Kannada Film: ಅಪ್ಪ-ಮಗಳ ಪವಿತ್ರ ಬಂಧನಕ್ಕೆ ಸೇತುವೆಯಾಗಲಿರುವ ‘ಮಗಳೇ’; ಕನ್ನಡ ಸಿನಿಮಾದಲ್ಲೂ ಕೈಜೋಡಿಸಿದ ಜಪಾನ್ ನಿರ್ಮಾಪಕರು!

Kannada Film: ಮಗಳೇ… ಅ ಕಲರ್‌ಫುಲ್‌ ಡಾರ್ಕ್‌ನೆಸ್.‌. ಇಂಥದ್ದೊಂದು ಟೈಟಲ್‌ನೊಂದಿಗೆ ಭಾವನಾತ್ಮಕ ಚಿತ್ರವೊಂದು ತೆರೆಗೆ ಬರೋಕೆ ಸಿದ್ಧವಾಗಿದೆ. ಚಿತ್ರದ ಟೈಟಲ್‌ ಅಪ್ಪ-ಮಗಳ ಪವಿತ್ರ ಬಂಧಕ್ಕೆ ಸೇತುವೆಯಾದರೆ, ಅ ಕಲರ್‌ಫುಲ್‌ ಡಾರ್ಕ್‌ನೆಸ್‌ ಅನ್ನೋ ಅಡಿ ಬರಹ, ಈ ಚಿತ್ರದಲ್ಲಿ ಬರುವ ಕೆಲ ಮನಕಲುಕುವ ಸನ್ನಿವೇಶಗಳನ್ನು ರಿಫ್ಲೆಕ್ಟ್‌ ಮಾಡುತ್ತೆ.

ಈಗಾಗಲೇ, ಹಲವಾರು ಸಿನಿಮಾ, ಸೀರಿಯಲ್ಸ್‌, ವೆಬ್‌ ಸಿರೀಸ್‌, ಜಾಹೀರಾತು ಸೇರಿದಂತೆ ಹದಿನೆಂಟಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿರೋ ಫೇಮಸ್‌ ಚೈಲ್ಡ್‌ ಆರ್ಟಿಸ್ಟ್‌ ಸುಪ್ರಿತಾ ರಾಜ್‌, ಮಗಳೇ ಚಿತ್ರದ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಿರುವ ಆಧ್ಯ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ.

ಅಂದಹಾಗೆ, ಆಧ್ಯ ಚಿತ್ರದಲ್ಲಿ ಹೈಸ್ಕೂಲ್ ಸ್ಟೂಡೆಂಟ್‌ ಆಗಿರ್ತಾಳೆ. ತನ್ನ ಅಪ್ಪ ಸುಬ್ಬುನೇ ಈಕೆಯ ಪುಟ್ಟ ಪ್ರಪಂಚ. ಇವರಿಬ್ಬರ ಬಾಂಡಿಂಗ್‌, ಸೃಷ್ಠಿಯೇ ನಾಚುವಷ್ಟು ಸ್ಟ್ರಾಂಗ್‌ ಆಗಿರುತ್ತೆ. ಸುಬ್ಬು ಹೆಂಡತಿ, ಅಂದ್ರೆ ಆಧ್ಯಾಳ ಅಮ್ಮ ಗೀತಾ, ಯೌವನದಲ್ಲಿ ಬೇರೊಬ್ಬನನ್ನ ಇಷ್ಟಪಟ್ಟಿರ್ತಾಳೆ. ಆದ್ರೆ, ಕಾರಣಾಂತರದಿಂದ ಸುಬ್ಬುನನ್ನು ಮದುವೆಯಾಗ್ತಾಳೆ. ಹೀಗಾಗಿ, ಆಕೆಗೆ ಸುಬ್ಬು ಮತ್ತು ಆಧ್ಯ ಇಬ್ರೂ ಇಷ್ಟ ಆಗ್ತಿರಲ್ಲ. ಆಧ್ಯಾಳಿಗೆ ತಿಳುವಳಿಕೆ ಬಂದಂತೆ, ಅಪ್ಪ-ಅಮ್ಮನ ನಡುವೆ ಯಾವ್ದೂ ಸರಿ ಇಲ್ಲ. ಅಮ್ಮನಿಗೆ ತನ್ನ ಮೇಲೆ ಕಾಳಜಿಯೇ ಇಲ್ಲ ಅನ್ನೋದು ಅರಿವಾಗಿ, ಅಪ್ಪನಿಗೆ ಹೆಚ್ಚು ಅಂಟಿಕೊಳ್ಳುತ್ತಾ ಬೆಳೀತಾಳೆ. ಒಂದು ದಿನ ಆಧ್ಯಾಳ ಅಮ್ಮನಿಗೆ ತನ್ನ ತಪ್ಪಿನ ಅರಿವಾಗಿ, ಗಂಡ ಮತ್ತು ಮಗಳನ್ನು ಮರಳಿ ಪಡೆಯೋಕೆ ಪ್ರಯತ್ನಿಸಿದಾಗ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ? ಕೊನೆಗೆ ಮೂವರೂ ಒಂದಾಗ್ತಾರಾ, ಇಲ್ವಾ ಅನ್ನೋದೇ ಚಿತ್ರದ ತಿರುಳು.

ನಿರ್ದೇಶಕ ದೇವೇಂದ್ರ ಬಡಿಗೇರ್‌ ಅವರ “ರುದ್ರಿ” ಚಿತ್ರಕ್ಕೆ ಸಹ ಸಿರ್ದೇಶಕರಾಗಿ ಕೆಲಸ ಮಾಡಿರುವ ಸೋಮು ಕೆಂಗೇರಿ ಸಾರಥ್ಯದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ “ಮಗಳೇ” ಚಿತ್ರಕ್ಕೆ ಹಾರ್ಟ್‌ ಟಚಿಂಗ್‌ ಮ್ಯೂಸಿಕ್‌ ಕಂಪೋಸ್ ಮಾಡಿದ್ದಾರೆ ಎಬಿಎಂ. ಕ್ಯಾಮೆರಾ ವರ್ಕ್‌ ರೇ.ನು ಸೋಮ್‌ ಅವ್ರದ್ದಾಗಿದ್ದರೆ, ಕತ್ತರಿ ಪ್ರಯೋಗ ಮಾಡಿರುವವರು ವೀರ ಮದಕರಿ, ಈ ಬಂಧನ, ಮಠ, ನೆನಪಿರಲಿಯಂತಹ ಯಶಸ್ವೀ ಚಿತ್ರಗಳಿಗಾಗಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ್ನನು ಮುಡಿಗೇರಿಸಿಕೊಂಡಿರೋ ಬಿಎಸ್‌ ಕೆಂಪರಾಜು.

ಪ್ರವೀಣ್‌ ಬಿಎಲ್‌ ಮಗಳೇ ಚಿತ್ರಕ್ಕೆ ವಿಟಾಮಿನ್‌ ಎಂ ಸುರಿದ್ದು, ಗುರುರಾಜ್‌ ಶೆಟ್ಟಿ, ಗೀಷ್ಮಾ ಶ್ರೀಧರ್,  ಬಿಂದು ರಕ್ಷಿದಿ, ಭೀಶಣ್‌ ಶೆಟ್ಟಿ ಮೊದಲಾದ ಕಲಾವಿದರು ಅದ್ಭುತವಾಗಿ ಅಭಿನಯಿಸಿರೋ ಮಗಳೇ ಚಿತ್ರ ಇದೇ ಏಪ್ರಿಲ್‌ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.