Jio Recharge:ಜಿಯೋ ಕೊಟ್ಟ ಆಫರ್ ಗೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್: ಇನ್ಮುಂದೆ ಏರ್ಟೆಲ್ ಆಟ ಸ್ಟಾರ್ಟ್ ಆಯ್ತಾ?? ಹೇಗಿದೆ ಎಂದು ತಿಳಿದರೆ ಇಂದೇ ರಿಚಾರ್ಜ್ ಮಾಡಿಸ್ತೀರಾ

Jio Recharge:ಬೆಂಗಳೂರು ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ ೫ಜಿ ಸೇವೆ ಆರಂಭಿಸಿರುವ ದೇಶದ ಎರಡನೇ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆ ಎಂದ್ರೆ ಅದು ಏರ್ಟೆಲ್. ಈ ಸಂಸ್ಥೆಯೂ ಟೆಲಿಕಾಂ ಕ್ಷೇತ್ರದಲ್ಲಿರುವ ಪೈಪೋಟಿಯನ್ನೂ ಮೀರಿ ಬೆಳೆಯುತ್ತಿದೆ. ಗ್ರಾಹಕರಿಗೆ ಉಪಯುಕ್ತವಾಗುವಂತಹ ಯೋಜನೆಗಳಿಂದ ಏರ್ಟೆಲ್ ಮನೆ ಮಾತಾಗಿದೆ. ಇದೀಗ ಏರ್ಟೆಲ್ ಟೆಲಿಕಾಂ ಸಂಸ್ಥೆ ಹೊಸ ವರ್ಷಕ್ಕೆ ಗ್ರಾಹಕರಿಗೆ ಒಂದು ಸಿಹಿ ಸುದ್ದಿ ನೀಡಿದೆ. ದೇಶದಲ್ಲಿ ೫ಜಿ ಸೇವೆ ಆರಂಭಿಸಲು ಸಾಕಷ್ಟು ಬಂಡವಾಳ ಹೂಡಿಕೆಯ ನಂತರವೂ ಸಹ ತನ್ನ ೫ಜಿ ಸೇವೆ ಒದಗಿಸಲು ಪ್ರಿಮಿಯಂ ಶುಲ್ಕ ಹಾಕುವುದಿಲ್ಲ ಎಂದು ತಿಳಿಸಿದೆ. ೫ ಜಿ ಸ್ಮಾರ್ಟ್ಫೋನ ಹೊಂದಿರುವ ಎಲ್ಲ ಏರ್ಟೆಲ್ ಬಳಕೆದಾರರು ಅಸ್ತಿತ್ವದಲ್ಲಿರುವ ೪ ಜಿ ಯೋಜನೆಗಳಲ್ಲಿ ಏರ್ಟೆಲ್ ೫ಜಿ ಪ್ಲಸ್ ಸೇವೆ ಪಡೆಯಲು ಅರ್ಹರಾಗಿದ್ದಾರೆ.

ದೇಶಾದ್ಯಂತ ಬಹುವೇಗವಾಗಿ ೫ಜಿ ಸೇವೆ ಆರಂಭಿಸುವ ನಿಟ್ಟಿನಲ್ಲಿ ಜಿಯೋ ಟೆಲಿಕಾಂ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಜಿಯೋ ತನ್ನ ೫ಜಿ ಸೇವೆಗಳನ್ನು ಹೆಚ್ಚು ವಿಸ್ತರಿಸುವ ಸಲುವಾಗಿ ಈಗಾಗಲೇ ೫ಜಿ ವೆಲ್ಕಂ ಆಫರ್ ಬಿಡುಗಡೆ ಮಾಡಿದೆ. ೨೩೪ರೂ.ಗಳಿಗಿಂತ ಹೆಚ್ಚು ೪ ಜಿ ಯೋಜನೆಗಳನ್ನು ರೀಚಾರ್ಜ್ ಮಾಡಿದ ಎಲ್ಲ ಗ್ರಾಹಕರು ಅನಿಯಮಿತ ಹೈಸ್ಪೀಡ್ ೫ಜಿ ಡೇಟಾ ಬಳಸಬಹುದು ಎಂದು ತಿಳಿಸಿದೆ. ಇದರಿಂದ ಏರ್ಟೆಲ್ ಕೂಡ ಜಿಯೋವನ್ನು ಅನುಸರಿಸಬೇಕಾಗಿ ಬಂದಿದೆ. ಹಾಗಾಗಿಯೇ ಏರ್ಟೆಲ್ ಹೆಚ್ಚುವರಿ ಪ್ರೀಮಿಯಂ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ. ಆದರೆ ಪ್ರಸ್ತುತ ಏರ್ಟೆಲ್ ೪ಜಿ ಬಳಕೆದಾರರು ರೀಚಾರ್ಜ್ ಮಾಡಿಸಬೇಕಿರುವ ಕನಿಷ್ಟ ಮೊತ್ತದ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ. ಆದರೆ ಉದ್ಯಮ ಮೂಲಗಳು ಏರ್ಟೆಲ್, ಜಿಯೋ ಹಿಂಬಾಲಿಸುವ ಮೂಲಕ ಅನಿಯಮಿತ ಹೈ ಸ್ಪೀಡ್ ೫ಜಿ ಡೇಟಾವನ್ನು ಕಡಿಮೆ ಶುಲ್ಕದಲ್ಲಿ ಒದಗಿಸಬಹುದು ಎಂದು ಹೇಳಿಕೆ ನೀಡಿದೆ.

ರಾಜ್ಯ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಏರ್ಟೆಲ್ ೫ಜಿ ಪ್ಲಸ್ ಸೇವೆ ಆರಂಭವಾಗಿದೆ. ಅಲ್ಟ್ರಾ ಫಾ ೫ಜಿ ನೆಟ್ವರ್ಕ್ ಸೇವೆಗೆ ಪ್ರವೇಶ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಟರ್ಮಿನಲ್-೨ನಲ್ಲಿ ಏರ್ಟೆಲ್ ೫ಜಿ ಪ್ಲಸ್ ಸೇವೆ ಆರಂಭವಾಗಿದ್ದು, ಗ್ರಾಹಕರು ಆಗಮನ ಮತ್ತು ನಿರ್ಗಮನ ಟರ್ಮಿನಲ್ಗಳು, ಲಾಂಜ್, ಬೋರ್ಡಿಂಗ್ ಗೇಟ್ಗಳು, ಭದ್ರತಾ ಗೇಟ್ಗಳು, ಬ್ಯಾಗೇಜ್ ಕ್ಲೈಮ್ ಬೆಲ್ಟ್ ಪ್ರದೇಶದಲ್ಲಿ ೫ಜಿ ಪ್ಲಸ್ ಸೇವೆ ಅನುಭವಿಸಬಹುದಾಗಿದೆ.

Jiojio 5G offersjio 5g recharge plan