Job Opportunity: ಲಕ್ಷ ಲಕ್ಷ ಸಂಬಳ ನೀಡುವ ಉದ್ಯೋಗ ಖಾಲಿ: ಈ ಕೂಡ ಅರ್ಜಿ ಹಾಕಿ ಕೆಲಸ ಪಡೆಯಿರಿ. ಹೇಗೆ ಗೊತ್ತೇ??

Job Opportunity: ಇತ್ತೀಚೆಗೆ ಮೈಕ್ರೋಸಾಫ್ಟ್ (Microsoft)  ಹಾಗೂ ಗೂಗಲ್ (Google) ಮೊದಲ ಕಂಪನಿಗಳಿಂದ ಉದ್ಯೋಗಿಗಳನ್ನ ತೆಗೆದುಹಾಕಲಾಗಿದೆ. ಹೀಗಾಗಿ ಸಾಕಷ್ಟು ಉದ್ಯೋಗಿಗಳು ಕೆಲಸವನ್ನು ಕಳೆದುಕೊಂಡಿದ್ದಾರೆ. ಆದರೆ ಇನ್ನೊಂದೆಡೆ ಸೆಂಟ್ರಲ್ ಸಿಲ್ಕ್ ಬೋರ್ಡ್ (Central Silk Board)  ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಲ್ಲಿ ಸುಮಾರು 8ಕ್ಕೂ ಹೆಚ್ಚು ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಹುದ್ದೆಗಳು ಖಾಲಿ ಇವೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ಇದರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೋಡೋಣ.

ಸೆಂಟ್ರಲ್ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿರುವ ಜನರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಒಟ್ಟೂ 8 ಹುದ್ದೆಗಳು ಖಾಲಿಯಿವೆ. ಇನ್ನು ಅರ್ಜಿ ಸಲ್ಲಿಸಲು ಏಪ್ರಿಲ್ 5, 2023 ಕೊನೆಯ ದಿನಾಂಕ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿಯೇ ಕೆಲಸ ನೀಡಲಾಗುವುದು.

ಖಾಲಿ ಇರುವ ಹುದ್ದೆಗಳು: ಜಂಟಿ ಕಾರ್ಯದರ್ಶಿ (ಟೆಕ್ನಿಕಲ್ ವಿಭಾಗ)- 2 ಹುದ್ದೆಗಳು,  ಜಂಟಿ ನಿರ್ದೇಶಕ (ಅಡ್ಮಿನಿಸ್ಟ್ರೇಶನ್ ವಿಭಾಗ)- 1 ಹುದ್ದೆ, ಡೆಪ್ಯುಟಿ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್ ವಿಭಾಗ)-1 ಹುದ್ದೆ, ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್ ವಿಭಾಗ)- 1 ಹುದ್ದೆ, ಅಸಿಸ್ಟೆಂಟ್ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್ ವಿಭಾಗ )-1 ಹುದ್ದೆ, ಅಸಿಸ್ಟೆಂಟ್ ಡೈರೆಕ್ಟರ್ (ಸ್ಟಾಟಿಸ್ಟಿಕ್ಸ್​ ವಿಭಾಗ )- 1, ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ ವಿಭಾಗ)- 1 ಹುದ್ದೆ.

ವಿದ್ಯಾರ್ಹತೆ: ಡೆಪ್ಯುಟಿ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್) ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ)- ಹುದ್ದೆಗಳಿಗೆ  ಡಿಪ್ಲೊಮಾ, ಡಿಗ್ರಿ ಆದರೆ ಸಾಕು ಉಳಿದ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಪದವಿ ಪಡೇದಿರಬೇಕು.

ವೇತನ ಶ್ರೇಣಿ: ಜಂಟಿ ಕಾರ್ಯದರ್ಶಿ (ಟೆಕ್ನಿಕಲ್)- ತಿಂಗಳಿಗೆ 78,800-2,09,200 ರೂಪಾಯಿಗಳು, ಜಂಟಿ ನಿರ್ದೇಶಕ (ಅಡ್ಮಿನಿಸ್ಟ್ರೇಶನ್)- ತಿಂಗಳಿಗೆ 78,800-2,09,200 ರೂ., ಡೆಪ್ಯುಟಿ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್)- ತಿಂಗಳಿಗೆ 67,700-2,08,700ರೂ., ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್)- ತಿಂಗಳಿಗೆ 67,700-2,08,700 ರೂ., ಅಸಿಸ್ಟೆಂಟ್ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್)- ತಿಂಗಳಿಗೆ 56,100-1,77,500ರೂ., ಅಸಿಸ್ಟೆಂಟ್ ಡೈರೆಕ್ಟರ್ (ಸ್ಟಾಟಿಸ್ಟಿಕ್ಸ್​)-ತಿಂಗಳಿಗೆ 56,100-1,77,500ರೂ., ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ)- ತಿಂಗಳಿಗೆ 56,100-1,77,500 ರೂ. ವೇತನ ಸಿಗುತ್ತದೆ.

ವಯೋಮಿತಿ: ಸೆಂಟ್ರಲ್ ಸಿಲ್ಕ್​ ಬೋರ್ಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್​ 5, 2023 ದಿನಾಂಕಕ್ಕೆ 56 ವರ್ಷ ವಯಸ್ಸು ಮೀರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.

ಸದಸ್ಯ ಕಾರ್ಯದರ್ಶಿ, ಕೇಂದ್ರ ರೇಷ್ಮೆ ಮಂಡಳಿ

ಸಿಎಸ್‌ಬಿ ಕಾಂಪ್ಲೆಕ್ಸ್, ಬಿ.ಟಿ.ಎಂ. ಲೇಔಟ್

ಮಡಿವಾಳ, ಹೊಸೂರು ರಸ್ತೆ

ಬೆಂಗಳೂರು – 560068

central silk boardJob offerjob openingKanratakaಉದ್ಯೋಗ