Kannada Film: ಧ್ರುವ ಸರ್ಜಾ ಅವರ ಆರೋಗ್ಯ ನಿಜಕ್ಕೂ ಏರುಪೇರಾಗಿದ್ಯಾ? ಏನು ಮಾಡೋದಕ್ಕೆ ಹೋಗಿ ಇನ್ನೇನು ಮಾಡಿಕೊಂಡ್ರಾ ಆಕ್ಷನ್ ಪ್ರಿನ್ಸ್? ಪ್ರೇಮ್ ಅವರ ಪೋಸ್ಟ್ ನಲ್ಲಿ ಏನಿತ್ತು ಗೊತ್ತಾ?!

Kannada Film: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಸಿನಿಮಾಕ್ಕೆ ಫುಲ್ ರೆಡಿ ಆಗಿದ್ದಾರೆ. ಧ್ರುವ ಸರ್ಜಾ ಕೇವಲ 4 ಸಿನಿಮಾಗಳಾಲ್ಲಿ ಅಭಿನಯಿಸಿದ್ದರೂ ಕೂಡ ಅವರು ಗಳಿಸಿಕೊಂಡ ಅಭಿಮಾನಿಗಳು ಮಾತ್ರ ಅಗಣ್ಯ. ನಟ ಚಿರಂಜೀವಿ ಸರ್ಜಾ ಇರುವಾಗಲೂ ಅಣ್ಣ ತಮ್ಮ ಇಬ್ಬರು ಸೇರಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದರು.

ಧ್ರುವ ಸರ್ಜಾ ನೋಡುವುದಕ್ಕೆ ಬಹಳ ಫಿಟ್ ಅಂಡ್ ಫೈನ್. ಅವರ ಹಿಂದಿನ ಸಿನಿಮಾಗಳೆಲ್ಲವೂ ಸಕ್ಕತ್ ಬಾಡಿ ಹೊಂದಿರುವಂತಹ ಚಿತ್ರಗಳು. ಅದರಲ್ಲೂ ಆಕ್ಷನ್ ಪ್ರಿನ್ಸ್ ಪೊಗರು ಸಿನಿಮಾದಲ್ಲಿ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ. ಆ ಸಿನಿಮಾದಲ್ಲಿ ಸಾಕಷ್ಟು ಬಾಡಿ ವೆಟ್ ಕೂಡ ಇತ್ತು. ಇನ್ನು ಪೊಗರು ಸಿನಿಮಾದ ಒಂದು ಐದು ನಿಮಿಷದ ಸೀನ್ ಗಾಗಿ ಸಿಕ್ಕಾಪಟ್ಟೆ ಸಣ್ಣ ಆಗಿದ್ದೂ ಉಂಟು. ಈಗಲೂ ಕೆಡಿ ಸಿನಿಮಾಕ್ಕಾಗಿ ದೇಹದ ತೂಕವನ್ನು ಸಿಕ್ಕಾಪಟ್ಟೆ ಇಳಿಸಿಕೊಂಡಿದ್ದಾರೆ.

ಕೇವಲ 23 ದಿನಗಳಲ್ಲಿ 18 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ ಆಕ್ಷನ್ ಪ್ರಿನ್ಸ್. ಡಿಫ್ರೆಂಟ್ ಡೈರೆಕ್ಟರ್ ಎಂದೇ ಖ್ಯಾತಿ ಗಳಿಸಿರುವ ಪ್ರೇಮ ನಿರ್ದೇಶನದ ಕೇಡಿ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿದ್ದಾರೆ. ಕೆ ವಿ ಎನ್ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹೆಂಗಿದ್ದವರು ಹೆಂಗಾಗಿ ಬಿಟ್ರು ಎನ್ನುವಂತೆ ಧ್ರುವ ಸರ್ಜಾ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಧ್ರುವ ಸರ್ಜಾ ಹೀಗೆ ತೂಕ ಇಳಿಸಿಕೊಂಡಿರುವ ಪೋಸ್ಟ್ ಒಂದನ್ನು ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಕೆಡಿ ಯುದ್ಧಭೂಮಿಗೆ ಧ್ರುವ ಸರ್ಜಾ ರೆಡಿ ಆಗಿದ್ದಾರೆ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ’. ಎಂದು ಪ್ರೇಮ್ ಕೇಡಿ ಸಿನಿಮಾದ ಆರಂಭದ ಹಾಗೂ ಈಗಿನ ಧ್ರುವ ಅವರ ಜೊತೆಗೆ ಫೋಟೋ ಶೇರ್ ಮಾಡಿದ್ದಾರೆ. ಈ ಬಿಫೋರ್ ಆಫ್ಟರ್ ಚಿತ್ರದ ಮೂಲಕ  ಸಿನಿಮಾಕ್ಕಾಗಿ ಧ್ರುವ ಸರ್ಜಾ ಇಳಿಸಿಕೊಂಡಿರುವ ತೂಕ ಬರೋಬ್ಬರಿ 18 ಕೆಜಿ ಎಂಬುದು ಸರಿಯಾಗಿ ಗೊತ್ತಾಗುತ್ತಿದೆ.

ಇಷ್ಟು ಕಡಿಮೆ ಅವಧಿಯಲ್ಲಿ ಧ್ರುವ ಸರ್ಜಾ ತೂಕ ಇಳಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಕೇವಲ ಲಿಕ್ವಿಡ್ ಆಹಾರಗಳನ್ನೇ ಸೇವಿಸಿ ಧ್ರುವ ಇಷ್ಟು ಸಣ್ಣ ಆಗಿದ್ದಾರೆ ಎಂದು ಪ್ರೇಮ್ ತಿಳಿಸಿದ್ದಾರೆ. ಆದರೆ ಸಿನಿಮಾಗೋಸ್ಕರ ಆಗಾಗ ಸಣ್ಣ ದಪ್ಪ ಆಗುವುದರ ಜೊತೆಗೆ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳು ಧ್ರುವ ಅವರಿಗೆ ಮನವಿ ಮಾಡಿದ್ದಾರೆ. ಧ್ರುವ ಸರ್ಜಾ ಅವರ ಬಾಡಿ ತುಂಬಾ ಫೇಮಸ್. ಅವರು ಯಾವುದೇ ಸಿನಿಮಾಕ್ಕೆ ಹೇಗೆ ಬೇಕಿದ್ದರೂ ಅವರ ಬಾಡಿಯನ್ನು ರೆಡಿ ಮಾಡಿಕೊಳ್ಳುತ್ತಾರೆ. ಆದರೆ ತೂಕದ ಜೊತೆಗೆ ಆಡೋದಕ್ಕೆ ಹೋಗಿ ಆರೋಗ್ಯ ಹದಗೆಡಿಸಿಕೊಳ್ಳಬೇಡಿ ಎನ್ನುವುದೇ ಅಭಿಮಾನಿಗಳ ಮನವಿ.

action princeBodyDruva sarjaKannada FilmKD filmPrem