Jayapradha Marriage: ನಟಿ ಜಯಪ್ರದ ಮೂರು ಮಕ್ಕಳ ತಂದೆಯನ್ನು ಮದುವೆಯಾದವನನ್ನು ಮದುವೆಯಾಗಿ, ಈಗ ಒಂಟಿ ಜೀವನ ಸಾಗಿಸುತ್ತಿರುವುದು ಯಾಕೆ ಗೊತ್ತೇ?

Jayaprada Marriage: ಭಾರತೀಯ ಚಿತ್ರರಂಗದಲ್ಲಿ ಹಲವು ಬಹುಭಾಷಾ ನಟಿಯರಿದ್ದಾರೆ. ಇವರ ಪೈಕಿ ನಟಿ ಜಯಪ್ರದಾ ಕೂಡ ಒಬ್ಬರು. ಇವರು ಹಿಂದಿ, ತಮಿಳು, ತೆಲುಗು, ಕನ್ನಡ ಸಿನೆಮಾರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಕನ್ನಡಿಗರಂತೂ ಜಯಪ್ರದಾ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಕಾರಣ ಅವರು ನಮ್ಮ ನಟಸಾರ್ವಭೌಮ, ರಸಿಕರ ರಾಜ, ಗಾನಗಂಧರ್ವ, ದಾದಾಸಾಹೇಬ್ ಪಾಲ್ಕೆ ಪುರಸ್ಕೃತ ಡಾ. ರಾಜ್ ಕುಮಾರ್, ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್ ಹೀಗೆ ದಿಗ್ಗಜ ಕಲಾವಿದರ ಜೊತೆ ನಟಿಸಿದ್ದಾರೆ. ಜಯಪ್ರದಾ ಅವರು ಉತ್ತರ ಪ್ರದೇಶ ರಾಜ್ಯದ ರಾಂಪುರ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.

ಜಯಪ್ರದಾ ಅವರಿಗೆ ಬಾಲ್ಯದಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಅಚ್ಚುಮೆಚ್ಚು. ಶಾಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಪ್ಪದೆ ಪಾಲ್ಗೊಳ್ಳುತ್ತಿದ್ದರು. ಈ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕರೊಬ್ಬರು ಚಿತ್ರದಲ್ಲಿ ಬಣ್ಣ ಹಚ್ಚಿ ಡಾನ್ಸ್ ಮಾಡಲು ಅವಕಾಶ ಕಲ್ಪಿಸಿದರು. ಮೂರು ನಿಮಿಷಗಳ ಹಾಡಿಗೆ ಡಾನ್ಸ್ ಮಾಡಿದ್ದಕ್ಕಾಗಿ ೧೦ ರೂ. ಸಂಭಾವನೆ ಸಹ ಪಡೆದಿದ್ದರಂತೆ. ಅಲ್ಲಿಂದ ಆರಂಭವಾದ ಜಯಪ್ರದಾ ಅವರ ಸಿನಿಪಯಣ ಇಂದು ಭಾರತೀಯ ಚಿತ್ರರಂಗದ ಆಸ್ತಿಯಾಗುವ ಮಟ್ಟಿಗೆ ಬಂದು ಮುಟ್ಟಿದೆ.

ಡಾ. ರಾಜ್ ಕುಮಾರ್ ಅವರು ಅಭಿನಯಿಸಿರುವ ಸನಾದಿ ಅಪ್ಪಣ್ಣ ಸಿನೆಮಾದಲ್ಲಿ ಬಸಂತಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹುಲಿ ಹಾಲಿನ ಮೇವು, ಕವಿರತ್ನ ಕಾಳಿದಾಸ, ಶಬ್ದವೇದಿ ಸಿನೆಮಾಗಳಲ್ಲಿ ಡಾ. ರಾಜ್ ಕುಮಾರ್ ಅವರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವೃತ್ತಿ ಜೀವನದಲ್ಲಿ ಬಹಳ ದೊಡ್ಡ ಮಟ್ಟದ ಸಾಧನೆ ಮಾಡಿದ್ದರೂ ವೈಯಕ್ತಿಕ ಜೀವನದಲ್ಲಿ ಅವರು ದೊಡ್ಡ ವೈಫಲ್ಯವನ್ನೇ ಕಂಡಿದ್ದಾರೆ. ಜಯಪ್ರದಾ ಅವರು ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಎಡವಿದ್ದರು. ಅವರ ವೈವಾಹಿಕ ಜೀವನವು ಅಷ್ಟೊಂದು ಸಂತಸಕರವಾಗಿರಲಿಲ್ಲ. ಇದನ್ನೂ ಓದಿ: Nishvika Naidu New Photoshoot: ವೈರಲ್ ಆಯ್ತು ನಟಿ ನಿಶ್ವಿಕಾ ನಾಯ್ಡು ಬೋಲ್ಡ್ ಫೋಟೊ ಶೂಟ್; ಆದ್ರೆ ಫೋಟೋ ತೆಗೆಸೋ ಗಡಿಬಿಡಿಯಲ್ಲಿ ಪ್ಯಾಂಟ್ ಹಾಕೋದೆ ಮರೆತ್ರಾ ಅಂತ ಕಾಲೆಳೆದ ಫ್ಯಾನ್ಸ್!

ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಶ್ರೀಕಾಂತ ನಹತಾ ಅವರನ್ನು ಇಷ್ಟಪಟ್ಟು ಮದುವೆಯಾಗಲು ಮುಂದಾಗುತ್ತಾರೆ.ಶ್ರೀಕಾಂತ್ ನಹತಾ ಅವರಿಗೆ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದರು. ಈ ವಿಚಾರ ತಿಳಿದೂ ಸಹ ಜಯಪ್ರದಾ ಅವರು ಶ್ರೀಕಾಂತ ನಹತಾ ಅವರನ್ನು ವಿವಾಹವಾಗುತ್ತಾರೆ. ಮೊದಲ ಪತ್ನಿಗೆ ಕಾನೂನಾತ್ಮಕವಾಗಿ ವಿಚ್ಚೇದನ ಕೊಡದೆ ಜಯಪ್ರದಾ ಅವರನ್ನು ಶ್ರೀಕಾಂತ್ ಅವರು ವಿವಾಹವಾಗಿದ್ದರು. ಆದ್ದರಿಂದ ಅವರು ಬೇರೆಯಾಗಿಯೇ ವಾಸವಾಗಿದ್ದರು. ಇದನ್ನೂ ಓದಿ:Real Story: ಹಾಡಹಗಲೇ ಮನೆಗೆ ನುಗ್ಗಿ ಹುಡುಗಿಯನ್ನು ಮುಗಿಸಿದ ಕಿರಾತಕ: ಸಿಕ್ಕಿಬಿದ್ದ ನಂತರ ಕಾರಣ ಕೇಳಿದರೆ, ನಿಜಕ್ಕೂ ದಂಗಾಗ್ತೀರಾ!

ದಿನಗಳು ಕಳೆದಂತೆ ಶ್ರೀಕಾಂತ್ ಅವರಿಗೆ ಮೊದಲ ಪತ್ನಿಯೊಂದಿಗೆ ಇರಬೇಕು ಎಂದು ಅನಿಸುತ್ತದೆ. ಅದನ್ನು ಜಯಪ್ರದಾ ಅವರ ಜೊತೆ ಹಂಚಿಕೊಳ್ಳುತ್ತಾರೆ. ಇದಕ್ಕೆ ಜಯಪ್ರದಾ ಅವರು ಒಪ್ಪುವುದಿಲ್ಲ. ಇದಕ್ಕಾಗಿ ಜಯಪ್ರದಾ ಹಾಗೂ ಅವರ ಪತಿಯ ನಡುವೆ ಜಗಳ ಶುರುವಾಗುತ್ತದೆ. ಕೊನೆಗೂ ಶ್ರೀಕಾಂತ್ ಅವರು ಜಯಪ್ರದಾ ಅವರನ್ನು ಬಿಟ್ಟು ಮೊದಲ ಪತ್ನಿಯಿದ್ದಲ್ಲಿಗೆ ಹೋಗುತ್ತಾರೆ. ಅಂದಿನಿಂದ ಜಯಪ್ರದಾ ಅವರು ಒಬ್ಬಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ.

actressjayapradhaJayapradha marriage storykannada actressKannada Filmಕನ್ನಡ ಸಿನಿಮಾ