೀಡುವಂತೆ ಮತ್ತೊಂದು ವಿಡಿಯೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು ಅದರಲ್ಲಿ ನಿಜಕ್ಕೂ ಏನು ನಡೆದಿದೆ ಎಂಬುದಾಗಿ ಕೂಡ ಸರಿಯಾದ ವಿವರಣೆ ದೊರಕಿದೆ ಅನ್ನೋದನ್ನ ನಾವು ಇಲ್ಲಿ ನೋಡಬಹುದಾಗಿದೆ.

independence day