Kannada Recipe; ರಾತ್ರಿ ಚೆನ್ನಾ(ಕಾಬೂಲ್ ಕಡ್ಲೆ) ಕಾಳನ್ನು ನೆನೆಸಿಡಲು ನೆನಪಿದ್ರೆ ಸಾಕು, ಕೇವಲ ಐದು ನಿಮಿಷಗಳಲ್ಲಿ ಬೆಳಗಿನ ಈ ತಿಂಡಿ ಸಿದ್ದವಾಗಿರುತ್ತೆ!

Kannada Recipe: ಮನೆಯಲ್ಲಿ ಬೆಳಗಿನ ತಿಂಡಿಯನ್ನು ತಯಾರಿಸಲೇ ಬೇಕು. ಬೇರೆ ದಾರಿಯೇ ಇಲ್ಲ. ಹಾಗಂತ ದಿನವೂ ಒಂದೇ ರೀತಿಯ ತಿಂಡಿ ತಿನ್ನೋದಕ್ಕೂ ಬೇಸರ. ಹಾಗಾಗಿ ವಾರದಲ್ಲಿ ನಾಲ್ಕು ದಿನವಾದರೂ ವೆರೈಟಿ ಇರಲಿ ಅಂತ ಮನೆಯವರೂ ಕೂಡ ಬಯಸುತ್ತಾರೆ ಅಲ್ವಾ.. ಹಾಗಾಗಿ ನಾವು ಒಂದು ಕೇವಲ ಐದು ನಿಮಿಷಗಳಲ್ಲಿ ತಯಾರಿಸಬಹುದಾದ ಬೆಸ್ಟ್ ರೆಸಿಪಿಯೊಂದನ್ನು ಹೇಳುತ್ತಿದ್ದೇವೆ. ಇದು ಬ್ಯಾಚುಲರ್ಸ್ ಗೂ ಕೂಡ ಬಹಳ ಸುಲಭವಾಗಿ ಮಾಡಿಕೊಳ್ಳಬಹುದಾದ ರೆಸಿಪಿ.

Kannada Recipe; ರಾತ್ರಿ ಚೆನ್ನಾ(ಕಾಬೂಲ್ ಕಡ್ಲೆ) ಕಾಳನ್ನು ನೆನೆಸಿಡಲು ನೆನಪಿದ್ರೆ ಸಾಕು, ಕೇವಲ ಐದು ನಿಮಿಷಗಳಲ್ಲಿ ಬೆಳಗಿನ ಈ ತಿಂಡಿ ಸಿದ್ದವಾಗಿರುತ್ತೆ! https://sihikahinews.com/amp/kabul-kadle-easy-recipe/

ಕಾಬೂಲ್ ಕಡ್ಲೆ ಉಸ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು:

ಕಾಬೂಲ್ ಕಡ್ಲೆ (kabul kadle) – ಒಂದು ಬೌಲ್

ಸ್ವಲ್ಪ ಜೀರಿಗೆ

ಅಡುಗೆ ಎಣ್ಣೆ 2-3 ಚಮಚ

ಹೆಚ್ಚಿದ ಈರುಳ್ಳಿ ಸಣ್ಣಗಾತ್ರದ್ದು – 1

ಕರಿಬೇವು ಸ್ವಲ್ಪ

ಅರಿಶಿನ ಚಿಟಿಕೆ

ತಾಜಾ ತೆಂಗಿನ ತುರಿ, ಸ್ವಲ್ಪ

ರುಚಿಗೆ ಉಪ್ಪು

ಒಗ್ಗರಣೆಗೆ ಸಾಸಿವೆ ಉದ್ದಿನಬೇಳೆ, ಒಣಮೆಣಸು

ಮಾಡುವ ವಿಧಾನ: ಮೊದಲಿಗೆ ರಾತ್ರಿಯಿಡಿ ನೆನೆಸಿಟ್ಟ ಕಾಬೂಲ್ ಕಡ್ಲೆಯನ್ನು ಒಂದು ಕುಕ್ಕರ್ ನಲ್ಲಿ ಹಾಕಿ ಅದು ಮುಳುಗುವಷ್ಟು ನೀರನ್ನು ಹಾಕಿ. ಜೊತೆಗೆ ಸ್ವಲ್ಪ ಜೀರಿಗೆಯನ್ನು ಹಾಗೂ ಉಪ್ಪನ್ನು ಹಾಕಿ (ಜೀರಿಗೆ ಹಾಕಿದರೆ ಕಡ್ಲೆ ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುವುದಿಲ್ಲ) ೪ ವಿಜಲ್ ಕೂಗಿಸಿಕೊಳ್ಳಿ.

ಈಗ ಒಂದು ಬಾಣಲೆಗೆ ಎಣ್ಣೆಹಾಕಿ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ, ಕರಿಬೇವು, ಒಣಮೆಣಸು ಹಾಕಿ ಸ್ವಲ್ಪ ಬಾಡಿಸಿ. ಸಾಸಿವೆ ಚಿಟಪಟ ಅಂದಾಗ ಹೆಚ್ಚಿದ ಈರುಳ್ಳಿ ಸೇರಿಸಿ. ಅದಕ್ಕೆ ಅರಿಶಿನ ಹಾಕಿ. ಸ್ವಲ್ಪ ಉಪ್ಪನ್ನು ಹಾಕಿ. ಈಗ ಬೇಯಿಸಿ ಇಟ್ಟುಕೊಂಡ ಕಡ್ಲೆಯ ನೀರು ಬಸಿದು ಕಡ್ಲೆಯನ್ನು ಬಾಣಲೆಗೆ ಹಾಕಿ ಫ್ರೈ ಮಾಡಿ. ನಂತರ ತೆಂಗಿನ ತುರಿಯನ್ನು ಹಾಕಿ ಗ್ಯಾಸ್ ಆಫ್ ಮಾಡಿ. ನೀವು ಇದಕ್ಕೆ ಎರಡು ಹನಿ ನಿಂಬೆರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು. ಇದ್ಗ ಕೇವಲ ಐದು ನಿಮಿಷಗಳಲ್ಲಿ ಬೆಳಗಿನ ರುಚಿಯಾದ ತಿಂಡಿ ಸಿದ್ಧವಾಗಿದೆ.

Kannada Recipeಕಾಬೂಲ್ ಕಡ್ಲೆ ಉಸ್ಲಿರೆಸಿಪಿಸುಲಭ ಅಡುಗೆ