Kannada Film: ಅಣ್ಣಾವ್ರ ಫ್ಯಾನ್ಸ್ ನಾಗರಹಾವು ನೋಡಲ್ಲ ಎಂದಾದ, ಶಿವಣ್ಣ ರವರು ಅಂದು ಮುಂದೆ ಬಂದು ಮಾಡಿದ್ದೇನು ಗೊತ್ತೇ? ಫ್ಯಾನ್ಸ್ ನಡುವೆ ಶಿವಣ್ಣ ಇದು ಮಾಡಬೇಕಾಗಿತ್ತೇ?

Kannada Film: ಕನ್ನಡ ಚಿತ್ರರಂಗದ ಕೆಲವು ಸಿನಿಮಾಗಳು ಮೈಲುಗಲ್ಲು ಎಂದೇ ಹೇಳಬಹುದು. ಅಂತಹ ಒಂದು ಸಿನಿಮಾ ನಾಗರಹಾವು. ಇದು ವಿಷ್ಣುದಾದ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ. ವಿಷ್ಣುವರ್ಧನ್ ಅವರು, ಅಂಬರೀಶ್ ಅವರು, ಆರತಿ ಅವರು, ಶುಭ ಅವರು, ಕೆ.ಎಸ್. ಅಶ್ವತ್ಥ್ ಅವರು, ಶಿವರಾಂ ಅವರಂತಹ ಘಟಾನುಘಟಿ ಕಲಾವಿದರನ್ನು ಸೇರಿಸಿ, ಅದ್ಭುತವಾದ ಕಥೆ ಬರೆದು, ಪುಟ್ಟಣ್ಣ ಕಣಗಾಲ್ ಅವರು ನಿರ್ಮಿಸಿ, ವೀರಸ್ವಾಮಿ ಅವರು ನಿರ್ಮಾಣ ಮಾಡಿದ ಸಿನಿಮಾ. ಇದು ವಿಷ್ಣುದಾದ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಲುಕ್ ತಂದುಕೊಟ್ಟಿತ್ತು..

70ರ ದಶಕದಲ್ಲಿ ಹೊಸ ರೀತಿಯ ಕಥೆ ಇದಾಗಿತ್ತು ಎಂದರೆ ತಪ್ಪಲ್ಲ. ಅಣ್ಣಾವ್ರ ಅಭಿಮಾನಿಗಳು ಈ ಸಿನಿಮಾ ನೋಡುವುದಿಲ್ಲ ಎನ್ನುತ್ತಿದ್ದಾಗ, ಶಿವಣ್ಣ ಅವರು ನಾಗರಹಾವು ಸಿನಿಮಾ ನೋಡಿ ಹೇಳಿದ್ದೇನು ಗೊತ್ತಾ? “ನಾಗರಹಾವು ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಹಾಗೂ ನಿರ್ಮಾಪಕ ವೀರಸ್ವಾಮಿ ಅವರು ತಮ್ಮ ಕುಟುಂಬಕ್ಕೆ ಬಹಳ ಆತ್ಮೀಯರು, ಆ ಕಾರಣಕ್ಕೆ ವೀಕ್ಷಿಸಲು ಹೋದಾಗ, ನನಗೆ 10 ಅಥವಾ 11 ವರ್ಷ. ನಮ್ಮ ತಂದೆಯವರು} ಸಿನಿಮಾಗಳನ್ನೇ ಜಾಸ್ತಿ ನೋಡಿದ್ದ ನಾನು ವಿಷ್ಣುವರ್ಧನ್ ಅವರನ್ನು ಯಾರಪ್ಪಾ ಇವರು ಎಷ್ಟು ಅದ್ಭುತವಾಗಿ ನಟಿಸಿದ್ದಾರೆ ಅಂದುಕೊಂಡಿದ್ದೆ. ಅಪ್ಪಾಜಿಯವರ ಸ್ಥಾನ ತುಂಬಿಸಬಲ್ಲವರು ಇವರೊಬ್ಬರೇ ಅನ್ನಿಸಿತ್ತು. ಅವರ ನಟನೆ, ಕೋಪ ಎಲ್ಲವನ್ನು ಇವತ್ತಿಗೂ ಮರೆಯೋಕೆ ಸಾಧ್ಯವಿಲ್ಲ. ಅದು ತುಂಬಾ ವಿಭಿನ್ನವಾದ ಸಿನಿಮಾ.

ನಾಗರಹಾವು ನೋಡಿ, ನಿರ್ದೇಶಕರು ಯಾರು ಅಂತ ವರದಪ್ಪ ಅವರ ಹತ್ತಿರ ಕೇಳಿದ್ದೆ..ಪುಟ್ಟಣ್ಣ ಕಣಗಾಲ್ ಅವರು ಅಂತ ಹೇಳಿದಾಗ, ಅವರು ನಿರ್ದೇಶನ ಮಾಡಿದ್ದ ಬೇರೆ ಚಿತ್ರಗಳನ್ನ ನೋಡಿದ್ದ ನನಗೆ, ನಾಗರಹಾವು ಬೇರೆ ರೀತು ಫೀಲ್ ಕೊಡ್ತು. ಅದಕ್ಕಿಂತ ಮೊದಲು ಅವರು ಮಾಡಿದ್ದ ಸಿನಿಮಾಗಳ ಹಾಗೆ ನಾಗರಹಾವು ಇರಲಿಲ್ಲ. ನಂತರ ಪುಟ್ಟಣ್ಣ ಕಣಗಾಲ್ ಅವರನ್ನ ಭೇಟಿ ಮಾಡಿ, ಸರ್ ನಿಮ್ಮ ಸಿನಿಮಾ ಅದ್ಭುತವಾಗಿದೆ. ಸಿಲ್ವರ್ ಜ್ಯುಬಿಲಿ ಆಗೋದು ಗ್ಯಾರಂಟಿ. ಸಿನಿಮಾದ ಹೀರೋ ನನಗೆ ತುಂಬಾ ಇಷ್ಟವಾದರು ಸರ್, ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ..ಐ ಲವ್ ಹಿಮ್ ಸರ್..” ಎಂದು ಹೇಳಿದ್ದರಂತೆ ಶಿವಣ್ಣ. ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡದೆ ಇರಲಿಲ್ಲ ದೊಡ್ಮನೆ ಕುಟುಂಬ.

Dr.rajkumarKannada FilmNagarahaavu filmShivannaVishnuvaedhan