Kannada Astrology: ಈ ರಾಶಿಯವರಿಗೆ ಜೀವನದ ಉದ್ದಕ್ಕೂ ಇರುತ್ತೆ ಲಕ್ಷ್ಮಿ ದೇವಿಯ ಕೃಪೆ; ಯಾವ್ಯಾವ ರಾಶಿಗಳು ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಒಂದೊಂದು ರಾಶಿಗೂ ಒಂದೊಂದು ಅಧಿಪತಿ ಇರುತ್ತಾನೆ. 12 ರಾಶಿಗಳನ್ನು ಗ್ರಹಗಳು ಆಳುತ್ತವೆ. ಗ್ರಹಗಳು ಆಗಾಗ ಪಥವನ್ನು ಬದಲಾಯಿಸಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಹೀಗಾಗಿ ಗ್ರಹಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಈ ಬಾರಿ ಸಂಪತ್ತಿನ ಅತಿ ದೇವತೆಯಾದ ಲಕ್ಷ್ಮಿ ದೇವಿಯ ಅನುಗ್ರಹ ಈ ಕೆಲವು ರಾಶಿಗಳ ಮೇಲೆ ಇದೆ ಇದರಿಂದ ಯಾವುದೇ ಕಾರಣಕ್ಕೂ ಆರ್ಥಿಕವಾಗಿ ನಷ್ಟ ಉಂಟಾಗುವುದಿಲ್ಲ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವವು ನೋಡೋಣ ಬನ್ನಿ.

ತುಲಾ ರಾಶಿ:

ತುಲಾ ರಾಶಿ ಲಕ್ಷ್ಮೀದೇವಿಯ ನೆಚ್ಚಿನ ರಾಶಿ ಆಗಿದೆ ಹಾಗಾಗಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯಿಂದ ತುಲಾ ರಾಶಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಆರ್ಥಿಕವಾಗಿ ಯಾವುದೇ ಮುಗ್ಗಟ್ಟನ್ನ್ ಕೂಡ ಇವರು ಎದುರಿಸುವುದಿಲ್ಲ ಹೆಚ್ಚು ಪ್ರಯತ್ನ ಇಲ್ಲದೆಯೂ ಕೂಡ ಯಶಸ್ಸನ್ನ ಸಾಧಿಸುತ್ತಾರೆ. ಇವರು ಹಣದ ವಿಷಯದಲ್ಲಿ ಬಹಳ ಅದೃಷ್ಟವಂತರು ಎಂದೇ ಹೇಳಬಹುದು. ಲಕ್ಷ್ಮೀದೇವಿ ಈ ರಾಶಿಯವರ ಜೊತೆ ಸದಾ ಇರುತ್ತಾರೆ.

ವೃಷಭ ರಾಶಿ:

ಈ ರಾಶಿಯ ಮೇಲೆ ಲಕ್ಷ್ಮಿ ದೇವಿಯ ಕೃಪೆ ಯಾವಾಗಲೂ ಇರುತ್ತದೆ. ಇವರು ಜೀವನದಲ್ಲಿ ಎಲ್ಲಾ ರೀತಿಯ ದೈಹಿಕ ಸುಖವನ್ನು ಅನುಭವಿಸುತ್ತಾರೆ. ಹಣದ ವಿಷಯದಲ್ಲಿ ಅಂತೂ ಇವರಿಗೆ ಸಮಸ್ಯೆ ಆಗುವುದೇ ಇಲ್ಲ. ಈ ರಾಶಿಯವರು ಬುದ್ದಿವಂತರು ಶ್ರಮಜೀವಿಗಳು ತಮ್ಮದೇ ಆದ ರೀತಿಯಲ್ಲಿ ಇವರು ಮುಂದುವರೆಯುತ್ತಾರೆ. ಹಾಗೂ ಅದೃಷ್ಟ ಇವರ ಕೈ ಹಿಡಿಯುತ್ತದೆ ಲಕ್ಷ್ಮೀದೇವಿ ಸದಾ ಇವರಿಗೆ ಒಳ್ಳೆಯದನ್ನು ಮಾಡುತ್ತಾಳೆ.

ಸಿಂಹ ರಾಶಿ:

ಎಲ್ಲಾ 12 ರಾಶಿಗಳ ಪೈಕಿ ಲಕ್ಷ್ಮಿ ದೇವಿಗೆ ಸಿಂಹ ರಾಶಿ ನೆಚ್ಚಿನ ರಾಶಿಯಾಗಿದೆ ಇವರು ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಬಾರದಂತೆ ಲಕ್ಷ್ಮಿ ದೇವಿ ನೋಡಿಕೊಳ್ಳುತ್ತಾಳೆ. ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗುತ್ತದೆ. ಈ ರಾಶಿಯವರ ತಲೆಯ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಹಾಗಾಗಿ ಮಾಡಿದ ಎಲ್ಲಾ ಕೆಲಸದಲ್ಲಿ ಕೂಡ ಲಾಭವನ್ನು ಪಡೆಯುತ್ತಾರೆ.

12 zodiac signsAstrologyGrahaHoroscopeKannada Astrology lakshmi Krapalakshmiಜ್ಯೋತಿಷ್ಯಾಸ್ತ್ರ