Joginder Sharma: ಅಂದು ವಿಶ್ವಕಪ್ ಗೆಲ್ಲಿಸಿದ ಹಿರೋ; ಇಂದು ೧೨೦ ಮಹಿಳೆಯರಿಗೆ ವಂಚಿಸಿದ ಬಾಬಾನನ್ನು ಏನನ್ನು ಮಾಡಿದ್ದಾರೆ ಗೊತ್ತೇ? ಜೋಗಿಂದರ್ ಶರ್ಮ ಅಸಲಿ ಹಿರೋ ಆಗ್ಬಿಟ್ರು !

Joginder Sharma: ನಮ್ಮ ದೇಶದಲ್ಲಿ ಜನರು ದೇವರನ್ನು, ಗುರುಗಳನ್ನು ಅತಿಯಾಗಿ ನಂಬುತ್ತಾರೆ. ಅದರಲ್ಲೂ ಗುರುಗಳನ್ನು, ಸ್ವಾಮೀಜಿಗಳನ್ನು ದೇವರ ಪ್ರತಿರೂಪ ಎಂದೇ ಭಾವಿಸುತ್ತಾರೆ. ಆದರೆ ಕೆಲವರು ಈ ಸ್ವಾಮೀಜಿಯ ವೇಷ ಧರಿಸಿ ತಮ್ಮ ಸ್ವಾರ್ಥ ಸಾಧನೆಗೆ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು, ಹಣ ಗಳಿಸುವುದು ಮಾಡುತ್ತಾರೆ. ಇದರಿಂದ ನಿಜವಾಗಿ ಸನ್ಯಾಸತ್ವ ಆಚರಿಸುವರಿಗೂ ಕೆಟ್ಟ ಹೆಸರು ಬರುತ್ತದೆ. ಹೀಗೆ ಸನ್ಯಾಸಿಯ ವೇಷದಲ್ಲಿರುವ ವಂಚಕನೊಬ್ಬನನ್ನು ಕ್ರಿಕೇಟಿಗ ಹಿಡಿದಿದ್ದಾನೆ.

ಹೌದು, ಖ್ಯಾತ ಕ್ರಿಕೇಟಿಗರಾಗಿದ್ದಂತಹ ಜೋಗಿಂದರ್ ಶರ್ಮ ಅವರು ವಂಚಕ ಜಿಲೆಬಿ ಬಾಬಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

೨೦೦೭ರಲ್ಲಿ ಭಾರತಕ್ಕೆ ಮೊದ ಟಿ-೨೦ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಗಿಂದರ್ ಶರ್ಮ ಈಗ ಡಿಎಸ್ಪಿ ಆಗಿ ಕಾರ್ಯನಿರ್ವಹಿಸಯತ್ತಿದ್ದಾರೆ. ೨೦೦೭ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಜೋಗಿಂದರ್ ಶರ್ಮ ಕೊನೆಯ ಓವರ್ ಬೌಲ್ ಮಾಡಿ ಗೆಲುವಿನ ಹಿರೋ ಎನಿಸಿಕೊಂಡಿದ್ದರು. ಟಿ-೨೦ ವಿಶ್ವಕಪ್ನ್ನು ಧೋನಿ ನಾಯಕತ್ವದ ಭಾರತ ತಂಡ ಚೊಚ್ಚಲ ಬಾರಿಗೆ ಗೆದ್ದು ಬೀಗಿತ್ತು.

ಜಿಲೇಬಿ ಬಾಬಾನನ್ನು ಸೆರೆ ಹಿಡಿಯುವಲ್ಲಿ ಈ ಆಟಗಾರ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲೇಬಿ ಬಾಬಾನ ಕೆಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸದ್ದು ಮಾಡಿದ್ದವು. ಅದರಲ್ಲಿ ಆತ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಕಂಡುಬಂದಿತ್ತು. ಪತೇಹಾಬಾದ್ ಪೊಲೀಸರು ಮಾಹಿತಿದಾರರ ಮೂಲಕ ಆತನ ಸ್ಥಳದ ಕುರಿತು ಮಾಹಿತಿ ಪಡೆದರು. ಅನಂತರ ಡಿಎಸ್ಪಿ ಜೋಗಿಂದರ್ ಶರ್ಮ ಅವರ ತಂಡ ಜಿಲೆಬಿ ಬಾಬಾ ಅವರನ್ನು ಅವರ ಅಮರಪುರಿ ಆಶ್ರಮದಲ್ಲೇ ಬಂಧಿಸಿತ್ತು.

ಜಿಲೇಬಿ ಬಾಬಾ ಹಿನ್ನೆಲೆ:

ಈ ತೋಹಾನಾ ಬಾಬಾ ಮೊದಲು ಜಿಲೇಬಿ ಮಾರಾಟ ಮಾಡುತ್ತಿದ್ದ. ತಂತ್ರಿಗಳಾಗುವ ಮೊದಲು ಅಮರಪುರಿ ತೋಹಾನಾದಲ್ಲಿ ರೈಲ್ವೆ, ರಸ್ತೆಗಳಲ್ಲಿ ಜಿಲೇಬಿ ಮಾರಾಟ ಮಾಡುತ್ತಿದ್ದ. ನಂತರ ಈ ವ್ಯವಹಾರ ಬಿಟ್ಟು ತಂತ್ರ- ಮಂತ್ರಗಳನ್ನು ಕಲಿತು ಬಾಬಾ ಆದ. ಹೀಗಾಗಿಯೇ ಇವನನ್ನು ಜಿಲೇಬಿ ಬಾಬಾ ಎಂದು ಕರೆಯುತ್ತಾರೆ.

ಬಾಬಾ ಆದ ಬಳಿಕ ಅಮರಪುರಿಯಲ್ಲಿ ಅವರು ಅಪ್ರಾಪ್ತ ಮತ್ತು ವಯಸ್ಕ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡುವುದು, ಅತ್ಯಾಚಾರ ಮಾಡುವುದು, ಅದನ್ನು ವೀಡಿಯೋ ಮಾಡಿಟ್ಟುಕೊಂಡು ಆ ಮಹಿಳೆಯರನ್ನು ಬ್ಲಾಕ್ಮೇಲ್ ಮಾಡುವುದು ಮಾಡಿದ್ದಾರೆ. ಪೊಲೀಸರು ದಾಳಿ ಮಾಡಿದ ವೇಳೆ ಬಾಬಾ ಮಾಡಿಟ್ಟುಕೊಂಡ ವೀಡಿಯೋ ಸಿಡಿಗಳು ಪತ್ತೆಯಾಗಿದೆ. ಮತ್ತು ಸಂತ್ರಸ್ತ ಮಹಿಳೆಯರು ನೀಡಿದ ದೂರಿನ ಆಧಾರದ ಮೇಲೆ ಬಾಬಾನನ್ನು ಬಂಧಿಸಲಾಗಿದೆ.

ಜನರ ಸಮಸ್ಯೆ ಪರಿಹರಿಸುವುದಾಗಿ ಹೇಳಿಕೊಂಡು ಬಾಬಾ ಅಮರಪುರಿಯಲ್ಲಿ ಆಶ್ರಮವೊಂದನ್ನು ಕಟ್ಟಿಕೊಂಡಿದ್ದರು. ಅದರಲ್ಲಿ ನೆಲ ಮಾಳಿಗೆ ಇತ್ತು. ಅಲ್ಲಿ ಇರುವ ರೂಮಿನಲ್ಲಿ ಕಣ್ಗಾವಲು ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಕೌಟುಂಬಿಕ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಆ ರೂಮಿಗೆ ಕರೆಸಿಕೊಳ್ಳುತ್ತಿದ್ದ. ಅಲ್ಲಿ ಮಹಿಳೆಯರನ್ನು ಅತ್ಯಾಚಾರ ಮಾಡಿ, ಅದನ್ನು ವೀಡಿಯೋ ಮಾಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.