Lifestyle: ಚಳಿಗಾಲದಲ್ಲಿ ಮೊಸರು ತಿಂದ್ರೆ ನೆಗಡಿ ಆಗತ್ತಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ!

Lifestyle:ಇದೀಗ ಮಳೆಗಾಲ ಕಳೆದು ಚಳಿಗಾಲದ ಆಗಮನವಾಗಿದೆ. ಹಾಗಾಗಿ ವಾತಾವರಣದಲ್ಲಿಯೂ ಹಲವು ಬದಲಾವಣೆಗಳನ್ನು ನಾವು ಕಾಣಬಹುದು. ಮಾರುಕಟ್ಟೆಗೂ ವಿವಿಧ ರೀತಿಯ ಹಣ್ಣುಗಳು (Fruits) ಲಗ್ಗೆ ಇಟ್ಟಿವೆ. ಆಹಾರ ಪ್ರಿಯರಿಗೆ ಇದು ಹೇಳಿ ಮಾಡಿಸಿದಂತಹ ಸಮಯ ಎಂದರೆ ತಪ್ಪಾಗಲಾರದು. ಅನೇಕರು ಡೈರಿ ಪದಾರ್ಥ, ಜಂಕ್ ಫುಡ್ ಹಾಗೂ ಬಿಸಿ ಬಿಸಿ ಇರುವ ಪದಾರ್ಥಗಳನ್ನು ಸೇವಿಸಲು ಬಯಸುತ್ತಾರೆ. ಇದರಲ್ಲಿ ಕೆಲವೊಂದು ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯೂ ಆಗುತ್ತದೆ.

ಕೆಲವರು ತಂಡಿ ಪ್ರಕೃತಿಯವರು ಇರುತ್ತಾರೆ. ಇವರಿಗೆ ವಾತಾವರಣದಲ್ಲಿ ಸಣ್ಣಪುಟ್ಟ ಬದಲಾವಣೆಗಳಾದರೂ ಆರೋಗ್ಯ ಕೆಡುತ್ತದೆ. ಚಳಿಗಾಲದಲ್ಲಿ ಬೇವರುವಿಕೆ ಕಡಿಮೆ ಆಗಿರುವುದರಿಂದ ಕೆಲವೊಂದು ಆಹಾರ ಸೇವನೆ ಮಾಡಬೇಕೋ ಬೇಡವೋ ಎನ್ನುವ ಗೊಂದಲ ಇದ್ದೇ ಇರುತ್ತದೆ. ಇಂತಹ ಪದಾರ್ಥಗಳಲ್ಲಿ ಮೊಸರು ಕೂಡ ಒಂದಾಗಿದೆ.

ಚಳಿಗಾಲ (Winter)ದಲ್ಲಿ ಮೊಸರಿನ(Curd) ಬಳಕೆ:

ಚಳಿಗಾಲದಲ್ಲಿ ಅನೇಕ ಬಗೆಯ ತರಕಾರಿಗಳು, ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಅವುಗಳಲ್ಲಿ ಮೂಲಂಗಿ, ಆಲೂಗಡ್ಡೆ, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು ಸಿಗುತ್ತವೆ. ಇದನ್ನೂ ಓದಿ:ವೆಜ್ ಪರೋಟ; ಈ ರೀತಿ ನೀವು ಒಮ್ಮೆ ಪರೋಟ ಮಾಡಿ ತಿಂದರೆ ಇಂತಹ ರುಚಿ ಲೈಫಲ್ಲಿ ತಿಂದೇ ಇರಲಿಲ್ಲ ಎಂದು ಹೇಳುತ್ತೀರಿ, ಟ್ರೈ ಮಾಡಿ ನೋಡಿ!

ಇವುಗಳನ್ನು ಜನರು ರೊಟ್ಟಿಯ ಜೊತೆ ಸಲಾಡ್ ಮಾಡಿಕೊಂಡು ತಿನ್ನಲು ಇಷ್ಟಪಡುತ್ತಾರೆ. ಆದರೆ ರೈತಾ ಅಥವಾ ಪಲಾವ್ ಮಾಡಿದ ವೇಳೆ ಅದಕ್ಕೆ ಮೊಸರು ಇಲ್ಲದಿದ್ದರೆ ಆ ಪಲಾವ್ ತಿಂದ ಖುಷಿ ಅನೇಕರಿಗೆ ಸಿಗುವುದಿಲ್ಲ. ಹಾಗಾಗಿ ಮೊಸರು ಇದ್ದರೆ ಮಾತ್ರ ಪಲಾವ್ ತಿನ್ನುವ ಜನರು ಇದ್ದಾರೆ.

ಮೊಸರಿನಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಇದು ಉತ್ತಮ ಬ್ಯಾಕ್ಟಿರಿಯಾ ಹಾಗೂ ಪ್ರೋಟಿನ್ ಮೂಲವೂ ಆಗಿದೆ. ವಿಟಮಿನ್, ಮ್ಯಾಗ್ನೇಶಿಯಂ, ಪೋಟ್ಯಾಶಿಯಂ ಸಹ ಮೊಸರು ಒಳಗೊಂಡಿದೆ. ಇದು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿರುವ ವಿಟಾಮಿನ್ ಬಿ6 ಹಾಗೂ ಬಿ೧೨ರಂತಹ ಪೋಷಕಾಂಶಗಳನ್ನು ಒಳಗೊಂಡಿದೆ.

ಆಯುರ್ವೇದ ತಜ್ಞರ ಪ್ರಕಾರ ಮೊಸರು ರುಚಿಯಲ್ಲಿ ಹುಳಿ, ಸ್ವಭಾವದಲ್ಲಿ ಬಿಸಿ ಆಗಿರುತ್ತದೆ. ಇದು ಜೀರ್ಣವಾಗಲು ಬಹಳ ಸಮಯ ಹಿಡಿಯುತ್ತದೆ. ಮೊಸರು ಸೇವನೆಯಿಂದ ದೈಹಿಕ ಶಕ್ತಿಯೂ ಹೆಚ್ಚಾಗುತ್ತದೆ. ತೂಕವೂ ಹೆಚ್ಚಾಗುತ್ತದೆ. ಜೀರ್ಣಶಕ್ತಿ ಸಹ ಸುಧಾರಿಸುತ್ತದೆ. ಇದನ್ನೂ ಓದಿ:Lifestyle: ಒತ್ತಡದ ಬದುಕು ನಡೆಸುತ್ತಿದ್ದೀರಾ? ಆಹಾರ ಸವಿಯೋದಕ್ಕೂ ಟೈಮ್ ಇಲ್ವಾ? ಹಾಗಾದ್ರೆ ಈ ರೀತಿ ಸಲಾಡ್ ಟ್ರೈ ಮಾಡಿ; ಆರೋಗ್ಯವಾಗಿಯಾದ್ರೂ ಇರಬಹುದು!

ಶೀತಕಾಲದಲ್ಲಿ ಮೊಸರು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು. ಯಾಕೆಂದರೆ ಗ್ರಂಥಿಗಳಿಂದ ಸೃವಿಸುವಿಕೆ ಕಡಿಮೆಯಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟದ ತೊಂದರೆ, ಅಸ್ತಮಾ, ಶೀತ(Cold), ಕೆಮ್ಮು ಇರುವವರಿಗೆ ಲೋಳೆಯ ಅಂಶ ಶೇಖರಣೆ ಆಗುವುದರಿಂದ ಬಹಳ ಸಮಸ್ಯೆ ಆಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಆದಷ್ಟು ರಾತ್ರಿಯ ಹೊತ್ತು ಮೊಸರು ಸೇವನೆಯನ್ನು ಬಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಹೇಳಬಹುದು.

Curd usagesFoodHealthy foodLifestyleWinter sessionಆರೋಗ್ಯಕರ ಆಹಾರಚಳಿಗಾಲಮೊಸರು